AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿನ ಮೂಲ ಪತ್ತೆಗಾಗಿ ಕೋಯಿಕ್ಕೋಡ್​​ನಲ್ಲಿರುವ ನಿಫಾ ರೋಗಿಯ ಮನೆಗೆ ತಜ್ಞರ ತಂಡ ಭೇಟಿ

ಪ್ರಸ್ತುತ, ರೋಗಿಯ ಒಂಬತ್ತು ವರ್ಷದ ಮಗ ಮತ್ತು 24 ವರ್ಷದ ಸೋದರ ಮಾವ ಚಿಕಿತ್ಸೆಯಲ್ಲಿದ್ದಾರೆ. ಒಬ್ಬ ಆರೋಗ್ಯ ಕಾರ್ಯಕರ್ತ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ವ್ಯಕ್ತಿ ಕೂಡ ಧನಾತ್ಮಕ ಪರೀಕ್ಷೆ ನಡೆಸಿದರು. ಪ್ರಸ್ತುತ ಸೋಂಕಿಗೆ ಸಂಬಂಧಿಸಿದಂತೆ ನಾಲ್ಕು ಸಕ್ರಿಯ ಪ್ರಕರಣಗಳು ವರದಿ ಆಗಿದ್ದು ಮತ್ತು ಎರಡು ಸಾವು ಸಂಭವಿಸಿದೆ.

ಸೋಂಕಿನ ಮೂಲ ಪತ್ತೆಗಾಗಿ ಕೋಯಿಕ್ಕೋಡ್​​ನಲ್ಲಿರುವ ನಿಫಾ ರೋಗಿಯ ಮನೆಗೆ ತಜ್ಞರ ತಂಡ ಭೇಟಿ
ತಜ್ಞರ ತಂಡ
ರಶ್ಮಿ ಕಲ್ಲಕಟ್ಟ
|

Updated on: Sep 15, 2023 | 8:09 PM

Share

ಕೋಯಿಕ್ಕೋಡ್ ಸೆಪ್ಟೆಂಬರ್ 15: ಕೇಂದ್ರದ ತಜ್ಞರ ತಂಡವು ಶುಕ್ರವಾರ ಕೋಯಿಕ್ಕೋಡ್​​​​​​ನಲ್ಲಿ (Kozhikode) ನಿಫಾ (Nipah) ಮೊದಲ ಬಾರಿ ಪತ್ತೆಯಾದ ರೋಗಿಯ ಮನೆಗೆ ಭೇಟಿ ನೀಡಿದೆ. ಮೆದುಳಿಗೆ ಹಾನಿ ಮಾಡುವ ವೈರಸ್​​ನ ಮೂಲವನ್ನು ಪತ್ತೆ ಹಚ್ಚಲು ಮಾರುತೋಣಕರ ಪಂಚಾಯತ್‌ನಲ್ಲಿರುವ ಮನೆ, ಸುತ್ತಮುತ್ತಲಿನ ಪ್ರದೇಶಗಳು ಮತ್ತು ಅವರ ಕೃಷಿ ಭೂಮಿಯನ್ನು ಪರಿಶೀಲಿಸಲಾಯಿತು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿ ಡಾ.ಬಾಲಸುಬ್ರಮಣ್ಯಂ ಅವರ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡ ರೋಗಿಯ ಮನೆಗೆ ಭೇಟಿ ನೀಡಿದೆ.

49 ವರ್ಷದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುವ ಮೊದಲು ಅವರ ಚಟುವಟಿಕೆಗಳ ಬಗ್ಗೆ ತಂಡವು ವಿಚಾರಿಸಿದೆ ಎಂದು ವರದಿಯಾಗಿದೆ. ಕೇರಳದ ಆರೋಗ್ಯ ಅಧಿಕಾರಿಗಳು ತಂಡದೊಂದಿಗೆ ಇದ್ದರು.

ಪ್ರಸ್ತುತ, ರೋಗಿಯ ಒಂಬತ್ತು ವರ್ಷದ ಮಗ ಮತ್ತು 24 ವರ್ಷದ ಸೋದರ ಮಾವ ಚಿಕಿತ್ಸೆಯಲ್ಲಿದ್ದಾರೆ. ಒಬ್ಬ ಆರೋಗ್ಯ ಕಾರ್ಯಕರ್ತ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ವ್ಯಕ್ತಿ ಕೂಡ ಧನಾತ್ಮಕ ಪರೀಕ್ಷೆ ನಡೆಸಿದರು. ಪ್ರಸ್ತುತ ಸೋಂಕಿಗೆ ಸಂಬಂಧಿಸಿದಂತೆ ನಾಲ್ಕು ಸಕ್ರಿಯ ಪ್ರಕರಣಗಳು ವರದಿ ಆಗಿದ್ದು ಮತ್ತು ಎರಡು ಸಾವು ಸಂಭವಿಸಿದೆ.

ಆರು ಮಂದಿಗೆ ನಿಫಾ  ಸೋಂಕು ದೃಢಪಟ್ಟಿರುವುದರಿಂದ, ಸೋಂಕಿತರ ಎಲ್ಲಾ ಅಪಾಯಕಾರಿ ಸಂಪರ್ಕಗಳನ್ನು ಪರೀಕ್ಷಿಸಲು ಕೇರಳ ಸರ್ಕಾರ ನಿರ್ಧರಿಸಿದೆ.

ಸೆಪ್ಟೆಂಬರ್ 16 ರವರೆಗೆ ಶಾಲೆಗೆ ರಜೆ

ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಅವರು ಪ್ರದೇಶದಲ್ಲಿ ನಿಫಾ ವೈರಸ್ ಹರಡಿರುವ ಕಾರಣ ಶಾಲಾ ಕಾಲೇಜು ರಜೆಯನ್ನು ಸೆಪ್ಟೆಂಬರ್ 16 ರವರೆಗೆ ವಿಸ್ತರಿಸಿದ್ದಾರೆ. ಅಂಗನವಾಡಿಗಳು, ಮದರಸಾಗಳು, ಟ್ಯೂಷನ್ ಸೆಂಟರ್‌ಗಳು ಮತ್ತು ವೃತ್ತಿಪರ ಕಾಲೇಜುಗಳಿಗೂ ಇದು ಅನ್ವಯಿಸುತ್ತದೆ. ಸೆಪ್ಟೆಂಬರ್ 14 ಮತ್ತು 15 ರಂದು ಈ ಹಿಂದೆ ಘೋಷಿಸಲಾದ ಎರಡು ದಿನಗಳ ರಜೆಯ ಮುಂದುವರಿಕೆಯಲ್ಲಿ ಈ ನಿರ್ಧಾರವನ್ನು ಪರಿಗಣಿಸಲಾಗಿದೆ.

ಅಪರೂಪದ ಮತ್ತು ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷೆಯ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಶಿಕ್ಷಣ ಸಂಸ್ಥೆಗಳು ಈ ದಿನಗಳಲ್ಲಿ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಬಹುದು.

ಇದನ್ನೂ ಓದಿNipah Virus: ನಿಫಾ ವೈರಸ್​​ನಿಂದ ಸಾವುಗಳು ಹೆಚ್ಚುತ್ತಿವೆ.. ದೇಶದಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬರುತ್ತಿದೆಯಾ?

ಫೇಸ್‌ಬುಕ್ ಪೋಸ್ಟ್‌ನಲ್ಲಿ ಜಿಲ್ಲಾಧಿಕಾರಿ ಎ ಗೀತಾ ಅವರು, ‘ಜಿಲ್ಲೆಯಲ್ಲಿರುವ ಎಲ್ಲಾ ಟ್ಯೂಷನ್ ಸೆಂಟರ್‌ಗಳು ಮತ್ತು ಕೋಚಿಂಗ್ ಸೆಂಟರ್‌ಗಳು ಈ ದಿನಗಳಲ್ಲಿ ಕಾರ್ಯನಿರ್ವಹಿಸಬಾರದು. ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ಏರ್ಪಡಿಸಬಹುದು. ಈ ದಿನಗಳು ಸಂಭ್ರಮಾಚರಣೆಯ ಸಂದರ್ಭವಾಗಬಾರದು. ಅನಗತ್ಯ ಪ್ರವಾಸ ಮತ್ತು ಸಭೆಗಳನ್ನು ತಪ್ಪಿಸಿ. ಎಚ್ಚರಿಕೆಯೇ ತಡೆಗಟ್ಟುವಿಕೆ’ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ