ಚಂಡೀಗಢದಲ್ಲಿ 2 ಎಕರೆ ಜಾಗದಲ್ಲಿ ಅರವಿಂದ್ ಕೇಜ್ರಿವಾಲ್ ಹೊಸ ‘ಶೀಷ್ ಮಹಲ್’ ನಿರ್ಮಾಣ; ಬಿಜೆಪಿ ಆರೋಪ
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಐಷಾರಾಮಿ ಬಂಗಲೆ ಶೀಷ್ ಮಹಲ್ ವಿವಾದದ ಬಳಿಕ ಇದೀಗ ಛತ್ತೀಸ್ಗಢದಲ್ಲಿ ಕೂಡ ಅದೇ ರೀತಿಯ ಬಂಗಲೆಯನ್ನು ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಂಜಾಬ್ ಸರ್ಕಾರವು ಅರವಿಂದ್ ಕೇಜ್ರಿವಾಲ್ ಅವರಿಗೆ ಚಂಡೀಗಢದಲ್ಲಿ "7 ಸ್ಟಾರ್ ಐಷಾರಾಮಿ ಬಂಗಲೆ" ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿ, ಅಕ್ಟೋಬರ್ 31: ಅರವಿಂದ್ ಕೇಜ್ರಿವಾಲ್ ವಿರುದ್ಧದ ‘ಶೀಷ್ ಮಹಲ್’ ವಿವಾದ ಮತ್ತೆ ಚರ್ಚೆಯಾಗುತ್ತಿದೆ. ಈ ಬಾರಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಚಂಡೀಗಢದಲ್ಲಿ 2 ಎಕರೆ ವಿಸ್ತೀರ್ಣದ ವಿಶಾಲವಾದ ಹೊಸ ಬಂಗಲೆ ನೀಡಲಾಗಿದೆ ಎಂದು ಬಿಜೆಪಿ ಹೊಸ ವಾಗ್ದಾಳಿ ನಡೆಸಿದೆ. ಆದರೆ, ಈ ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದ ಎಎಪಿ, ಬಿಜೆಪಿ ತನ್ನ ಹೇಳಿಕೆಯನ್ನು ದೃಢೀಕರಿಸಲು ದಾಖಲೆ ತೋರಿಸುವಂತೆ ಒತ್ತಾಯಿಸಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪಂಜಾಬ್ ರಾಜಧಾನಿ ಚಂಡೀಗಢದಲ್ಲಿ ಭಗವಂತ್ ಮಾನ್ ನೇತೃತ್ವದ ಸರ್ಕಾರವು “7-ಸ್ಟಾರ್ ಐಷಾರಾಮಿ ಬಂಗಲೆ”ಯನ್ನು ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಬಂಗಲೆಯ ವೈಮಾನಿಕ ಫೋಟೋವನ್ನು ಹಂಚಿಕೊಂಡ ಬಿಜೆಪಿ, ಚಂಡೀಗಢದ ಸೆಕ್ಟರ್ 2ನಲ್ಲಿರುವ ಎರಡು ಎಕರೆ ನಿವಾಸವನ್ನು ಮುಖ್ಯಮಂತ್ರಿ ಕೋಟಾದಡಿಯಲ್ಲಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದೆ.
Delhi’s “Sheesh Mahal” may be empty — but Arvind Kejriwal has built an even grander one in Punjab!
A 2-acre, 7-star CM bungalow in Chandigarh’s Sector 2 — gifted by Bhagwant Mann’s AAP government — is now his new royal palace. Yesterday, Kejriwal took off from this mansion in a… pic.twitter.com/fWkowxiqAp
— BJP Chandigarh (@BJP4Chandigarh) October 31, 2025
ಇದನ್ನೂ ಓದಿ: Arvind Kejriwal: ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ಗೆ ಸೋಲು, ಎಎಪಿ ವರಿಷ್ಠಗೆ ಭಾರೀ ಮುಖಭಂಗ
“ಕಾಮನ್ ಮ್ಯಾನ್ ಎಂದು ನಟಿಸಿದ ವ್ಯಕ್ತಿ ದೆಹಲಿಯ ನಂತರ ಪಂಜಾಬ್ನಲ್ಲಿ ಮತ್ತೊಂದು ಭವ್ಯವಾದ ಶೀಷ್ ಮಹಲ್ ಅನ್ನು ನಿರ್ಮಿಸಿದ್ದಾರೆ. ದೆಹಲಿಯ ‘ಶೀಷ್ ಮಹಲ್’ ಅನ್ನು ಖಾಲಿ ಮಾಡಿದ ನಂತರ ಅರವಿಂದ್ ಕೇಜ್ರಿವಾಲ್ ಪಂಜಾಬಿನಲ್ಲಿ ಇನ್ನೊಂದು ಭವ್ಯವಾದ ಒಂದನ್ನು ನಿರ್ಮಿಸಿದ್ದಾರೆ” ಎಂದು ಬಿಜೆಪಿಯ ದೆಹಲಿ ಘಟಕವು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: Parvesh Verma: ಅರವಿಂದ್ ಕೇಜ್ರಿವಾಲ್ ಎದುರು ಗೆದ್ದು ದೆಹಲಿ ಸಿಎಂ ರೇಸ್ನಲ್ಲಿ ಮೊದಲ ಸ್ಥಾನದಲ್ಲಿರುವ ಪರ್ವೇಶ್ ವರ್ಮಾ ಯಾರು?
ಇದನ್ನು ಆಮ್ ಆದ್ಮಿ ಪಕ್ಷ ನಿರಾಕರಿಸಿದೆ. ಬಿಜೆಪಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆ ಮಂಜೂರು ಮಾಡಲಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಆಪ್ ಆರೋಪಿಸಿದೆ. “ಮನೆ ಹಂಚಿಕೆ ಪತ್ರ ಎಲ್ಲಿದೆ?” ಎಂದು ಪ್ರಶ್ನಿಸಿದ ಎಎಪಿ, ಬಿಜೆಪಿಯ ಆರೋಪಗಳು ಆಧಾರರಹಿತ ಎಂದು ತಳ್ಳಿಹಾಕಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




