AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Kindness Day 2025: ಬದುಕಿನಿಂದ ಮರೆಯಾಗದಿರಲಿ ದಯೆ, ಮಾನವೀಯ ಗುಣ

ಇಂದಿನ ದಿನಗಳಲ್ಲಿ ಮನುಷ್ಯ ದಯೆ, ಮಾನವೀಯ ಗುಣಗಳನ್ನು ಮರೆತು ವರ್ತಿಸುತ್ತಿದ್ದಾನೆ. ದಯೆ ಗುಣ ಇಲ್ಲದ ಆತನಲ್ಲಿ ಎಷ್ಟೇ ದುಡ್ಡು, ಶ್ರೀಮಂತಿಕೆ ಇದ್ದರೂ ಏನು ಪ್ರಯೋಜನವಿಲ್ಲ. ಆದರೆ ದಯೆಯೆಂಬ ಸಣ್ಣ ಕ್ರಿಯೆ ಇತರರ ಮೊಗದಲ್ಲಿ ನಗು ಮೂಡಿಸುವುದರ ಜೊತೆಗೆ, ನಿಮ್ಮೊಳಗೂ ಸಕಾರಾತ್ಮಕತೆಯನ್ನು ಹೆಚ್ಚುತ್ತದೆ. ಒಟ್ಟಾರೆಯಾಗಿ ದಯೆಯೆಂಬ ದಾರದಿಂದ ಮಾನವೀಯತೆಯನ್ನು ಒಂದುಗೂಡಿಸಲು ಸಾಧ್ಯ. ದಯೆಯ ಈ ಮಹತ್ವವನ್ನು ಸಾರಲು ಪ್ರತಿವರ್ಷ ನವೆಂಬರ್‌ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ.

World Kindness Day 2025: ಬದುಕಿನಿಂದ ಮರೆಯಾಗದಿರಲಿ ದಯೆ, ಮಾನವೀಯ ಗುಣ
ವಿಶ್ವ ದಯೆ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on: Nov 13, 2025 | 9:56 AM

Share

ದಯೆಯೇ ಧರ್ಮದ ಮೂಲ ಎಂಬ ಮಾತೊಂದಿದೆ.  ದಯೆ (Kindness), ಕರುಣೆ, ಅನುಂಕಪ ಇವೆಲ್ಲವೂ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಈ ಗುಣಗಳೇ ಮನುಷ್ಯ ಸಂಬಂಧಗಳನ್ನು ಪರಸ್ಪರ ಬೆಸೆಯುತ್ತದೆ.  ಆದರೆ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಮನುಷ್ಯನದಲ್ಲಿ ದಯೆ, ಅನುಕಂಪ, ಮಾನವೀಯತೆ ಎಂಬುದು ಮರೆಯಾಗಿ ಹೋಗಿದೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಅಮಾನವೀಯ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಲು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಸಲುವಾಗಿ ನವೆಂಬರ್‌ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

ವಿಶ್ವ ದಯೆಯ ದಿನದ ಇತಿಹಾಸವೇನು?

ವಿಶ್ವ ದಯೆ ದಿನವನ್ನು 1998 ರಲ್ಲಿ ಜಪಾನ್‌ನ ವಿಶ್ವ ದಯೆ ಚಳುವಳಿಯು ಸ್ಥಾಪಿಸಿತು. ದಯೆಯ ಕ್ರಿಯೆಗಳ ಮೂಲಕ ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುವುದು ಮತ್ತು ಸಮಾಜದಲ್ಲಿ ಸಕಾರಾತ್ಮಕತೆಯನ್ನು ಹರಡುವುದು ಇದರ ಧ್ಯೇಯವಾಗಿತ್ತು. ಇಂದು, 30 ಕ್ಕೂ ಹೆಚ್ಚು ದೇಶಗಳು ಈ ಆಂದೋಲನದ ಭಾಗವಾಗಿದ್ದು, ದಯೆಯೆಂಬ ಸಾಮಾನ್ಯ ದಾರದ ಮೂಲಕ ಮಾನವೀಯತೆಯನ್ನು ಒಂದುಗೂಡಿಸಲು ಕೆಲಸ ಮಾಡುತ್ತಿವೆ.

ವಿಶ್ವ ದಯೆ ದಿನದ ಮಹತ್ವವೇನು?

  • ವಿಶ್ವ ದಯೆಯ ದಿನವು ದಯೆಯ ಸಕಾರಾತ್ಮಕ ಪರಿಣಾಮಗಳ ಮೇಲೆ ಬೆಳಕು ಚೆಲ್ಲುವುದರಿಂದ ಅದು ಹೆಚ್ಚಿನ ಮಹತ್ವವನ್ನು ಹೊಂದಿದೆ.
  • ನಕಾರಾತ್ಮಕತೆ ಮತ್ತು ಸಂಘರ್ಷಗಳಿಂದ ತುಂಬಿರುವ ಜಗತ್ತಿನಲ್ಲಿ, ದಯೆಗೆ ಮೀಸಲಾದ ದಿನವು ಜನರು, ಸಮಾಜ ಮತ್ತು ಸಮುದಾಯವು ಒಳ್ಳೆಯ ಕೆಲಸಗಳನ್ನು ಮಾಡಲು ಮತ್ತು ಎಲ್ಲರಿಗೂ ದಯೆ ತೋರಲು ಪ್ರೋತ್ಸಾಹಿಸುತ್ತದೆ.
  • ದಯೆ ಎಂದರೆ ಕೇವಲ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಲ್ಲ, ಯಾರೊಂದಿಗಾದರೂ ನಗುವುದು ಅಥವಾ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಆಗಿದೆ. ದಯೆ ಇತರರಿಗೆ ಪ್ರಯೋಜನವನ್ನು ನೀಡುವುದಲ್ಲದೆ ನಮ್ಮ ಸಂತೋಷ ಮತ್ತು ಮನಸ್ಸಿನ ಶಾಂತಿಯನ್ನು ಹೆಚ್ಚಿಸುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ತೋರಿಸುತ್ತದೆ.

ಇದನ್ನೂ ಓದಿ: ಶಿಕ್ಷಣವು ಜೀವನವನ್ನು ಬದಲಾಯಿಸುವ ಶಕ್ತಿಶಾಲಿ ಅಸ್ತ್ರ

ದಯೆಯ ಸಣ್ಣ ಉಪಕ್ರಮಗಳು:

  • ವಯಸ್ಸಾದ ವ್ಯಕ್ತಿಗೆ ರಸ್ತೆ ದಾಟಲು ಸಹಾಯ ಮಾಡುವುದು
  • ಅಗತ್ಯವಿರುವವರಿಗೆ ಆಹಾರ ಅಥವಾ ಬಟ್ಟೆ ನೀಡುವುದು.
  • ಗಿಡಗಳನ್ನು ನೆಡುವುದು
  • ದುಃಖಿತ ವ್ಯಕ್ತಿಗೆ ಮಾನಸಿಕ ಬೆಂಬಲ, ಸ್ಥೈರ್ಯ ನೀಡುವುದು
  • ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ನಿಮ್ಮ ಸುತ್ತಮುತ್ತ ಸಕಾರಾತ್ಮಕ ಭಾವನೆಗಳನ್ನು ಹರಡುವುದು

ನಿಮ್ಮ ಈ ಸಣ್ಣ ಹೆಜ್ಜೆಗಳು ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ