ಪ್ರಧಾನಿ ಮೋದಿ ಭಾಷಣದಲ್ಲಿ ಮೊಟ್ಟ ಮೊದಲ ಭಾರಿಗೆ ಎಐ ಆಧಾರಿತ ಅನುವಾದ ಸಾಧನ ಬಳಕೆ

ವಾರಣಾಸಿಯ ನಮೋ ಘಾಟ್‌ನಲ್ಲಿ ಕನ್ಯಾಕುಮಾರಿ ಮತ್ತು ವಾರಣಾಸಿ ಮಧ್ಯೆ ಸಂಚರಿಸಲಿರು ಕಾಶಿ-ತಮಿಳು ಸಂಗಮಂ ಎಕ್ಸ್​ಪ್ರೆಸ್​​ಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ವೇಳೆ ಕೃತಕ ಬುದ್ಧಿಮತ್ತೆ (ಎಐ) ಸಾಧನವನ್ನು ಬಳಕೆ ಮಾಡುವ ಮೂಲಕ ತಮ್ಮ ಭಾಷಣವನ್ನು ನೈಜ-ಸಮಯದಲ್ಲಿ ತಮಿಳು ಭಾಷೆಗೆ ಅನುವಾದ ಮಾಡಲಾಗಿದೆ.

ಪ್ರಧಾನಿ ಮೋದಿ ಭಾಷಣದಲ್ಲಿ ಮೊಟ್ಟ ಮೊದಲ ಭಾರಿಗೆ ಎಐ ಆಧಾರಿತ ಅನುವಾದ ಸಾಧನ ಬಳಕೆ
ಪ್ರಧಾನಿ ಮೋದಿ

Updated on: Dec 17, 2023 | 9:59 PM

ವಾರಣಾಸಿ, ಡಿಸೆಂಬರ್​ 17: ವಾರಣಾಸಿಯ ನಮೋ ಘಾಟ್‌ನಲ್ಲಿ ಕನ್ಯಾಕುಮಾರಿ ಮತ್ತು ವಾರಣಾಸಿ ಮಧ್ಯೆ ಸಂಚರಿಸಲಿರು ಕಾಶಿ-ತಮಿಳು ಸಂಗಮಂ ಎಕ್ಸ್​ಪ್ರೆಸ್​​ಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದಾರೆ. ಇದು ಕಾಶಿ ತಮಿಳು ಸಂಗಮಂನ ಎರಡನೇ ಆವೃತ್ತಿಯಾಗಿದೆ. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಸಾಧನವನ್ನು ಬಳಕೆ ಮಾಡುವ ಮೂಲಕ ತಮ್ಮ ಭಾಷಣವನ್ನು ನೈಜ-ಸಮಯದಲ್ಲಿ ತಮಿಳು ಭಾಷೆಗೆ ಅನುವಾದ ಮಾಡಲಾಗಿದೆ.

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಮಾತನಾಡಿದ್ದು, ‘ಭಾಷಿಣಿ’ ಮೂಲಕ ಮಾಡಿದ ಭಾಷಣದ  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ತಮಿಳು ಅನುವಾದವನ್ನು ಕೇಳುವಂತೆ ಪ್ರಧಾನಿ ಮೋದಿ ಸಭಿಕರಲ್ಲಿ ಉಲ್ಲೇಖಿಸಿದ್ದಾರೆ.

ಕೃತಕ ಬುದ್ಧಿಮತ್ತೆಯ ಮೂಲಕ ಇಲ್ಲಿ ಹೊಸ ತಂತ್ರಜ್ಞಾನದ ಬಳಕೆ ನಡೆದಿದೆ. ಕೃತಕ ಬುದ್ಧಿಮತ್ತೆ ಇದು ಹೊಸ ಆರಂಭಕವಾಗಿದ್ದು, ಆಶಾದಾಯಕವಾಗಿದೆ. ನಾನು ನಿಮ್ಮನ್ನು ತಲುಪಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಭಾಷಿಣಿ ಎಂದರೇನು?

‘ಭಾಷಿಣಿ’ ಎಂಬುದು ಎಐ ಆಧಾರಿತ ಭಾಷಾಂತರ ವ್ಯವಸ್ಥೆಯಾಗಿದ್ದು, ಇತರೆ ಭಾರತೀಯ ಭಾಷೆಗಳನ್ನು ಮಾತನಾಡುವವರೊಂದಿಗೆ ಮಾತನಾಡುವಾಗ ಜನರು ತಮ್ಮ ಸ್ವಂತ ಭಾಷೆಯಲ್ಲಿ ಕೇಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ವಾರಾಣಸಿಯಲ್ಲಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ; ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ

ಭಾರತೀಯ ಭಾಷೆಗಳಲ್ಲಿ ಅನುಕೂಲಕರವಾದ ಇಂಟರ್ನೆಟ್ ಮತ್ತು ಡಿಜಿಟಲ್ ಸೇವಾ ಪ್ರವೇಶವನ್ನು ಸುಲಭಗೊಳಿಸುವುದು, ಧ್ವನಿ ಆಧಾರಿತ ಪ್ರವೇಶವನ್ನು ಸಂಯೋಜಿಸುವುದು ಮತ್ತು ಈ ಭಾಷೆಗಳಲ್ಲಿ ವಿಷಯದ ಉತ್ಪಾದನೆಯನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿಯಾಗಿದೆ.

ಇದನ್ನೂ ಓದಿ: Modi and Ambulance: ವಾರಾಣಸಿಯಲ್ಲಿ ರೋಡ್​ಶೋ ವೇಳೆ ಮೆರವಣಿಗೆ ವಾಹನ ನಿಲ್ಲಿಸಿ ಆ್ಯಂಬುಲೆನ್ಸ್​ಗೆ ದಾರಿ ಕೊಟ್ಟ ಪ್ರಧಾನಿ ಮೋದಿ

ಈ ಆನ್‌ಲೈನ್ ಪ್ಲಾಟ್‌ಫಾರ್ಮ್ ಪ್ರತ್ಯೇಕ ‘ಭಾಸದಾನ್’ ವಿಭಾಗವನ್ನು ಸಹ ಹೊಂದಿದೆ. ಇದು ವ್ಯಕ್ತಿಗಳು ಬಹು ಕ್ರೌಡ್‌ಸೋರ್ಸಿಂಗ್ ಉಪಕ್ರಮಗಳಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ ಮತ್ತು ಇದನ್ನು ಆಯಾ ಆಂಡ್ರಾಯ್ಡ್  ಮತ್ತು ಐಓಎಸ್​ ಅಪ್ಲಿಕೇಶನ್‌ಗಳಲ್ಲಿ ಸಹ ಬಳಕೆ ಮಾಡಬಹುದಾಗಿದೆ.

ಏಕ ಭಾರತ, ಶ್ರೇಷ್ಠ ಭಾರತಕ್ಕೆ ಬಲ

ಕನ್ಯಾಕುಮಾರಿ ಮತ್ತು ವಾರಣಾಸಿ ಮಧ್ಯೆ ಸಂಚರಿಸಲಿರು ಕಾಶಿ-ತಮಿಳು ಸಂಗಮಂ ಎಕ್ಸ್​ಪ್ರೆಸ್​​ಗೆ ಚಾಲನೆ ನೀಡಿದ ಬಳಿಕ ತಿರುಕ್ಕುರಲ್, ಮಣಿಮೇಕಲೈ ಮತ್ತು ಇತರೆ ಶ್ರೇಷ್ಠ ತಮಿಳು ಸಾಹಿತ್ಯದ ಬಹು ಭಾಷೆ ಮತ್ತು ಬ್ರೈಲ್ ಅನುವಾದಗಳನ್ನು ಬಿಡುಗಡೆ ಮಾಡಿದ್ದಾರೆ.

ಕಾಶಿ-ತಮಿಳು ಸಂಗಮಂ ಎಕ್ಸ್​ಪ್ರೆಸ್​​ ಭಾರತದ ಪರಂಪರೆಯನ್ನು ಸಶಕ್ತಗೊಳಿಸುತ್ತದೆ. ಏಕ ಭಾರತ, ಶ್ರೇಷ್ಠ ಭಾರತವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ರಾಜ್ಯ ಸಚಿವರುಗಳಾದ ಡಾ. ಎಲ್ ಮುರುಗನ್ ಇತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:57 pm, Sun, 17 December 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us