AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank holidays February 2021: RBIನಿಂದ ಬ್ಯಾಂಕ್ ರಜೆ ಪಟ್ಟಿ ಪ್ರಕಟ, ಫೆಬ್ರವರಿಯಲ್ಲಿ 6 ದಿನ ರಜೆ ಸೇರ್ಪಡೆ

ಈ ತಿಂಗಳ ನಾಲ್ಕು ಭಾನುವಾರಗಳು ಮತ್ತು ಎರಡು ಶನಿವಾರಗಳಂದು ಬ್ಯಾಂಕ್ ರಜೆಯಾಗಿರುತ್ತದೆ. ಜೊತೆಗೆ, ಆರು ಪ್ರಾದೇಶಿಕ ರಜೆಗಳು ಕೂಡ ಬ್ಯಾಂಕ್​ಗಳಿಗಿವೆ.

Bank holidays February 2021: RBIನಿಂದ ಬ್ಯಾಂಕ್ ರಜೆ ಪಟ್ಟಿ ಪ್ರಕಟ, ಫೆಬ್ರವರಿಯಲ್ಲಿ 6 ದಿನ ರಜೆ ಸೇರ್ಪಡೆ
ಸಾಂದರ್ಭಿಕ ಚಿತ್ರ
TV9 Web
| Updated By: ganapathi bhat|

Updated on:Apr 06, 2022 | 8:25 PM

Share

ವರ್ಷದ ಆರಂಭದಲ್ಲಿ 2021ರ ಬ್ಯಾಂಕ್​ಗಳ ರಜಾದಿನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿತ್ತು. ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್​ಗಳು ಜನರ ಸೇವೆಗೆ ಲಭ್ಯವಿರುವುದಿಲ್ಲ ಎಂದು ಅಧಿಕೃತ ಪ್ರಕಟಣೆ ಕೊಟ್ಟಿತ್ತು. ಅದರಂತೆ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್​ಗಳು 12 ರಜಾದಿನಗಳನ್ನು ಹೊಂದಿದೆ. ನಾಲ್ಕು ಭಾನುವಾರಗಳು, ಎರಡು ಶನಿವಾರಗಳ ಜೊತೆಗೆ ಆರು ಇತರೆ ರಜಾದಿನಗಳನ್ನು ಭಾರತದ ವಿವಿಧ ಪ್ರದೇಶದ ಬ್ಯಾಂಕ್​ಗಳು ಪಡೆಯಲಿವೆ.

ಆರ್​ಬಿಐ ಸೂಚನೆಯಂತೆ, ಸಾರ್ವಜನಿಕ ರಜಾದಿನಗಳಂದು ಬ್ಯಾಂಕ್​ಗಳು ಮುಚ್ಚಿರಲಿವೆ. ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಿರುತ್ತದೆ. ಪ್ರಾದೇಶಿಕವಾಗಿ ರಜಾದಿನಗಳಲ್ಲಿ ವ್ಯತ್ಯಾಸ ಇರುತ್ತದೆ. ಗಣರಾಜ್ಯೋತ್ಸವ (ಜ.26), ಸ್ವಾತಂತ್ರ್ಯ ದಿನಾಚರಣೆ (ಆ.15), ಗಾಂಧಿ ಜಯಂತಿ (ಅ.2), ಕ್ರಿಸ್​ಮಸ್ (ಡಿ.25) ಇಂತಹ ರಜಾದಿನಗಳು ಇಡೀ ದೇಶಕ್ಕೆ ಒಂದೇ ಆಗಿರುತ್ತದೆ. ಆದರೆ, ಉಳಿದ ಕೆಲವು ಹಬ್ಬಗಳಿಗೆ ಪ್ರದೇಶಾವಾರು ವ್ಯತ್ಯಾಸವಿರುತ್ತದೆ.

ಫೆಬ್ರವರಿ ತಿಂಗಳ ಕೆಲವು ದಿನಗಳಲ್ಲಿ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ನಾಲ್ಕು ಭಾನುವಾರಗಳು ಮತ್ತು ಎರಡು ಶನಿವಾರಗಳಂದು ಬ್ಯಾಂಕ್ ರಜೆಯಾಗಿರುತ್ತದೆ. ಜೊತೆಗೆ, ಆರು ಪ್ರಾದೇಶಿಕ ರಜೆಗಳು ಕೂಡ ಬ್ಯಾಂಕ್​ಗಳಿಗಿವೆ. ಆದರೆ, ಈ ರಜೆಗಳು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ.

ಫೆಬ್ರವರಿ ತಿಂಗಳ ಬ್ಯಾಂಕ್ ರಜೆ ಪಟ್ಟಿ: ಫೆಬ್ರವರಿ 12: ಲೋಸರ್/ ಸೋನಮ್ ಲೊಚ್ಚರ್ (ಗ್ಯಾಂಗ್ಟಾಕ್) ಫೆಬ್ರವರಿ 15: Lui-Ngai-Ni (ಇಂಫಾಲ್) ಫೆಬ್ರವರಿ 16: ಸರಸ್ವತಿ ಪೂಜಾ/ ಶ್ರೀ ಪಂಚಮಿ (ಅಗರ್ತಲ, ಭುವನೇಶ್ವರ್ ಮತ್ತು ಕೋಲ್ಕತ್ತಾ) ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ್, ನಾಗ್ಪುರ್ ಮತ್ತು ಮುಂಬೈ) ಫೆಬ್ರವರಿ 20: ಸ್ಟೇಟ್ ಡೇ (ಐಜಾವ್ಲ್) ಫೆಬ್ರವರಿ 26: ಹಜರತ್ ಅಲಿ ಹುಟ್ಟುಹಬ್ಬ (ಲಕ್ನೋ ಮತ್ತು ಕಾನ್ಪುರ್)

ಪ್ರದೇಶವಾರು ಹಬ್ಬ-ಹರಿದಿನಗಳಲ್ಲಿ ಪ್ರಾದೇಶಿಕ ಬ್ಯಾಂಕ್​ಗಳ ರಜೆಯಾಗಿರುತ್ತದೆ. ಉಳಿದ ಪ್ರದೇಶ ಅಥವಾ ರಾಜ್ಯಗಳಲ್ಲಿ ಬ್ಯಾಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್​ಗಳು ರಜೆ ಇದ್ದರೂ, ಮೊಬೈಲ್ ಮತ್ತು ಇಂಟರ್​ನೆಟ್ ಬ್ಯಾಂಕ್​ಗಳು ಸಾಮಾನ್ಯವಾಗಿ ಈ ವೇಳೆಯೂ ಕಾರ್ಯನಿರ್ವಹಿಸುತ್ತವೆ. ಆದರೆ ಯಾವುದೇ ಅಡಚಣೆ ಉಂಟಾಗದಂತೆ ಮೊದಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು.

Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್​, ಆಟೊಮೊಬೈಲ್​ ವಲಯ ಜಿಗಿತ

Published On - 9:57 pm, Mon, 1 February 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು