AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಟು ತಿಂಗಳ ಹಿಂದೆಯೇ ಶೇಖ್ ಹಸೀನಾ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಜ್ಯೋತಿಷಿ ಪ್ರಶಾಂತ್​ ಕಿಣಿ ಕಳೆದ ಎಂಟು ವರ್ಷಗಳ ಹಿಂದೆಯೇ ಬಾಂಗ್ಲಾದೇಶ ಹಾಗೂ ಶೇಖ್​ ಹಸೀನಾ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ಹೇಳಿರುವ ಸಮಯಕ್ಕಿಂತ ಐದು ತಿಂಗಳ ಮೊದಲೇ ಎಲ್ಲವೂ ನಡೆದುಹೋಗಿದೆ. ಉದ್ಯೋಗ ಮೀಸಲಾಯಿತಿ ವಿಚಾರದಲ್ಲಿ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಎಂಟು ತಿಂಗಳ ಹಿಂದೆಯೇ ಶೇಖ್ ಹಸೀನಾ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಶೇಖ್ ಹಸೀನಾ
ನಯನಾ ರಾಜೀವ್
|

Updated on: Aug 06, 2024 | 2:30 PM

Share

ಬಾಂಗ್ಲಾದೇಶದಲ್ಲಿ ಅಶಾಂತಿ ನೆಲೆಸಿದೆ, ಪ್ರಧಾನಿ ಶೇಖ್​ ಹಸೀನಾ ವಿರುದ್ಧ ಆರಂಭವಾದ ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ರಾಜೀನಾಮೆ ಬಳಿಕ ಸೇನೆಯು ಕಮಾಂಡ್ ತೆಗೆದುಕೊಂಡಿದೆ. ಕಳೆದ ಎಂಟು ತಿಂಗಳ ಹಿಂದೆಯೇ ಜ್ಯೋತಿಷಿ ಶೇಖ್ ಹಸೀನಾ ರಾಜಕೀಯ ಹಾಗೂ ಬಾಂಗ್ಲಾದೇಶದ ಪರಿಸ್ಥಿತಿ ಬಗ್ಗೆ ಭವಿಷ್ಯ ನುಡಿದಿದ್ದರು.

ಶೇಖ್ ಹಸೀನಾ ಅವರು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ, ಸದ್ಯಕ್ಕೆ ಅವರು ಇಲ್ಲಿಯೇ ಇರುತ್ತಾರೆ. ಜ್ಯೋತಿಷಿ ಪ್ರಶಾಂತ್ ಕಿಣಿ ಶೇಖ್ ಹಸೀನಾ ಅವರ ರಾಜಕೀಯ ಭವಿಷ್ಯವನ್ನು 8 ತಿಂಗಳ ಮೊದಲೇ ನುಡಿದಿದ್ದರು.

ಜ್ಯೋತಿಷಿ ಪ್ರಶಾಂತ್ ಕಿಣಿ ಸಾಮಾಜಿಕ ಜಾಲತಾಣದಲ್ಲಿ ಶೇಖ್ ಹಸೀನಾ ಬಗ್ಗೆ ಭವಿಷ್ಯ ನುಡಿದಿದ್ದಾರೆ ಆಕೆಯನ್ನು ಕೊಲೆ ಮಾಡಲು ಯತ್ನಿಸಬಹುದು. ಎಚ್ಚರದಿಂದಿರಿ ಎಂದು ಹೇಳಿದ್ದರು. ಜ್ಯೋತಿಷಿ ಪ್ರಶಾಂತ್ ಕಿಣಿ, ಆಗಸ್ಟ್ 5 ರಂದು ಮತ್ತೊಮ್ಮೆ ತಮ್ಮ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ಆಗಸ್ಟ್ 2024 ಶೇಖ್ ಹಸೀನಾಗೆ ಸಮಸ್ಯೆಗಳಿಂದ ತುಂಬಿರುತ್ತದೆ ಎಂದು ಬರೆದಿದ್ದೆ ಹಾಗೆಯೇ ಆಯಿತು ಎಂದಿದ್ದಾರೆ.

ಮತ್ತಷ್ಟು ಓದಿ: All Party Meeting: ಹಸೀನಾ ಮೊದಲು ಚೇತರಿಸಿಕೊಳ್ಳಲಿ, ಸರ್ವಪಕ್ಷಗಳ ಸಭೆಯಲ್ಲಿ ಜೈಶಂಕರ್ ಮಾತು

ಪ್ರಶಾಂತ್ ಕಿಣಿ ಜನವರಿ 13ರಂದು ಪೋಸ್ಟ್​ನಲ್ಲಿ ಆಗಸ್ಟ್ 2025 ಮತ್ತು ಮಾರ್ಚ್ 2026 ರ ನಡುವೆ ಬಾಂಗ್ಲಾದೇಶದಲ್ಲಿ ಮಿಲಿಟರಿ ದಂಗೆ ಸಂಭವಿಸಬಹುದು ಎಂದು ಹೇಳಿದ್ದರು. ಈ ಸಮಯದಲ್ಲಿ, ಶೇಖ್ ಹಸೀನಾಳನ್ನು ಹತ್ಯೆ ಮಾಡಲು ಹಲವು ಪ್ರಯತ್ನಗಳು ನಡೆಯಬಹುದು.ವಿಷ್ಯವಾಣಿಯ ಸಮಯಕ್ಕೆ 5 ತಿಂಗಳ ಮೊದಲು, ಶೇಖ್ ಹಸೀನಾ ಅವರ ಸರ್ಕಾರವು ಬಾಂಗ್ಲಾದೇಶದಲ್ಲಿ ಅಧಿಕಾರದಿಂದ ಕೆಳಗಿಳಿಯಿತು.

ಬಾಂಗ್ಲಾದೇಶದೊಂದಿಗಿನ ಸಂಬಂಧಗಳ ಭವಿಷ್ಯ ಬಾಂಗ್ಲಾದೇಶಕ್ಕೆ ಬರುವ ಸರ್ಕಾರವು ಭಾರತದೊಂದಿಗೆ ಸ್ನೇಹಪರವಾಗಿರಬಹುದು, ಆದರೆ ಬಾಂಗ್ಲಾದೇಶದ ಜನರು ಭಾರತವನ್ನು ದ್ವೇಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಒಂದು ರಾಷ್ಟ್ರವಾಗಿ ಬದುಕಲು ಬಾಂಗ್ಲಾದೇಶಕ್ಕೆ ಭಾರತದ ಅಗತ್ಯವಿದೆ. ಇದರಿಂದಾಗಿ ಯಾರೇ ಅಧಿಕಾರದಲ್ಲಿದ್ದರೂ ಭಾರತದೊಂದಿಗೆ ಸ್ನೇಹದಿಂದ ಇರುತ್ತಾರೆ. ಬಾಂಗ್ಲಾದೇಶದ ಜನರ ಬಗ್ಗೆ ಭಾರತ ಜಾಗರೂಕರಾಗಿರಬೇಕು ಎಂದು ಬರೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ