ಉತ್ತರ ಪ್ರದೇಶ: ಚಲಿಸುತ್ತಿದ್ದ ಬಸ್​ನಲ್ಲಿ 14ರ ಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಂಡಕ್ಟರ್; ಸಂತ್ರಸ್ತೆಯ ಅಮ್ಮನಿಗೂ ಕಿರುಕುಳ

ಸೋಮವಾರ ಕಾನ್ಪುರಕ್ಕೆ ತೆರಳುವ ಸ್ಲೀಪರ್ ಬಸ್ ದೆಹಲಿಯ ಬದರ್‌ಪುರ ಗಡಿಯಿಂದ ಹೊರಟು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಆಗ್ರಾಕ್ಕೆ ಹೋಗುತ್ತಿದ್ದಾಗ ಅತ್ಯಾಚಾರ ನಡೆದಿದೆ

ಉತ್ತರ ಪ್ರದೇಶ: ಚಲಿಸುತ್ತಿದ್ದ ಬಸ್​ನಲ್ಲಿ 14ರ ಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಂಡಕ್ಟರ್; ಸಂತ್ರಸ್ತೆಯ ಅಮ್ಮನಿಗೂ ಕಿರುಕುಳ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 23, 2021 | 12:54 PM

ಶಿಕೊಹಾಬಾದ್‌: ಉತ್ತರ ಪ್ರದೇಶದ (Uttar Pradesh) ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ (Yamuna Expressway) ಚಲಿಸುತ್ತಿರುವ ಸ್ಲೀಪರ್ ಬಸ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ಬಸ್ ಕಂಡಕ್ಟರ್ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ತಾಯಿಯನ್ನು ಅದೇ ಬಸ್ ನಲ್ಲಿದ್ದ ಮತ್ತೊಬ್ಬ ಕಂಡಕ್ಟರ್ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸೋಮವಾರ ಕಾನ್ಪುರಕ್ಕೆ ತೆರಳುವ ಸ್ಲೀಪರ್ ಬಸ್ ದೆಹಲಿಯ ಬದರ್‌ಪುರ ಗಡಿಯಿಂದ ಹೊರಟು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಆಗ್ರಾಕ್ಕೆ ಹೋಗುತ್ತಿದ್ದಾಗ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ಮತ್ತು ಆಕೆಯ ತಾಯಿ ಶಿಕೊಹಾಬಾದ್‌ನಲ್ಲಿ ಇಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಬಸ್ಸನ್ನು ವಶಪಡಿಸಿಕೊಂಡಿದ್ದು ಪ್ರಮುಖ ಆರೋಪಿಯನ್ನು ಅನ್ಶು ಎಂದು ಗುರುತಿಸಲಾಗಿದೆ. ಹಿಂದಿ ದಿನಪತ್ರಿಕೆಯಾದ ಹಿಂದುಸ್ತಾನ್ ವರದಿಯ ಪ್ರಕಾರ ಪೊಲೀಸರು ಈಗ ಸಂತ್ರಸ್ತೆ, ಆಕೆಯ ತಾಯಿ ಮತ್ತು ಇತರ ಬಸ್ ಪ್ರಯಾಣಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಕೃತ್ಯವೆಸಗಿದ ನಂತರ ಇಬ್ಬರು ಆರೋಪಿಗಳು ಬೇರೆ ಬೇರೆ ಸ್ಥಳಗಳಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದಾರೆ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

ದೆಹಲಿಯಿಂದ ಕಾನ್ಪುರಕ್ಕೆ ಹೋಗುತ್ತಿದ್ದ ಬಸ್ ನಲ್ಲಿ ನಡೆದಿತ್ತು ಈ ಘಟನೆ ಶಿಕೊಹಾಬಾದ್ ನಿವಾಸಿಯಾದ ಸಂತ್ರಸ್ತೆಯ ತಾಯಿಯ ದೂರಿನ ಪ್ರಕಾರ ತನ್ನ 14 ವರ್ಷದ ಮಗಳು ಮತ್ತು 18 ವರ್ಷದ ಸೊಸೆ ದೆಹಲಿಯ ಬದರ್‌ಪುರದಿಂದ ಬಸ್ ಹತ್ತಿದ್ದರು. ನಂತರ ಕಂಡಕ್ಟರ್ ಮೂವರನ್ನು ಬಸ್ಸಿನ ಮುಂಭಾಗದ ಕ್ಯಾಬಿನ್‌ನಲ್ಲಿ ಕೂರಿಸುವಂತೆ ಮಾಡಿದರು. ಸುಮಾರು 15-ಕಿಮೀ ನಂತರ ಆರೋಪಿ ಕಂಡಕ್ಟರ್ ಅಂಶು ಮತ್ತು ಆತನ ಸಹಚರ ಬಬ್ಲೂ ಬಾಲಕಿಯ ತಾಯಿಯನ್ನು ಬಸ್ಸಿನ ಹಿಂಭಾಗದಲ್ಲಿ ಕುಳಿತುಕೊಳ್ಳುವಂತೆ ಕೇಳಿಕೊಂಡರು.

ಮಹಿಳೆಯ ಪ್ರಕಾರ ಆರೋಪಿ ಬಬ್ಲೂ ಆಕೆಗೆ ಮದ್ಯ ಕುಡಿಸಲು ಪ್ರಯತ್ನಿಸಿದಾಗ ಆತಕೆ ಅದನ್ನು ಕಿಟಕಿಯಿಂದ ಎಸೆದಳು. ಬಬ್ಲೂ ಕೂಡ ತನ್ನ ಮೇಲೆ ಬಲವಂತ ಮಾಡಲು ಪ್ರಯತ್ನಿಸಿದ. ಗಲಿಬಿಲಿಗೊಂಡ ಮಹಿಳೆ ಕ್ಯಾಬಿನ್ ಕಡೆಗೆ ಓಡಿದರೆ ಅಲ್ಲಿ ಮಗಳು ಇರಲಿಲ್ಲ.

ನಂತರ ಆಕೆ ತನ್ನ ಮಗಳ ಬಗ್ಗೆ ಕ್ಯಾಬಿನ್‌ನಲ್ಲಿ ಕುಳಿತಿದ್ದ ಸೊಸೆಯನ್ನು ಕೇಳಿದಳು. ಅವಳು ಕೂಡ ಬಸ್ಸಿನ ಹಿಂಭಾಗದಲ್ಲಿ ಕುಳಿತಿದ್ದಾಳೆ ಎಂದು ಸೊಸೆ ಹೇಳಿದಳು. ತಕ್ಷಣ ಹುಡುಗಿ ತನ್ನ ತಾಯಿಯ ಬಳಿ ಅಳುತ್ತಾ ಬಂದು ತನ್ನ ಮೇಲೆ ಅನ್ಶು ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದಳು. ಪ್ರಮುಖ ಆರೋಪಿ ಅನ್ಶುವನ್ನು ಇಟವಾದಲ್ಲಿರುವ ಸಿರಸಗಂಜ್‌ನಿಂದ ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ:  ಬೆಳಗಾವಿ: ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಅತ್ಯಾಚಾರ; ಮಾಲೀಕ ಅರೆಸ್ಟ್

ಇದನ್ನೂ ಓದಿ: Freshworks Employees: ಈ ಕಂಪೆನಿಗಾಗಿ ಭಾರತದಲ್ಲಿ ಉದ್ಯೋಗ ಮಾಡುವ 500ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳು

(14-year-old girl allegedly raped by a bus conductor in moving bus on Yamuna Expressway Uttar Pradesh)

Published On - 12:53 pm, Thu, 23 September 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು