8 Years of Modi Government ತುರ್ತು ಪರಿಸ್ಥಿತಿಯಲ್ಲಿ ಮಾರುವೇಷಕ್ಕೆ ಮೊರೆ, ಗುಪ್ತನಾಮವೂ ಇತ್ತು; ಇಲ್ಲಿವೆ ಮೋದಿ ಜೀವನದ ಬಗ್ಗೆ ಕೇಳಿರದ ಸಂಗತಿಗಳು

PM Modi Untold Story ಒಮ್ಮೆ ಅವರು ಸರ್ದಾರ್ ವೇಷವನ್ನು ಧರಿಸಿ ಹೊರಬರುತ್ತಿದ್ದಾಗ, ಒಬ್ಬ ಪೋಲೀಸ್ ಅವರ ಬಳಿಗೆ ಬಂದು ನರೇಂದ್ರ ಮೋದಿ ಎಲ್ಲಿ ವಾಸಿಸುತ್ತಿದ್ದಾರೆ ಎಂದು ಕೇಳಿದರು. ‘ನನಗೆ ಗೊತ್ತಿಲ್ಲ, ನೀವು ಒಳಗೆ ಹೋಗಿ ವಿಚಾರಿಸಿ’ ಎಂದು ಮೋದಿ ಉತ್ತರಿಸಿದ

8 Years of Modi Government ತುರ್ತು ಪರಿಸ್ಥಿತಿಯಲ್ಲಿ ಮಾರುವೇಷಕ್ಕೆ ಮೊರೆ, ಗುಪ್ತನಾಮವೂ ಇತ್ತು; ಇಲ್ಲಿವೆ ಮೋದಿ ಜೀವನದ ಬಗ್ಗೆ ಕೇಳಿರದ ಸಂಗತಿಗಳು
ನರೇಂದ್ರ ಮೋದಿ ಬಾಲಕನಾಗಿದ್ದಾಗ ಮತ್ತು ಸರ್ದಾರ್ ವೇಷದಲ್ಲಿದ್ದಾಗ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: May 26, 2022 | 8:30 AM

1975 ದೇಶದಲ್ಲಿ ತುರ್ತು ಪರಿಸ್ಥಿತಿ (The Emergency in India) ಘೋಷಿಸಲಾಗಿತ್ತು. ಹಲವಾರು ಬಿಜೆಪಿ (BJP) ನಾಯಕರು ಜೈಲು ಪಾಲಾಗಿದ್ದರು. ಆದರೆ ತುರ್ತು ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ (Narendra Modi) ಜೈಲಿಗೆ ಹೋಗಲಿಲ್ಲ. ಕಾರಣ ಮೋದಿ ಮಾರುವೇಷದಲ್ಲಿದ್ದರು. ಅನೇಕ ನಾಯಕರು ಬಂಧನವನ್ನು ತಪ್ಪಿಸಲು ಮಾರುವೇಷವನ್ನು ಧರಿಸಿದ್ದರು. ಆ ಸಮಯದಲ್ಲಿ ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಚಾರಕ ಆಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಷೇಧಕ್ಕೊಳಗಾದ ಗುಂಪುಗಳಲ್ಲಿ ಆರ್‌ಎಸ್‌ಎಸ್ ಕೂಡ ಸೇರಿತ್ತು. ಬಂಧನ ತಪ್ಪಿಸಲು ಮೋದಿ ಸಿಖ್ ವೇಷ ಧರಿಸಿದ್ದರು. ಅವರು ನಿಷೇಧಿತ ಸಾಹಿತ್ಯವನ್ನು ದೆಹಲಿಗೆ ಕೊಂಡೊಯ್ದು ಜೈಲಿನಲ್ಲಿ ಜನಸಂಘದ ನಾಯಕರನ್ನು ಭೇಟಿಯಾಗಿದ್ದರು. 25 ವರ್ಷದ ಮೋದಿ ಕೂಡ ಸನ್ಯಾಸಿಯಂತೆ ಪೋಸ್ ಕೊಟ್ಟು ಜಾರ್ಜ್ ಫರ್ನಾಂಡಿಸ್ ಅವರಂತಹ ನಾಯಕರನ್ನು ಸುರಕ್ಷಿತ ಮನೆಗಳಿಗೆ ಕರೆದೊಯ್ದರು. ಆ ಸಮಯದಲ್ಲಿ ಕಿರಿಯ ನಾಯಕರಾಗಿದ್ದ ಮೋದಿಯವರ ಕೆಲಸ ಏನೆಂದರೆ ಉನ್ನತ ನಾಯಕರ ನಡುವೆ ಸಂಪರ್ಕಗಾರನಾಗಿ ಕಾರ್ಯನಿರ್ವಹಿಸುವುದು, ನಿಷೇಧಿತ ಸಾಹಿತ್ಯವನ್ನು ಪ್ರಸಾರ ಮಾಡುವುದು ಆಗಿತ್ತು . ಮಾರುವೇಷದಲ್ಲಿದ್ದ ಮೋದಿಗೆ ಪ್ರಕಾಶ್ ಎಂಬ ಗುಪ್ತನಾಮವೂ ಇತ್ತು. ಮೋದಿ ಸಿಖ್ ಆಗಿ ಮಾರುವೇಷದಲ್ಲಿದ್ದ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿಕೊಂಡು ಹೋಗಿದ್ದು ಹೇಗೆ ಎಂಬುದರ ಬಗ್ಗೆ ಗುಜರಾತ್‌ನ ರೋಹಿತ್‌ಭಾಯ್ ಅಗರವಾಲ್ ಅವರು ಹೀಗಂತಾರೆ: 1975 ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ನಮ್ಮ ಮನೆಯಲ್ಲಿ ವಾಸಿಸಿದ್ದರು. ಅವರು ಆಗ  ಸರ್ದಾರ್ಜಿಯ ವೇಷದಲ್ಲಿದ್ದರು. ಒಮ್ಮೆ ಅವರು ಸರ್ದಾರ್ ವೇಷವನ್ನು ಧರಿಸಿ ಹೊರಬರುತ್ತಿದ್ದಾಗ, ಒಬ್ಬ ಪೋಲೀಸ್ ಅವರ ಬಳಿಗೆ ಬಂದು ನರೇಂದ್ರ ಮೋದಿ ಎಲ್ಲಿ ವಾಸಿಸುತ್ತಿದ್ದಾರೆ ಎಂದು ಕೇಳಿದರು. ‘ನನಗೆ ಗೊತ್ತಿಲ್ಲ, ನೀವು ಒಳಗೆ ಹೋಗಿ ವಿಚಾರಿಸಿ’ ಎಂದು ಮೋದಿ ಉತ್ತರಿಸಿದರು. ನಂತರ ಅವರು ನನ್ನ ಸಹೋದರನೊಂದಿಗೆ ಸ್ಕೂಟರ್‌ನಲ್ಲಿ ಹೊರಟರು.

ಮೋದಿ ಸ್ಟೋರಿ ಡಾಟ್ ಇನ್ ವೆಬ್​​ಸೈಟ್​​ ಪ್ರಕಾರ ಮೋದಿ ಬದುಕಿನ ಇನ್ನೊಂದು ಸಂದರ್ಭವನ್ನು ಗುಜರಾತಿನ ಡಾ.ಅನಿಲ್ ರಾವಲ್  ಹೇಳಿದ್ದಾರೆ, ಇದುಮೋದಿಯವರ  ಜೀವನದ ದಿಕ್ಕನ್ನೇ ಬದಲಿಸಿದ  ಘಟನೆ ಅಂತಾರೆ ರಾವಲ್  “1983 ಅಥವಾ 1984 ರಲ್ಲಿ ಪ್ರವಾಸದಲ್ಲಿದ್ದಾಗ ನಾನು ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ. ಸಮಾಜದಲ್ಲಿನ ಕೊನೆಯ ವ್ಯಕ್ತಿಯ ಉನ್ನತಿಗೆ ನೀವು ಹೇಗೆ ಬದ್ಧರಾಗಿದ್ದೀರಿ? ಎಂದು. ಅದಕ್ಕೆ ಉತ್ತರಿಸಿದ ಮೋದಿ, ನಾನು ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕನಾಗಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 1 ಗಂಟೆಗೆ ಗ್ರಾಮವೊಂದಕ್ಕೆ ಭೇಟಿ ನೀಡಿದ್ದೆ ಸ್ವಯಂಸೇವಕನ ಮನೆಗೆ ಹೋಗಿದ್ದೆ. ಅದೊಂದು ಗುಡಿಸಲು. ಆ ಸ್ವಯಂಸೇವಕನು ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ವಾಸಿಸುತ್ತಿದ್ದನು. ಊಟ ಮಾಡಿ  ಅಂದರು. ನಾನು ಸಮ್ಮತಿ ಸೂಚಿಸಿದೆ. ಒಂದು ತಟ್ಟೆಯಲ್ಲಿ ನನಗೆ ಅರ್ಧ ಬಜ್ರಾ ರೊಟ್ಟಿ ಮತ್ತು ಒಂದು ಲೋಟ ಹಾಲು ತಂದು ಕೊಟ್ಟರು. ಆ ಸಮಯದಲ್ಲಿ ತನ್ನ ತಾಯಿಯ ಮಡಿಲಲ್ಲಿ ಮಲಗಿದ್ದ ಮಗು ಹಾಲಿನ ಬಟ್ಟಲನ್ನು ತದೇಕಚಿತ್ತದಿಂದ ನೋಡುತ್ತಿತ್ತು. ಆ ಹಾಲು ಮಗುವಿಗಾಗಿ ಇಟ್ಟಿದ್ದು ಎಂದು ನನಗೆ ಗೊತ್ತಾಯಿತು. ನಾನು ಬೇರೆ ಕಡೆ ಉಪಹಾರ ಸೇವಿಸಿದ್ದೇನೆ ಎಂದು ಹೇಳಿ. ಅರ್ಧ ರೊಟ್ಟಿಯನ್ನು ನೀರಿನೊಂದಿಗೆ ತಿಂದು ಹಾಲನ್ನು ವಾಪಸ್ ಕೊಟ್ಟೆ. ಆತನ ಹೆಂಡತಿ ಮಗುವಿಗೆ ಆ ಹಾಲನ್ನು ಕೊಟ್ಟಾಗ ಆ ಮಗು ಒಮ್ಮೆಲೆ ಕುಡಿದು ಮುಗಿಸಿತು. ನನ್ನ ದೇಶ ಇಷ್ಟು ಬಡವಾಗಿದೆಯೇ? ಎಂದು ನಾನು ಅತ್ತು ಬಿಟ್ಟೆ. ನನ್ನ ದೇಶದಲ್ಲಿ ಅನೇಕ ವಂಚಿತರು ವಾಸಿಸುತ್ತಿದ್ದಾರೆ ಎಂದು ಅರಿವಾದ ಆ ಕ್ಷಣದಲ್ಲಿ ನಾನು ಕೊನೆಯ ಮನುಷ್ಯನ ಉನ್ನತಿಗಾಗಿ ಈ ಜೀವನವನ್ನು ನಡೆಸುತ್ತೇನೆ ಎಂದು ನಿರ್ಧರಿಸಿದೆ.

ಇದನ್ನೂ ಓದಿ: 8 Years of Modi Government: ಸಾಮಾಜಿಕ ಕ್ರಾಂತಿ ಸೃಷ್ಟಿಸಿರುವ ‘ಮನ್ ಕಿ ಬಾತ್’ ಐಡಿಯಾ ಪ್ರಧಾನಿ ಮೋದಿಯವರಿಗೆ ಹೊಳೆದಿದ್ದು 1998ರಲ್ಲಿ!

ಇದನ್ನೂ ಓದಿ
Image
8 Years of Modi Government: ನೋಟು ಅಮಾನ್ಯೀಕರಣದಿಂದ ಡಿಜಿಟಲ್ ಇಂಡಿಯಾವರೆಗೆ; ಪ್ರಧಾನಿ ನರೇಂದ್ರ ಮೋದಿಯ 10 ಮಹತ್ವದ ನಿರ್ಧಾರಗಳಿವು
Image
8 Years Of Modi Government: ಚಿಕ್ಕ ವಯಸ್ಸಲ್ಲೆ RSS​ ಪ್ರಚಾರಕನಾಗಿ ಸಮಾಜಮುಖಿಯಾದ ನರೇಂದ್ರ ಮೋದಿ, ಮುಂದೆ ದೇಶ ಸೇವೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ!
Image
8 Years Of Modi Government: ಸಹೋದರ ಮೋದಿ ಪ್ರಧಾನಿಯೇ ಆದರೂ ಕುಟುಂಬದವರಿಗೆ ರಾಜಕೀಯದ ಗಂಧಗಾಳಿ ತಾಕಿಲ್ಲ! ಮೋದಿ ಸಹೋದರಿ ಏನ್ಮಾಡ್ತಿದ್ದಾರೆ?
Image
8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು

ಪ್ಯೂನ್ ಕೈಬರಹ ಚೆನ್ನಾಗಿದೆ ಅಂದಿದ್ದರು

ದೇಶದ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಹಸ್ಮುಖ್ ಆಂಧಿಯಾ ಗುಜರಾತ್ ಕೇಡರ್‌ನ 1981 ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಮೋದಿ ಬಗ್ಗೆ ಹಸ್ಮುಖ್ ಹೇಳಿದ ಕತೆ ಹೀಗಿದೆ: ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯ ಅದು, ಒಮ್ಮೆ ನಾನು ನರೇಂದ್ರ ಮೋದಿಯವರೊಂದಿಗೆ ಕುಳಿತಿದ್ದೆ. ಆಗ ಒಬ್ಬ ಪ್ಯೂನ್ ಕಡೆಗೆ ತೋರಿಸುತ್ತಾ ಮೋದಿಯವರು ಹಸ್ಮುಖ್ ಭಾಯ್, ಅವರ್ಯಾರು ಗೊತ್ತಾ? ಅವರ ಹೆಸರು ಪ್ರತಾಪ್. ಅವರ ಕೈಬರಹ ತುಂಬಾ ಸುಂದರವಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇತ್ಯಾದಿ ಬರೆಯಬೇಕು ಎಂದಾದಲ್ಲಿ ಅದರ ಸುಂದರ ಕೈಬರಹವನ್ನು ಬಳಸಿಕೊಳ್ಳಬಹುದು. ಅಂದಹಾಗೆ ಮುಖ್ಯಮಂತ್ರಿಯಾದವರು ತಮ್ಮ ಪ್ಯೂನ್ ಗಳ ಬಗ್ಗೆಯೂ ಇಷ್ಟು ತಿಳಿದುಕೊಂಡಿರುವುದು ನನ್ನಲ್ಲಿ ಅಚ್ಚರಿ ಉಂಟು ಮಾಡಿತ್ತು ಎಂದು ಹಸ್ಮುಖ್ ಹೇಳಿದ್ದಾರೆ.

ಕಾರ್ಗಿಲ್ ವಿಧವೆಯರಿಗೆ ದೇಣಿಗೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಿಸಿದ್ದರು

1999 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಹರಿಯಾಣ ಬಿಜೆಪಿಯ ಉಸ್ತುವಾರಿ ವಹಿಸಿದ್ದರು. ಕಾರ್ಗಿಲ್ ಯುದ್ಧದ ನಂತರ ನಡೆದ 1999ರ ಲೋಕಸಭೆ ಚುನಾವಣೆಯಲ್ಲಿ ಗುರುಗ್ರಾಮದಿಂದ ಬಿಜೆಪಿ ಉತ್ತಮ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಆಗ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸುಖಬೀರ್ ಸಿಂಗ್ ಯಾದವ್ ಅವರ ವಿಧವೆ ಸುಧಾ ಯಾದವ್ ಅವರನ್ನು ಚುನಾವಣೆಗೆ ಸ್ಪರ್ಧಿಸಲು ಪ್ರಸ್ತಾಪಿಸಿದರು. ಸುಧಾ ಯಾದವ್ ಪ್ರಕಾರ ಹಣಕ್ಕಾಗಿ ಏನು ಮಾಡುವುದು ಎಂದಾಗ ಮೋದಿ ಒಂದು ಬಟ್ಟೆಯನ್ನು ಹರಡಿ ಅದರ ಮೇಲೊಂದು ಪಾತ್ರೆಯನ್ನಿರಿಸಿದರು. ಆಮೇಲೆ ತನ್ನ ಜೇಬಿನಿಂದ ಒಂದು ಪೊಟ್ಟಣ ತೆಗೆದರು. ಅದರಲ್ಲಿ 11 ರೂಪಾಯಿ ಇತ್ತು. ನಿನಗೆ ಉಪಯೋಗಕ್ಕೆ ಬರಬಹುದು ಎಂದು ನನ್ನ ಅಮ್ಮ ನನಗೆ ಈ ಹಣವನ್ನು ಕೊಟ್ಟಿದ್ದರು. ನನ್ನ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತಿದೆ. ಅದಕ್ಕೇ ಅಮ್ಮನ 11 ರೂಪಾಯಿ ಇವತ್ತಿಗೂ ಖರ್ಚಾಗದೆ ಉಳಿದಿದೆ. ಇಂದು ಸರಿಯಾದ ದಿನ, ನನ್ನ ಸಹೋದರಿಯನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಲು ನಾನು ಈ 11 ರೂಪಾಯಿಗಳನ್ನು ನೀಡಬಹುದು ಎಂದು ಹೇಳಿದರು.ಆಮೇಲೆ ಜನರನ್ನುದ್ದೇಶಿಸಿ ನೀವು ಪ್ರಯಾಣದ ಶುಲ್ಕ, ಇತರ ಹಣವನ್ನು ಹೊರತುಪಡಿಸಿ ಮಿಕ್ಕಿದ್ದನ್ನು ದಯವಿಟ್ಟು ಸುಧಾ ಬೆಹೆನ್ ಅವರ ಚುನಾವಣೆಗೆ ದೇಣಿಗೆ ನೀಡಿ ಎಂದರು. ಮೋದಿ ಮನವಿ ಮೇರೆಗೆ ಅರ್ಧ ಗಂಟೆಯೊಳಗೆ ಏಳೂವರೆ ಲಕ್ಷ ರೂಪಾಯಿ ಸಂಗ್ರಹವಾಯಿತು. ಆ ಚುನಾವಣೆಯಲ್ಲಿ ಸುಧಾ ಅವರು ಹಿರಿಯ ನಾಯಕ ರಾವ್ ಇಂದರ್‌ಜಿತ್ ಸಿಂಗ್ ಅವರನ್ನು 1 ಲಕ್ಷ 39 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಚುನಾವಣೆ ಗೆದ್ದರು.

ಅನಿಕೇತ್ ಎಂಬ ಹೆಸರಿನಲ್ಲಿ ಲೇಖನಗಳನ್ನು ಬರೆಯುತ್ತಿದ್ದರು ಮೋದಿ

ಗುಜರಾತಿ ಬರಹಗಾರ ಮಕ್ವಾನಾ ಪ್ರಕಾರ ಅವರು ಸಂಘಕ್ಕೆ ಸಂಬಂಧಿಸಿದ ಸಾಧನ ವಾರಪತ್ರಿಕೆಗೆ ಸೇರಿದಾಗ ನರೇಂದ್ರ ಮೋದಿ ಭಾಯ್ ಅಂಕಣಗಳನ್ನು ಬರೆಯುತ್ತಿದ್ದರು. ‘ಅಕ್ಷರ ಉಪವಾನ್’ ಎಂಬ ಅಂಕಣ ಬರೆಯುತ್ತಿದ್ದ ಅವರು ನರೇಂದ್ರ ಅಲ್ಲ ‘ಅನಿಕೇತ್ ’ಎಂಬ ಹೆಸರಲ್ಲಿ ಬರೆಯುತ್ತಿದ್ದರು. ಆ ಸಮಯದಲ್ಲಿ ಅವರ ಚಿಂತನೆಗಳನ್ನು ಓದುವ ಅವಕಾಶ ಸಿಕ್ಕಿತು. ಲೇಖನ ಹೇಗಿದೆ ಎಂದು ಅವರು ನಮ್ಮನ್ನು ಪ್ರತಿ ಬಾರಿ ಕೇಳುತ್ತಿದ್ದರು. ಅವರು ತಮ್ಮ ಲೇಖನಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್