ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ
ಏರ್ ಇಂಡಿಯಾ ವಿಮಾನದಲ್ಲಿ ಮತ್ತೊಬ್ಬ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ಗಂಭೀರ ಸುರಕ್ಷತಾ ಕಳವಳ ಮೂಡಿಸಿದೆ. ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆದಿದ್ದು, ವಿಮಾನಯಾನ ಸಂಸ್ಥೆಯ ಪ್ರತಿಕ್ರಿಯೆ ಮತ್ತು ಪ್ರಯಾಣಿಕರ ಸುರಕ್ಷತಾ ಪ್ರೋಟೋಕಾಲ್‌ಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದೇ ರೀತಿಯ ಘಟನೆಗಳು ಹಿಂದೆ ನಡೆದಿರುವ ಕಾರಣ, ವಿಮಾನಗಳಲ್ಲಿ ಮದ್ಯಪಾನ ನಿಷೇಧಿಸುವ ಒತ್ತಾಯ ಹೆಚ್ಚಿದೆ. ಈ ಘಟನೆ ಪ್ರಯಾಣಿಕರ ನಡವಳಿಕೆ ಮತ್ತು ಏರ್‌ಲೈನ್ ಕ್ರಮಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ

ನವದೆಹಲಿ, ಡಿಸೆಂಬರ್ 30: ದೆಹಲಿಯಿಂದ ಬ್ಯಾಂಕಾಕ್ಹೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನದಲ್ಲಿ ಮಾನಮತ್ತ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿರುವ ಘಟನೆ ನಡೆದಿದೆ. ಇದು ವಿಮಾನಯಾನ ಸುರಕ್ಷತೆ ಮತ್ತು ಪ್ರಯಾಣಿಕರ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ .
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಕುಡುಕ ಪ್ರಯಾಣಿಕನೊಬ್ಬ ವಿಮಾನ ಕ್ಯಾಬಿನ್ ಒಳಗೆ ಮೂತ್ರ ವಿಸರ್ಜಿಸುತ್ತಿರುವುದನ್ನು ತೋರಿಸುತ್ತದೆ, ಅವರು ಬಿಸಿನೆಸ್ ಕ್ಲಾಸ್ ಕ್ಯಾಬಿನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರಲ್ಲಿ ಒಬ್ಬರಾದ ಶಿವಮ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾರೆ, ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕ ಇತರ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದ.
ಆದರೆ ಆತನ ಮೇಲೆ ಯಾವುದೇ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದಾರೆ. ವಿಮಾನದಲ್ಲಿರುವ ಪ್ರಯಾಣಿಕರನ್ನು ರಕ್ಷಿಸಲು ಯಾವುದೇ ಕಾನೂನು ಅಥವಾ ಸುರಕ್ಷತಾ ಪ್ರೋಟೋಕಾಲ್ ಇಲ್ಲವೇ, ಬಿಸಿನೆಸ್ ಕ್ಲಾಸ್‌ನಲ್ಲಿ ಹೋಗುವ ನಮಗೆ ಯಾರಾದರೂ ಉಚಿತ ಪಾಸ್ ಕೊಡುತ್ತಿದ್ದಾರಾ, ಒಂದು-ಮಾರ್ಗ ಟಿಕೆಟ್‌ಗಾಗಿ ಸುಮಾರು $1,000 ( 80,000 ರೂ.) ಖರ್ಚು ಮಾಡಿ, ಇಂಥಾ ಘಟನೆಗಳನ್ನು ನೋಡುವುದು ನಿಜಕ್ಕೂ ವಿಪರ್ಯಾಸ ಎಂದು ಬರೆದಿದ್ದಾರೆ.
ಮತ್ತಷ್ಟು ಓದಿ: ಏರ್ ಇಂಡಿಯಾ ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸ್ಬೇಡಿ, ಮೃತರ ಸಂಬಂಧಿಕರ ಮಾತು
ಅದೃಷ್ಟವಶಾತ್ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಯಾವುದೇ ಮಹಿಳಾ ಪ್ರಯಾಣಿಕರು ಇರಲಿಲ್ಲ, ಒಬ್ಬ ಮಹಿಳೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಈ ರೀತಿಯ ಅನುಭವವಾದರೆ ಮತ್ತೆಂದು ಒಬ್ಬಂಟಿಯಾಗಿ ಬರಲು ಹಿಂಜರಿಯುತ್ತಾಳೆ.
ಏರ್ ಇಂಡಿಯಾ ವಿಮಾನದಲ್ಲಿ ಈ ರೀತಿ ನಡೆದಿರುವುದು ಇದೇ ಮೊದಲಲ್ಲ, ನವೆಂಬರ್ 2022 ರಲ್ಲಿ ನ್ಯೂಯಾರ್ಕ್ ನಿಂದ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನದಲ್ಲಿ, ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕರೊಬ್ಬರು ಬಿಸಿನೆಸ್ ಕ್ಲಾಸ್ ನಲ್ಲಿ ಹಿರಿಯ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.
ವಿಮಾನದ ವಿಡಿಯೋ
Indians aren’t just a nuisance on the ground but also in the air
An Indian passengers urinated on fellow passengers in an air India flight
Never fly air India
Never fly to India …..
Most Indians have no concept of civic sense
Air India should stop serving alcohol onboard… pic.twitter.com/pirDxj4LQm
— 🦉 (@macroschema) December 29, 2025
ಆ ಸಂದರ್ಭದಲ್ಲಿ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆ ಪ್ರಯಾಣಿಕನಿಗೆ 30 ದಿನಗಳವರೆಗೆ ಹಾರಾಟ ನಿಷೇಧಿಸಿತು, ಶಿಕ್ಷೆಯು ಅಸಮರ್ಪಕ ಎಂದು ಜನರು ಕರೆಯಲಾಗಿತ್ತು. ವಿಮಾನಗಳಲ್ಲಿ ಮದ್ಯಪಾನವನ್ನು ನಿಷೇಧಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.ಘಟನೆಯ ಬಗ್ಗೆ ಏರ್ ಇಂಡಿಯಾ ಇಲ್ಲಿಯವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




