10 ಲಕ್ಷ ಉದ್ಯೋಗ, 20 ಲಕ್ಷ ಉದ್ಯೋಗಾವಕಾಶ: ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಣೆ
Nitish Kumar ರಾಜ್ಯದ ಮಕ್ಕಳಿಗಾಗಿ ನಾವು ಎಷ್ಟು ಸಾಧ್ಯವೋ ಅಷ್ಟು ಉದ್ಯೋಗ ಮತ್ತು ಉದ್ಯೋಗವಕಾಶಗಳನ್ನು ರಾಜ್ಯದ ಹೊರಗೆ ಮತ್ತು ಒಳಗೆ ಸೃಷ್ಟಿಸುತ್ತೇವೆ. ನಾವು ಇದರಲ್ಲಿ ಯಶಸ್ವಿಯಾದರೆ ಇದನ್ನು ನಾವು 20 ಲಕ್ಷಕ್ಕೆ ಏರಿಸಲಿದ್ದೇವೆ.
ಪಟನಾ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav)ರಾಜ್ಯದ ಯುವ ಜನತೆಗೆ 10 ಲಕ್ಷ ಉದ್ಯೋಗ ನೀಡುವುದಾಗಿ ಘೋಷಿಸಿದ್ದಕ್ಕೆ ಬೆಂಬಲ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಇಂದು (ಸೋಮವಾರ) ಉದ್ಯೋಗಾವಕಾಶಗಳನ್ನು ದುಪ್ಪಟ್ಟು ಮಾಡುವುದಾಗಿ ಘೋಷಿಸಿದ್ದಾರೆ. ಪಟನಾದ ಗಾಂಧಿ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ (Independence Day) ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್ ಕುಮಾರ್ ( ರಾಷ್ಟ್ರೀಯ ಜನತಾ ದಳ ಮತ್ತು ಜನತಾ ದಳ (ಯುನೈಟೆಡ್) ಸಮ್ಮಿಶ್ರ ಸರ್ಕಾರವು ಕನಿಷ್ಠ 10 ಲಕ್ಷ ಉದ್ಯೋಗ ಸೃಷ್ಠಿಯೊಂದಿಗೆ ವಿವಿಧ ವಲಯಗಳಲ್ಲಿ ಹೆಚ್ಚುವರಿ 10 ಲಕ್ಷ ಉದ್ಯೋಗಾವಕಾಶ ನೀಡಲಾಗುವುದು ಎಂದಿದ್ದಾರೆ. ರಾಜ್ಯದ ಮಕ್ಕಳಿಗಾಗಿ ನಾವು ಎಷ್ಟು ಸಾಧ್ಯವೋ ಅಷ್ಟು ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ರಾಜ್ಯದ ಹೊರಗೆ ಮತ್ತು ಒಳಗೆ ಸೃಷ್ಟಿಸುತ್ತೇವೆ. ನಾವು ಇದರಲ್ಲಿ ಯಶಸ್ವಿಯಾದರೆ ಇದನ್ನು ನಾವು 20 ಲಕ್ಷಕ್ಕೆ ಏರಿಸಲಿದ್ದೇವೆ. ಇದನ್ನು ಈಡೇರಿಸಲು ನಾವು ಎಲ್ಲ ರೀತಿಯಲ್ಲಿಯೂ ಪ್ರಯತ್ನಿಸುತ್ತೇವೆ ಎಂದು ನಿತೀಶ್ ಹೇಳಿದ್ದಾರೆ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪ್ರತಿಪಕ್ಷದಲ್ಲಿದ್ದಾಗ 2020 ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ 10 ಲಕ್ಷ ಉದ್ಯೋಗಗಳ ಚುನಾವಣಾ ಭರವಸೆಯ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಯುವ ಆರ್‌ಜೆಡಿ ನಾಯಕ ಈ ಹಿಂದೆ ತನ್ನ ಉದ್ಯೋಗ ಭರವಸೆಗೆ ಮುಖ್ಯಮಂತ್ರಿಯಿಂದ ಒಪ್ಪಿಗೆ ಸಿಕ್ಕಿದೆ ಎಂದು ಪ್ರತಿಪಾದಿಸಿದ್ದರು.
Today, CM Nitish Kumar ji made the historic announcement of providing 10 lakh jobs and this number will be increased to 20 lakh jobs. Putting an end to unemployment has been one of the major agendas for us: Bihar Deputy CM & RJD leader Tejashwi Yadav pic.twitter.com/egEbnWbFb2
— ANI (@ANI) August 15, 2022
ತಮ್ಮ ಭರವಸೆಯ ಬಗ್ಗೆ ಮುಖ್ಯಮಂತ್ರಿಯಿಂದ ಸ್ಪಷ್ಟವಾದ ಸಾರ್ವಜನಿಕ ಘೋಷಣೆಯ ನಂತರ ತೇಜಸ್ವಿ ಯಾದವ್, ಮುಖ್ಯಮಂತ್ರಿ ಮಾಡಿದ ಈ “ಬೃಹತ್ ಘೋಷಣೆ” ಮಾಧ್ಯಮಗಳು ಗಮನಹರಿಸಬೇಕಾದ “ನೈಜ ವಿಷಯ”. ಅದನ್ನು ಮಾಡಲು ಎರಡು ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Mon, 15 August 22