ಪ್ರತೀ ವರ್ಷ ನವೆಂಬರ್ 8ನೇ ತಾರೀಕಿನಂದು ರೆಡಿಯೋಗ್ರಫಿ ದಿನವನ್ನು ಆಚರಿಸಲಾಗುತ್ತದೆ. ರೇಡಿಯೋಗ್ರಫಿ ಅಂದರೆ ಎಕ್ಸ್- ರೇ. ವಿಕಿರಣಗಳನ್ನು ಹಾಯಿಸಿ ನಮ್ಮ ದೇಹದ ಒಳಭಾಗದ ಚಿತ್ರಣವನ್ನು ನೋಡಬಹುದು. ಇದರಿಂದ ದೇಹದ ಒಳಭಾಗದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದು. ವಿಭಿನ್ನ ಅಂಗಾಂಶಗಳಿಗೆ ಬೇರೆ ರೀತಿಯ ಪ್ರಮಾಣದಲ್ಲಿ ವಿಕಿರಣಗಳನ್ನು ಸೆಳೆದುಕೊಳ್ಳುವ ಮೂಲಕ ಕಪ್ಪು ಬಿಳಿ ಬಣ್ಣದ ಚಿತ್ರದ ರೂಪದಲ್ಲಿ ನಾವು ನೋಡಬಹುದು. ಅದನ್ನು ಎಕ್ಸ್-ರೇ ಅಥವಾ ರೆಡಿಯೋಗ್ರಫಿ ಎಂದು ಕರೆಯಲಾಗುತ್ತದೆ.
ಎಕ್ಸರೆಗಳ ಬಳಕೆಯೆ ಮೂಳೆ ಮುರಿತಗಳನ್ನು ಪರಿಶೀಲಿಸುವುದು. ಆದರೆ ಕ್ಷ-ಕಿರಣಗಳನ್ನು ಇತರ ವಿಧಾನಗಳಲ್ಲಿಯೂ ಬಳಸಲಾಗುತ್ತಿದೆ. ಅಂದರೆ ನ್ಯಮೋನಿಯಾವನ್ನು ಗುರುತಿಸಲು ಎದೆಯ ಕ್ಷ-ಕಿರಣ, ಸ್ತನ ಕ್ಯಾನ್ಸರ್ ತಿಳಿಯಲು ಮ್ಯಾಮಗ್ರಾಮ್ಗಳು ಕ್ಷ- ಕಿರಣಗಳು ಹೀಗೆ ಎಕ್ಸ-ರೇಯಲ್ಲಿ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ರೇಡಿಯೊಗ್ರಫಿ ಬಗ್ಗೆ ಅಥವಾ ಅದರ ಚಿಕಿತ್ಸೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ವೃತ್ತಿಗೆ ಸಹಾಯಕವಾಗಿ ಸ್ವತಂತ್ರ ಉದ್ದಿಮೆಯಾಗಿ ಬೆಳೆದಿರುವ ರೆಡಿಯೋಗ್ರಫಿ ಆರೋಗ್ಯ ಸೇವೆಗೆ ಉತ್ತಮ ಕೊಡುಗೆಯಾಗಿದೆ.
ಮೊದಲ ವಿಶ್ವ ರೆಡಿಯೋಗ್ರಫಿ ದಿನವನ್ನು 2012ರಲ್ಲಿ ಆಚರಿಸಲಾಯಿತು. ಯುರೋಪಿಯನ್ ಸೊಸೈಟಿ ಆಫ್ ರೇಡಿಯಾಲಜಿ (ESR), ರೇಡಿಯಾಲಾಜಿಕಲ್ ಸೊಸೈಟಿ ಆಫ್ ನಾರ್ತ್ ಅಮೆರಿಕಾ (RSNA) ಮತ್ತು ಅಮೆರಿಕನ್ ಕಾಲೇಜ್ ಆಫ್ ರೆಡಿಯಾಲಜಿ (ACR) ಒಗ್ಗೂಡಿ ಈ ದಿನವನ್ನು ಆಚರಿಸಿದರು. ಜಾಗತಿಕವಾಗಿ ಅಮೆರಿಕ ಸೊಸೈಟಿ ಆಫ್ ರೆಡಿಯೋಗ್ರಾಫರ್ಸ್ (SoR) ಮತ್ತು ನೈಜೀರಿಯಾದಲ್ಲಿ ರೇಡಿಯೋಗ್ರಫರ್ಗಳ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳು ಈ ದಿನವನ್ನು ಆಚರಿಸುತ್ತವೆ.
ಇದನ್ನೂ ಓದಿ:
Deepavali 2021: ಕಾಶ್ಮೀರದ ಗಡಿಯಲ್ಲಿ ಸೈನಿಕರೊಂದಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆ