Maharashtra: ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ, ಕಾಪಾಡಿದ ಮತ್ತೊಂದು ಶ್ವಾನ

ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಎರಡು ಶ್ವಾನಗಳು ಸೇರಿ ಓಡಿಸಿರುವ ಘಟನೆ ಮಹಾರಾಷ್ಟ್ದದ ನಾಸಿಕ್​​ನಲ್ಲಿ ನಡೆದಿದೆ.

Maharashtra: ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ, ಕಾಪಾಡಿದ ಮತ್ತೊಂದು ಶ್ವಾನ
ಸಿಸಿಟಿವಿ ವಿಡಿಯೋ

Updated on: Jul 28, 2023 | 2:54 PM

ನಾಸಿಕ್, ಜು.28​: ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಎರಡು ಶ್ವಾನಗಳು ಸೇರಿ ಓಡಿಸಿರುವ ಘಟನೆ ಮಹಾರಾಷ್ಟ್ದದ ನಾಸಿಕ್​​ನಲ್ಲಿ ನಡೆದಿದೆ. ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದಾಗ ಪಕ್ಕದಲ್ಲೇ ಇದ್ದ ಮತ್ತೊಂದು ನಾಯಿ, ದಾಳಿಗೊಳಗಾಗಿದ್ದ ನಾಯಿಯ ಕೂಗು ಕೇಳಿ ಓಡಿ ಬಂದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​ ಆಗಿದೆ.

ನಾಸಿಕ್‌ನ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ, ಸಿಸಿ ಟಿವಿಯಲ್ಲಿ ರೆಕಾರ್ಡ್​​ ಆಗಿರುವಂತೆ ವಿಡಿಯೋದಲ್ಲಿ ಚಿರತೆಯು ಮನೆ ಆವರಣದಿಂದ ಶ್ವಾನ ಮಲಗಿರುವ ಕಡೆಗೆ ಬರುವುದನ್ನು ನೋಡಬಹುದು. ಮನೆಯ ದ್ವಾರದ ಬಳಿ ಮಲಗಿದ್ದ ಶ್ವಾನದ ಬಳಿ ನಿಧಾನವಾಗಿ ಹೆಜ್ಜೆ ಹಾಕುತ್ತ ಬಂದು ಥಟ್ಟನೆ ದಾಳಿ ಮಾಡಿದೆ. ಈ ನಾಯಿ ಕೂಗು ಕೇಳಿ ಪಕ್ಕದಲ್ಲೇ ಮಲಗಿದ್ದ ಮತ್ತೊಂದು ಶ್ವಾನ ಚಿರತೆಯನ್ನು ಓಡಿಸಲು ಮುಂದಾಗಿದೆ. ನಂತರ ಎರಡು ನಾಯಿಗಳು ಸೇರಿ ಚಿರತೆಯನ್ನು ಮನೆಯ ಆವರಣದಿಂದ ಓಡಿಸಿದೆ.

ಇದನ್ನೂ ಓದಿ: ಒಂದೂವರೆ ತಾಸು ಮುಂಚಿತವಾಗಿ ಬಂದು 45 ಪ್ರಯಾಣಿಕರನ್ನು ಬಿಟ್ಟು ಹೊರಟೇ ಬಿಡ್ತು ಗೋವಾ ಎಕ್ಸ್​ಪ್ರೆಸ್​ ರೈಲು

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿ ವೃಶಾಲಿ ಗಾಡೆ ಅವರು ಸುದ್ದಿ ಸಂಸ್ಥೆ ಎಎನ್​​ಐಗೆ ನೀಡಿರುವ ಹೇಳಿಕೆ ಪ್ರಕಾರ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿ ಪ್ರಭಾವ್ಕರ್ ಮನುಡೆ ಎಂಬವವರ ಮನೆಗೆ ಈ ಚಿರತೆ ಬಂದಿದೆ. ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದೆ. ಮತ್ತೊಂದು ಶ್ವಾನ ದಾಳಿಗೊಳಗಾಗಿದ್ದ ನಾಯಿಯ ಕೂಗು ಕೇಳಿ ಚಿರತೆಯನ್ನು ಅಲ್ಲಿಂದ ಓಡಿಸಿದೆ. ಚಿರತೆ ಪಕ್ಕದಲ್ಲೇ ಇರುವ ಹೊಲದ ಮೂಲಕ ಈ ಪ್ರದೇಶಕ್ಕೆ ಬಂದಿದೆ ಎಂದು ಶಂಕಿಸಲಾಗಿದೆ. ಇನ್ನೂ ಈ ಚಿರತೆಯನ್ನು ಪತ್ತೆ ಮಾಡಲು ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ಚಿರತೆ ಮನುಷ್ಯರ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us