AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಸಂಪತ್ತು ಬೇಡ, ಭಾರತದ ಮಣ್ಣು ಸಾಕು: ಭಾರತೀಯಳಾಗಿ ಸಾಯ್ತೀನಿ ಅಂದ 94 ವರ್ಷದ ವೃದ್ಧೆ

ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ 94 ವರ್ಷದ ಮಹಾಲಕ್ಷ್ಮಮ್ಮ ಅವರು ಅಮೆರಿಕ ಪೌರತ್ವ ತ್ಯಜಿಸಿ ಭಾರತೀಯ ಪೌರತ್ವ ಮರುಸ್ಥಾಪನೆಗೆ ಮನವಿ ಮಾಡಿದ್ದಾರೆ. 'ನನ್ನ ಕೊನೆಯುಸಿರು ನನ್ನ ಮಾತೃಭೂಮಿಯಲ್ಲೇ ಇರಬೇಕು, ಭಾರತೀಯ ಪ್ರಜೆಯಾಗಿಯೇ ಕಣ್ಣು ಮುಚ್ಚಬೇಕು' ಎಂಬ ಆಳವಾದ ದೇಶಪ್ರೇಮದೊಂದಿಗೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅವರ ಈ ಭಾವುಕ ಕಥೆ ಇದೀಗ ವೈರಲ್ ಆಗಿದೆ.

ಅಮೆರಿಕದ ಸಂಪತ್ತು ಬೇಡ, ಭಾರತದ ಮಣ್ಣು ಸಾಕು: ಭಾರತೀಯಳಾಗಿ ಸಾಯ್ತೀನಿ ಅಂದ 94 ವರ್ಷದ ವೃದ್ಧೆ
94 ವರ್ಷದ ಮಹಾಲಕ್ಷ್ಮಮ್ಮ
ಅಕ್ಷಯ್​ ಪಲ್ಲಮಜಲು​​
|

Updated on:Jun 26, 2026 | 1:27 PM

Share

ಮುಖ್ಯಾಂಶಗಳು

  • ನನ್ನ ಕೊನೆಯುಸಿರು ಇರುವವರೆಗೂ ನಾನು ನನ್ನ ಮಾತೃಭೂಮಿಯಲ್ಲೇ ಇರಬೇಕು
  • ನಾನು ಒಬ್ಬ ಭಾರತೀಯ ಪ್ರಜೆಯಾಗಿಯೇ ಕಣ್ಣು ಮುಚ್ಚಬೇಕು
  • ಆಂಧ್ರಪ್ರದೇಶದ 94 ವರ್ಷದ ವೃದ್ಧೆಯೊಬ್ಬರ ಕೊನೆಯ ಆಸೆ

ಬಾಪಟ್ಲಾ ಜೂ.26: “ನನ್ನ ಕೊನೆಯುಸಿರು ಇರುವವರೆಗೂ ನಾನು ನನ್ನ ಮಾತೃಭೂಮಿಯಲ್ಲೇ ಇರಬೇಕು. ಸಾಯುವಾಗ ನಾನು ಒಬ್ಬ ಭಾರತೀಯ ಪ್ರಜೆಯಾಗಿಯೇ ಕಣ್ಣು ಮುಚ್ಚಬೇಕು…” ಇದು ಆಂಧ್ರಪ್ರದೇಶದ 94 ವರ್ಷದ ವೃದ್ಧೆಯೊಬ್ಬರ ಕೊನೆಯ ಆಸೆ ಎಂದು ಹೇಳಿದ್ದಾರೆ. ಅಮೆರಿಕದಂತಹ ಐಷಾರಾಮಿ ದೇಶದ ಪೌರತ್ವವನ್ನು (US Citizenship) ಸ್ವಇಚ್ಛೆಯಿಂದ ತ್ಯಜಿಸಿ, ತಮಗೆ ಭಾರತದ ಪೌರತ್ವವನ್ನು ಮರುಸ್ಥಾಪಿಸಿಕೊಡಬೇಕೆಂದು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕೊಂಡ್ರಗುಂಟ ಮಹಾಲಕ್ಷ್ಮಮ್ಮ ಎಂಬ ವೃದ್ಧೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದುನ್ನು ನಬಿಲಾ ಜಮಾಲ್ ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಮಹಾಲಕ್ಷ್ಮಮ್ಮ ಅವರು 2000ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದರು. ಆ ಬಳಿಕ ಸುಮಾರು 18 ವರ್ಷಗಳ ಕಾಲ ಅಮೆರಿಕದಲ್ಲೇ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಆದರೆ, ವಯಸ್ಸಾಗುತ್ತಿದ್ದಂತೆ ಅವರಿಗೆ ತನ್ನ ಸ್ವಗ್ರಾಮ, ತಾಯ್ನಾಡಿನ ಮಣ್ಣಿನ ನೆನಪು ತೀವ್ರವಾಗಿ ಕಾಡಲಾರಂಭಿಸಿದೆ. ಅದಕ್ಕಾಗಿ ಅವರು 2018ರಲ್ಲಿಯೇ ಅಮೆರಿಕವನ್ನು ತೊರೆದು ಭಾರತಕ್ಕೆ ಮರಳಿದ್ದರು.

ಇಲ್ಲಿದೆ ನೋಡಿ ವಿಡಿಯೋ:

ಪ್ರಸ್ತುತ 94ನೇ ವಯಸ್ಸಿನಲ್ಲಿರುವ ಮಹಾಲಕ್ಷ್ಮಮ್ಮ ಅವರು ಇತ್ತೀಚೆಗೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲಾಧಿಕಾರಿಯನ್ನು ಖುದ್ದಾಗಿ ಭೇಟಿಯಾಗಿದ್ದಾರೆ. ಅಮೆರಿಕದ ಪೌರತ್ವವನ್ನು ಅಧಿಕೃತವಾಗಿ ರದ್ದುಗೊಳಿಸಿರುವ ದಾಖಲೆಗಳನ್ನು ಸಲ್ಲಿಸಿದ ಅವರು, ತಮಗೆ ತಕ್ಷಣವೇ ಭಾರತೀಯ ಪೌರತ್ವವನ್ನು ಮರುಸ್ಥಾಪಿಸಿಕೊಡಬೇಕೆಂದು ವಿನಂತಿಸಿದ್ದಾರೆ.

ಇದನ್ನೂ ಓದಿ: ಗುಜರಿಗೆ ಹೋಗಬೇಕಿದ್ದ ಬ್ರಿಟನ್‌ 9 ಯುದ್ಧವಿಮಾನಗಳ ಖರೀದಿಗೆ ಮುಂದಾದ ಭಾರತ: ಅಸಲಿ ಕಾರಣ ಬಿಚ್ಚಿಟ್ಟ ವಾಯುಪಡೆ

“ನನ್ನ ಕೊನೆಯ ಕಾಲ ಹತ್ತಿರವಾಗುತ್ತಿದೆ. ನನ್ನ ಅಂತ್ಯಕ್ರಿಯೆಯು ನನ್ನ ಸ್ವಂತ ಗ್ರಾಮದಲ್ಲೇ ನೆರವೇರಬೇಕು. ದೇಶದ ಅಧಿಕೃತ ಪ್ರಜೆಯಾಗಿ ನಾನು ಸಾಯಬೇಕು. ದಯವಿಟ್ಟು ನನ್ನ ಪೌರತ್ವದ ಅರ್ಜಿಯನ್ನು ಶೀಘ್ರವಾಗಿ ಸ್ವೀಕಾರಿಸಿ” ಎಂದು ಅವರು ಅಧಿಕಾರಿಗಳ ಮುಂದೆ ಕೈಮುಗಿದು ಕೇಳಿಕೊಂಡಿದ್ದಾರೆ. ವೃದ್ಧೆಯ ಈ ಅಪಾರ ದೇಶಪ್ರೇಮ ಹಾಗೂ ಭಾವುಕ ಆಸೆಯನ್ನು ಕಂಡು ಅಲ್ಲಿ ನೆರೆದಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದು, ಭಾರತೀಯರು ಈ ಅಜ್ಜಿಯ ದೇಶಪ್ರೇಮಕ್ಕೆ ಸಲಾಂ ಎನ್ನುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Fri, 26 June 26

Follow Us
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ