AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ ಚೋಳರ ಕಾಲದ ತಾಮ್ರ ಶಾಸನಗಳು!

11ನೇ ಶತಮಾನದ ಚೋಳರ ಕಾಲದ 21 ದೊಡ್ಡ ಹಾಗೂ 3 ಸಣ್ಣ ತಾಮ್ರದ ಶಾಸನಗಳು ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ. ನೆದರ್ಲ್ಯಾಂಡ್ಸ್ ಪ್ರಧಾನಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದನ್ನು ದೇಶದ ಹೆಮ್ಮೆಯ ಕ್ಷಣ ಎಂದು ಕರೆದಿದ್ದಾರೆ ಮತ್ತು ಲೈಡನ್ ವಿಶ್ವವಿದ್ಯಾಲಯಕ್ಕೆ ಧನ್ಯವಾದ ತಿಳಿಸಿ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ ಚೋಳರ ಕಾಲದ ತಾಮ್ರ ಶಾಸನಗಳು!
ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್ ಬರಲಿವೆ ಚೋಳರ ಕಾಲದ ತಾಮ್ರ ಶಾಸನಗಳು! Image Credit source: PM Narendra Modi X account
ಭಾವನಾ ಹೆಗಡೆ
|

Updated on:May 17, 2026 | 10:06 AM

Share

ನೆದರ್​ಲ್ಯಾಂಡ್ಸ್, ಮೇ 17: ಪ್ರತಿ ಭಾರತೀಯನೂ ಹೆಮ್ಮೆ ಪಡುವಂತಹ ಐತಿಹಾಸಿಕ ಕ್ಷಣವೊಂದಕ್ಕೆ ನೆದರ್ಲ್ಯಾಂಡ್ಸ್ ಸಾಕ್ಷಿಯಾಗಿದೆ. 11ನೇ ಶತಮಾನಕ್ಕೆ ಸೇರಿದ ಪ್ರಸಿದ್ಧ ಚೋಳ ಸಾಮ್ರಾಜ್ಯದ ತಾಮ್ರದ ಶಾಸನಗಳು (Copper Plates) ಸುದೀರ್ಘ ವರ್ಷಗಳ ನಂತರ ನೆದರ್ಲ್ಯಾಂಡ್ಸ್‌ನಿಂದ ಮತ್ತೆ ಭಾರತಕ್ಕೆ ಮರಳುತ್ತಿವೆ. ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅವರ ಸಮ್ಮುಖದಲ್ಲಿ ನಡೆದ ಈ ಐತಿಹಾಸಿಕ ಹಸ್ತಾಂತರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಎಲ್ಲಾ ಭಾರತೀಯರಿಗೂ ಅತ್ಯಂತ ಸಂತೋಷದ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ನೆದರ್ಲ್ಯಾಂಡ್ಸ್‌ನಿಂದ ಭಾರತಕ್ಕೆ ಚೋಳರ ಕಾಲದ ತಾಮ್ರ ಶಾಸನಗಳು ವಾಪಸ್ ಬರಲಿವೆ.
  • ತಮಿಳು ಭಾಷೆಯಲ್ಲಿರುವ ಈ ಶಾಸನಗಳು ಚೋಳರ ನೌಕಾ ಪರಾಕ್ರಮ ಸಾರುತ್ತವೆ.
  • ಶಾಸನಗಳನ್ನು ಸಂರಕ್ಷಿಸಿದ್ದ ಲೈಡನ್ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ.

ಚೋಳರ ತಾಮ್ರ ಶಾಸನಗಳ ವಿಶೇಷತೆಗಳು

ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಶಾಸನದ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಶಾಸನಗಳ ಸಂಗ್ರಹದಲ್ಲಿ ಒಟ್ಟು 21 ದೊಡ್ಡ ತಾಮ್ರದ ಫಲಕಗಳು ಮತ್ತು 3 ಸಣ್ಣ ಫಲಕಗಳಿವೆ. ಇವುಗಳನ್ನು ಕಂಚಿನ ಉಂಗುರದಿಂದ ಒಟ್ಟಿಗೆ ಜೋಡಿಸಲಾಗಿದ್ದು, ಅದರ ಮೇಲೆ ಚೋಳ ರಾಜವಂಶದ ರಾಜಮುದ್ರೆ ಇದೆ. ಈ ಶಾಸನಗಳಲ್ಲಿನ ಹೆಚ್ಚಿನ ಬರಹಗಳನ್ನು ವಿಶ್ವದ ಅತ್ಯಂತ ಸುಂದರವಾದ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯಲ್ಲಿ ಕೆತ್ತಲಾಗಿದೆ. ಇದರೊಂದಿಗೆ ಕೆಲವು ಭಾಗಗಳು ಸಂಸ್ಕೃತ ಭಾಷೆಯನ್ನೂ ಒಳಗೊಂಡಿವೆ ಎಂದಿದ್ದಾರೆ.

ಚೋಳ ಸಾಮ್ರಾಜ್ಯದ ಶ್ರೇಷ್ಠ ದೊರೆ ರಾಜರಾಜ ಚೋಳ I ಅವರು ನೀಡಿದ್ದ ಮೌಖಿಕ ಭರವಸೆಯನ್ನು, ಅವರ ಮಗನಾದ ಸಾಮ್ರಾಟ್ ರಾಜೇಂದ್ರ ಚೋಳ I ಅವರು ಈ ತಾಮ್ರದ ಶಾಸನಗಳ ಮೂಲಕ ಅಧಿಕೃತಗೊಳಿಸಿದ್ದರು. ಇವು ಚೋಳರ ಭವ್ಯ ಸಂಸ್ಕೃತಿ, ಆಡಳಿತ ಮತ್ತು ನೌಕಾಪಡೆಯ ಪರಾಕ್ರಮವನ್ನು ಜಗತ್ತಿಗೆ ಸಾರುತ್ತವೆ ಎಂದು ತಮ್ಮ ಪೋಸ್ಟ್​ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ನೆದರ್ಲ್ಯಾಂಡ್ಸ್ ಸರ್ಕಾರಕ್ಕೆ ಪ್ರಧಾನಿ ಧನ್ಯವಾದ

19ನೇ ಶತಮಾನದ ಮಧ್ಯಭಾಗದಿಂದ (1862) ಈ ಅಮೂಲ್ಯವಾದ ತಾಮ್ರದ ಶಾಸನಗಳನ್ನು ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಟ್ಟಿದ್ದ ನೆದರ್ಲ್ಯಾಂಡ್ಸ್ ಸರ್ಕಾರ ಮತ್ತು ವಿಶೇಷವಾಗಿ ಅಲ್ಲಿನ ಲೈಡನ್ ವಿಶ್ವವಿದ್ಯಾಲಯಕ್ಕೆ (Leiden University) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಭಾರತವು ಕಳೆದ 14 ವರ್ಷಗಳಿಂದ ಈ ಶಾಸನಗಳ ವಾಪಸಾತಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿತ್ತು. ಚೋಳರ ಈ ಸಾಂಸ್ಕೃತಿಕ ಪರಂಪರೆಯು ಭಾರತಕ್ಕೆ ಮರಳುತ್ತಿರುವುದು ದೇಶದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sun, 17 May 26

Follow Us
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!