AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ವರ್ಷಗಳ ಬಳಿಕ ಮಹಾರಾಷ್ಟ್ರದ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಸ್ವಾಗತ ಹೇಗಿತ್ತು ಗೊತ್ತಾ?

ಕಾಲ ಬದಲಾಗಿದ್ದರೂ ಕೆಲವು ಕುಟುಂಬದಲ್ಲಿ ಹೆಣ್ಣಿನ ಬಗ್ಗೆ ಇರುವ ಮನಸ್ಥಿತಿ ಬದಲಾಗಿಲ್ಲ. ಹೆಣ್ಣು ಮಗು ಜನಿಸಿದರೆ ಬೇಸರಿಸಿಕೊಳ್ಳುವವರು ಇಂದಿಗೂ ಇದ್ದಾರೆ. ಆದರೆ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದಹಿಫಳೆ ಕುಟುಂಬ ಹೆಣ್ಣು ಮಗು ಹುಟ್ಟಿದ್ದಕ್ಕೆ ಊರಿಗೆ ಊರೇ ಬೆರಗಾಗುವಂತೆ ಸಂಭ್ರಮಾಚರಿಸಿದೆ. ಈ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳ ಬಳಿಕ ಹೆಣ್ಣು ಮಗು ಹುಟ್ಟಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ನವಜಾತ ಶಿಶು ಮತ್ತು ತಾಯಿಯನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ, ಸಾಂಪ್ರದಾಯಿಕ ವಾದ್ಯಮೇಳ ಮತ್ತು ನೃತ್ಯದೊಂದಿಗೆ ಮೆರವಣಿಗೆ ಮಾಡಿ ಮನೆಗೆ ಕರೆತಂದಿದ್ದಾರೆ.

200 ವರ್ಷಗಳ ಬಳಿಕ ಮಹಾರಾಷ್ಟ್ರದ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಸ್ವಾಗತ ಹೇಗಿತ್ತು ಗೊತ್ತಾ?
ಮಹಾರಾಷ್ಟ್ರದಲ್ಲಿ ಹೆಣ್ಣು ಮಗುವಿಗೆ ಮೆರವಣಿಗೆImage Credit source: x
ಸುಷ್ಮಾ ಚಕ್ರೆ
|

Updated on:Sep 02, 2026 | 10:47 PM

Share

ಮುಂಬೈ, ಸೆಪ್ಟೆಂಬರ್ 2: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕುಟುಂಬವೊಂದರಲ್ಲಿ ಬರೋಬ್ಬರಿ 5 ತಲೆಮಾರುಗಳು ಅಂದರೆ ಸುಮಾರು 200 ವರ್ಷಗಳ ನಂತರ ಹೆಣ್ಣು ಮಗುವೊಂದು ಜನಿಸಿದ್ದು, ಮಗುವನ್ನು ರಥದ ಮೆರವಣಿಗೆ, ವಾದ್ಯಮೇಳ, ನೃತ್ಯದೊಂದಿಗೆ ಅದ್ಧೂರಿಯಾಗಿ ಮನೆಗೆ ಬರಮಾಡಿಕೊಳ್ಳಲಾಗಿದೆ. “ಸಾಮಾನ್ಯವಾಗಿ ಜನರು ಗಂಡು ಮಗುವನ್ನು ಬಯಸುತ್ತಾರೆ, ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಆನಂದ ಮತ್ತು ಅನುಭವವೇ ಬೇರೆ. ಹೆಣ್ಣುಮಕ್ಕಳು ತಂದೆಯೊಂದಿಗೆ ಹೆಚ್ಚು ಪ್ರೀತಿ-ಸಾಮೀಪ್ಯ ಹೊಂದಿರುತ್ತಾರೆ. ನಾವು ನಮ್ಮ ಮಗಳನ್ನು ಹೂವಿನಂತೆ ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸುತ್ತೇವೆ” ಎಂದು ಆ ಮಗುವಿನ ತಂದೆ ಹೇಳಿದ್ದಾರೆ.

ಮಗುವಿಗೆ ‘ಗಾರ್ಗಿ’ ಎಂದು ನಾಮಕರಣ ಮಾಡಲಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣವೇ ಈ ಅದ್ಧೂರಿ ಸ್ವಾಗತ ನೀಡಲಾಗಿದೆ. ದಹಿಫಳೆ ಕುಟುಂಬದ ಹಿರಿಯರ ಪ್ರಕಾರ, ಕಳೆದ 200 ವರ್ಷಗಳಿಂದ ಅವರ ವಂಶದಲ್ಲಿ ಹೆಣ್ಣು ಮಗುವೇ ಜನಿಸಿರಲಿಲ್ಲ. ಹೀಗಾಗಿ ಮಗುವಿನ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯಲ್ಲಿದ್ದಾಗಲೇ ವಿಶೇಷ ಸ್ವಾಗತ ಕೋರಲು ಯೋಜಿಸಲಾಗಿತ್ತು.

ಇದನ್ನೂ ಓದಿ: ಖಾರ ತಿಂದ ಮಗು ಅಸ್ವಸ್ಥ: ಎಫ್‌ಡಿಎ ಅಧಿಕಾರಿಗೆ ಬಲವಂತವಾಗಿ ಎಕ್ಸ್‌ಪೈರಿ ಬಿಸ್ಕತ್ತು ತಿನ್ನಿಸಲು ಯತ್ನಿಸಿದ ಜನ

ಮಗುವಿನ ತಾತ ಲಿಂಬಾಜಿ ದಹಿಫಳೆ ಮಾತನಾಡಿ, “ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಇಲ್ಲ ಎಂಬ ದೊಡ್ಡ ಕೊರಗಿತ್ತು. ಇಂದು ಗಾರ್ಗಿಯ ಜನನದಿಂದ ಆ ಕೊರಗು ನೀಗಿದೆ. ಲಕ್ಷ್ಮಿಯಂತಿರುವ ಮೊಮ್ಮಗಳನ್ನು ರಥದಲ್ಲಿ, ಸಂಗೀತ-ವಾದ್ಯಗಳೊಂದಿಗೆ ಮನೆಗೆ ಕರೆತಂದಿರುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ” ಎಂದು ಭಾವುಕರಾಗಿ ನುಡಿದಿದ್ದಾರೆ.

ಮೆರವಣಿಗೆಯುದ್ದಕ್ಕೂ ರಸ್ತೆಗಳಲ್ಲಿ ಕುಟುಂಬಸ್ಥರು ಭಜನೆ ಮತ್ತು ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. 5 ತಲೆಮಾರುಗಳ ನಂತರ ಹೆಣ್ಣು ಮಗು ಜನಿಸಿರುವುದರಿಂದ ಕುಟುಂಬದ ಸಂತಸ ಇಮ್ಮಡಿಗೊಂಡಿದ್ದು, ಮಗುವಿನ ಆಗಮನವನ್ನು ಸ್ಮರಣೀಯವಾಗಿಸಲು ಈ ರೀತಿ ಅದ್ಧೂರಿ ಸ್ವಾಗತ ಕೋರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 pm, Wed, 2 September 26

Follow Us
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಕಾರು: 4 ಮಂದಿ ಯುವಕರ ಸಾಹಸಮಯ ರಕ್ಷಣೆ
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಕಾರು: 4 ಮಂದಿ ಯುವಕರ ಸಾಹಸಮಯ ರಕ್ಷಣೆ
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು