Vijaya Bhaskar’s Death Anniversary: ಹಾಡೊಂದು ಹಾಡುವೆ ನೀ ಕೇಳು ಮಗುವೆ

Music Direction : ಈ ಸಿನಿಮಾದ ಲಿರಿಕ್ ರೈಟರ್ ಜಯಗೋಪಾಲ್ ಮತ್ತು ವಿಜಯ ಭಾಸ್ಕರ್ ಅಡುಗೆ ಮನೆಯಲ್ಲಿ ಕಾಫಿ ಮಾಡಲು ಹೋದರು. ಅಲ್ಲೇ ಲೋಟ ಮತ್ತು ತಟ್ಟೆ ಬಳಸಿ ವಿಜಯ ಭಾಸ್ಕರ್ ಟ್ಯೂನ್ ಮಾಡಿದರೆ ಜಯಗೋಪಾಲ್ ಹಾಡು ಬರೆದರು.

Vijaya Bhaskar’s Death Anniversary: ಹಾಡೊಂದು ಹಾಡುವೆ ನೀ ಕೇಳು ಮಗುವೆ
ಚಲನಚಿತ್ರ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಮತ್ತು ಹಿರಿಯ ಪರ್ತಕರ್ತ ಎನ್. ಎಸ್. ಶ್ರೀಧರಮೂರ್ತಿ
Follow us
ಶ್ರೀದೇವಿ ಕಳಸದ
|

Updated on:Mar 03, 2022 | 1:17 PM

ವಿಜಯ ಭಾಸ್ಕರ್ | Vijaya Bhaskar (1931-2002) : ತಂದೆಗೇನೋ ಮಗ ಹ್ಯಾಗೋ ಹೆಸರು ಮಾಡ್ತಾ ಇದ್ದಾನೆ. ಎಲ್ಲಿದ್ದರೆ ಏನು? ಕೈ ತುಂಬಾ ದುಡೀತಾನೋ ಇದ್ದಾನೆ ಎನ್ನುವ ನೆಮ್ಮದಿ. ಆದರೆ ತಾಯಿ ಮಗನನ್ನು ಬಿಟ್ಟಿರೋಕೆ ಆಗದೆ ಚಡಪಡಿಸ್ತಾ ಇದ್ದರು. ಬೆಳೆದು ನಿಂತಿರೋ ತಂಗಿಯರು. ಅವರ ಮದ್ವೆ ಮಾಡ್ಬೇಕಾದ ಇವನು ಅಲ್ಲಿ ದೂರದ ಮುಂಬೈಗೆ ಹೋಗಿ ಕುಳಿತರೆ ಹೇಗೆ ಅನ್ನೋದು ಅವರ ಅಳಲು. ಅದಕ್ಕೆ ಸರಿಯಾಗಿ ಮುಂಬೈನಲ್ಲಿ ಪರಿಚಿತರಾಗಿದ್ದ ಬಿ. ಆರ್. ಕೃಷ್ಣಮೂರ್ತಿ ಕನ್ನಡದಲ್ಲಿ ಒಂದು ಸಿನಿಮಾ ಮಾಡ್ತಾ ಇದ್ದೀನಿ ನಿಮ್ ಹೆಲ್ಪ್ ಬೇಕು ಅಂತ ಕೇಳಿದರು. ವಿಜಯ ಭಾಸ್ಕರ್ ಅವರಿಗೂ ಕನ್ನಡದಲ್ಲಿ ಒಂದು ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇತ್ತು. ಹೀಗಾಗಿ ಒಪ್ಪಿ ಕೊಂಡು ಬಂದರು. ‘ಶ್ರೀರಾಮಪೂಜಾ’ ಸಿನಿಮಾ ಹೆಸರು. ಆಗ ಮದ್ರಾಸಿನಲ್ಲಿ ಸೌತ್ ಇಂಡಿಯಾದ ನಾಲ್ಕೂ ಭಾಷೆಗಳ ಕಂಪೋಸಿಂಗ್ ನಡೀತಾ ಇತ್ತು. ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದ ವಿಜಯಭಾಸ್ಕರ್‌ಗೆ ಈ ಆರ್ಕೆಸ್ಟ್ರಾ ಜೊತೆ ಕೆಲಸ ಮಾಡೋದೇ ಕಷ್ಟ ಆಯತು. ಎನ್. ಎಸ್. ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತ

*

(ಭಾಗ 2)

ಜೊತೆಗೆ ಈ ಆರ್ಕೆಸ್ಟ್ರಾದವರಿಗೆ ಕನ್ನಡ ಬೇರೆ ಸರಿಯಾಗಿ ಬರ‍್ತಾ ಇರಲಿಲ್ಲ. ಬರೀ ಬಾಲಿವುಡ್ ಟ್ಯೂನ್ ಕಾಪಿ ಮಾಡ್ತಾ ಇದ್ದರು. ಕೊನೆಗೆ ಅವರ ಜೊತೆ ಒದ್ದಾಡೋಕೆ ಆಗದೆ ಮೈಸೂರಿನ ಜೈಮಾರುತಿ ಆರ್ಕೆಸ್ಟ್ರಾದವರನ್ನೇ ಮದ್ರಾಸಿನ ರೇವತಿ ಸ್ಟುಡಿಯೋಕ್ಕೆ ಕರೆದು ಕೊಂಡು ಹೋದ ವಿಜಯ ಭಾಸ್ಕರ್ ತಮಗೆ ಬೇಕಾದ ಎಫೆಕ್ಟ್ ಪಡೆದುಕೊಂಡರು. ಇದಾದ ಮೇಲೆ 1956ರಲ್ಲಿ ಅವರಿಗೆ ‘ಭಾಗ್ಯಚಕ್ರ’ ಅನ್ನೋ ಸಿನಿಮಾ ಸಿಕ್ಕಿತು. ಇದಕ್ಕೆ ವಿಜಯ ಭಾಸ್ಕರ್ ಬರೀ ಸಂಗೀತ ಮಾತ್ರ ಕೊಡ್ಲಿಲ್ಲ ಸ್ಕೀನ್ ಪ್ಲೇ ಕೂಡ ಬರೆದರು. ಮುಂಬೈನಲ್ಲಿ ಕೆಲಸ ಮಾಡಿದ್ದರಿಂದ ಅವರಿಗೆ ಶಾಟ್ ಡಿವಿಜನ್  ಗೊತ್ತಿರ್ತಾ ಇತ್ತು. ಅದನ್ನ ಕನ್ನಡದಲ್ಲಿ ಪ್ರಯೋಗಿಸಿದ ಮೊದಲಿಗರು ಅವರು.

ಈ ಎರಡು ಸಿನಿಮಾಗಳು ಹಿಟ್ ಆಗದಿದ್ದರೂ ವಿಜಯ ಭಾಸ್ಕರ್ ಕನ್ನಡಕ್ಕೆ ಸಿಕ್ಕಿದರು. ಆಗ ಕನ್ನಡದಲ್ಲಿ ತಯರಾಗ್ತಾ ಇದ್ದ ಸಿನಿಮಾಗಳೇ ಕಡಿಮೆ. ಹೀಗಿದ್ದರೂ ಅವರು ಇಲ್ಲಿಯೇ ಉಳಿದರು. ‘ರಾಣಿ ಹೊನ್ನಮ್ಮ’ ಸಿನಿಮಾಕ್ಕೆ ಕು.ರ.ಸೀ ಮಲೇಷಿಯಾದಿಂದ ಒಂದು ಟ್ಯೂನ್ ತಂದಿದ್ದರು. ಅದಕ್ಕೆ ಹೊಸ ರೂಪ ಕೊಟ್ಟು ವಿಜಯಭಾಸ್ಕರ್ ಬಳಸಿದರು. ಅಲ್ಲಿಯವರೆಗೂ ಕನ್ನಡದಲ್ಲಿ ಯಾರೂ ಗಿಟಾರ್ ಬಳಸಿರಲಿಲ್ಲ. ಈ ಹಾಡಿನಲ್ಲಿ ಬಳಸಿದರು. ‘ಹಾರುತ ದೂರ ದೂರ’ ತುಂಬಾ ಚೆನ್ನಾಗಿ ಮೂಡಿ ಬಂದು ಫೇಮಸ್ ಆಯಿತು. ವಿಜಯಭಾಸ್ಕರ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಸಖತ್ ಫೇಮಸ್ ಮಾಡಿದ ಸಿನಿಮಾ ಎಂದರೆ ‘ಸಂತ ತುಕಾರಾಂ’ ಈ ಸಿನಿಮಾದ ಹಾಡುಗಳೆಲ್ಲಾ ಫೇಮಸ್ ಆದವು. ಅದರಲ್ಲೂ ‘ಜಯತು ಜಯ ವಿಠಲ’ ಮತ್ತು ‘ಬೇಡ ಕೃಷ್ಣ ರಂಗಿನಾಟ’ ಇವತ್ತಿಗೂ ಫೇಮಸ್ ಆಗಿದೆ.

ಇದನ್ನೂ ಓದಿ : Chi. Udayashankar’s Birth Anniversary: ‘ದಪ್ಪ ಅಂದ್ರೆ ಇಷ್ಟು ದಪ್ಪ ಅಲ್ಲಪ್ಪ, ಈಗ ಘಟೋದ್ಗಜನ ಪಾತ್ರ ಕೊಡಬಹುದು ನಿನಗೆ’

ಕಡಿಮೆ ವಾದ್ಯಗಳನ್ನು ಇಟ್ಟುಕೊಂಡು ವಿಜಯಭಾಸ್ಕರ್ ಬಹಳ ಅದ್ಭುತವಾದ ಟ್ಯೂನ್ ಮಾಡ್ತಾ ಇದ್ದರು. ‘ನಾಂದಿ’ ಸಿನಿಮಾದ ಹಾಡು ಕಂಪೋಸಿಂಗ್ ನಡೀತಾ ಇತ್ತು. ಆಗೆಲ್ಲಾ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾತ್ರ. ಕಂಪೋಸಿಂಗ್ ಸಿನಿಮಾಕ್ಕೆ ಎಂದು ತೆಗೆದುಕೊಂಡ ಬಾಡಿಗೆ ಮನೆಯಲ್ಲಿ ನಡೀತಾ ಇತ್ತು. ಈ ಸಿನಿಮಾದ ಲಿರಿಕ್ ರೈಟರ್ ಜಯಗೋಪಾಲ್ ಮತ್ತು ವಿಜಯ ಭಾಸ್ಕರ್ ಅಡುಗೆಮನೆಯಲ್ಲಿ ಕಾಫಿ ಮಾಡಲು ಹೋದರು. ಅಲ್ಲೇ ಲೋಟ ಮತ್ತು ತಟ್ಟೆ ಬಳಸಿ ವಿಜಯ ಭಾಸ್ಕರ್ ಟ್ಯೂನ್ ಮಾಡಿದರೆ ಜಯಗೋಪಾಲ್ ಹಾಡು ಬರೆದರು. ಹೀಗೆ ಕ್ರಿಯೇಟ್ ಆದ ‘ಹಾಡೊಂದು ಹಾಡುವೆ ನೀ ಕೇಳು ಮಗುವೆ’ ಎರಡೇ ನಿಮಿಷದಲ್ಲಿ ರೆಡಿ ಆದರೂ ಐವತ್ತು ವರ್ಷ ಕಳೆದ ಮೇಲೆ ಕೂಡ ಪಾಪ್ಯೂಲರ್ ಆಗಿದೆ. ‘ಮಣ್ಣಿನ ಮಗ’ ಸಿನಿಮಾದಲ್ಲಿ ಒಂದು ಸಣ್ಣ ಸೈಲೆನ್ಸ್ ಕೊಟ್ಟು ‘ಇದೇನು ಸಭ್ಯತೆ ಇದೇನು ಸಂಸ್ಕೃತಿ’ ಸಾಂಗ್ ಕ್ರಿಯೇಟ್ ಮಾಡಿದರು. ಅದೂ ಕೂಡ ಪಾಪ್ಯೂಲರ್ ಆಯಿತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ) 

ಹಿಂದಿನ ಭಾಗ : Vijaya Bhaskar’s Death Anniversary: ವಿಜಯ ಭಾಸ್ಕರರನ್ನು ಸಂಗೀತದೆಡೆ ಸೆಳೆದ ದೇವಸ್ಥಾನದ ಲೆಗ್ ಹಾರ್ಮೋನಿಯಂ 

Published On - 12:16 pm, Thu, 3 March 22

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ