ಭೂಮಿಯ ಮೇಲಿನ ಹಳೆಯ ಪಕ್ಷಿ ಪ್ರಭೇದಗಳಲ್ಲಿ ಗುಬ್ಬಚ್ಚಿ (Sparrow) ಯೂ ಒಂದು. ಇದು ಮನುಷ್ಯರ ನಡುವೆ ವಾಸಿಸಲು ಇಷ್ಟ ಪಡುವ ಪಕ್ಷಿ ಎನ್ನಬಹುದು. ಹಿಂದೆಲ್ಲಾ ಮನೆಯ ಹಂಚಿನಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಮನೆಯ ಸದಸ್ಯರೆನ್ನುವಂತೆ ಇದ್ದವು. ಆದರೆ ಇದೀಗ ಗುಬ್ಬಚ್ಚಿಗಳು ಅಳಿವಿನಂಚಿಗೆ ತಲುಪಿದೆ. ಭಾರತ ಸೇರಿದಂತೆ ಪ್ರಪಂಚದಾದಂತ್ಯ ಈ ಗುಬ್ಬಚ್ಚಿಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಕಣ್ಮರೆಯಾಗುವ ಈ ಗುಬ್ಬಚ್ಚಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುವುದು ನಿಜಕ್ಕೂ ಶ್ಲಾಘನೀಯ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನ (World Sparrow Day) ವನ್ನು ಆಚರಿಸುತ್ತಾ ಬರಲಾಗುತ್ತಿದೆ.
ನಾಸಿಕ್ ನಿವಾಸಿ ಮೊಹಮ್ಮದ್ ದಿಲಾವರ್ ಅವರು ಫಾರೆವರ್ ಸೊಸೈಟಿ ಸ್ಥಾಪಿಸಿದರು. ನೇಚರ್ ಫಾರೆವರ್ ಸೊಸೈಟಿ ಮತ್ತು ಇಕೋಸಿಸ್ ಆಕ್ಷನ್ ಫೌಂಡೇಶನ್ ಸಹಯೋಗದೊಂದಿಗೆ 2010ರಂದು ಮೊದಲ ಬಾರಿಗೆ ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳ ಸಂತತಿಗಳನ್ನು ಉಳಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
ಪಕ್ಷಿ ಪ್ರಬೇಧಗಳಲ್ಲಿ ಒಂದಾದ ಈ ಗುಬ್ಬಚ್ಚಿಗಳು ಕ್ರಮೇಣವಾಗಿ ಅಳಿವಿನಂಚಿಗೆ ಸಾಗುತ್ತಿವೆ. ನಗರೀಕರಣ, ಮೊಬೈಲ್ ಟವರ್ ಗಳ ಹೆಚ್ಚಳ ಹಾಗೂ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂತತಿಗಳು ಕಣ್ಮರೆಯತ್ತ ಸಾಗುತ್ತಿವೆ. ಹೀಗಾಗಿ ಎಲ್ಲೋ ಒಂದೆರಡು ಗುಬ್ಬಚ್ಚಿಗಳನ್ನು ಮಾತ್ರ ನೋಡುವಂತಾಗಿದೆ. ಹೀಗಾಗಿ ಈ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪ್ರಬೇಧಗಳ ಸಂರಕ್ಷಣೆ ಹಾಗೂ ಅವುಗಳ ಸಂತತಿ ಉಳಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಗುಬ್ಬಚ್ಚಿ ದಿನ ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಗುಬ್ಬಚ್ಚಿಗಳ ಸಂತತಿಗಳ ರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮ ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತದೆ.
ಮತ್ತಷ್ಟು ಓದಿ: Personality Test : ನಿಮ್ಮ ಹೆಸರಿನ ಕೊನೆಯ ಅಕ್ಷರ ಯಾವುದು? ಹೇಳುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ