ರೇಪ್ ಆರೋಪ: ಬಿಜೆಪಿ ಮಾಜಿ ಸಂಸದ ಚಿನ್ಮಯಾನಂದಗೆ 14 ದಿನ ನ್ಯಾಯಾಂಗ ಬಂಧನ
ಶಹಜಾನ್ ಪುರ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದ ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರನ್ನ ಶುಕ್ರವಾರ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯವು 14 ದಿನಗಳ ಕಾಲ ಮಾಜಿ ಸಂಸದ ಚಿನ್ಮಯಾನಂದರನ್ನು ಜೈಲಿಗೆ ಕಳುಹಿಸಿದೆ. ಕೇಂದ್ರದ ಮಾಜಿ ಸಚಿವ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಪರಮಾಪ್ತ ಸ್ವಾಮಿ ಚಿನ್ಮಯಾನಂದ ಅವರು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರ ಆಶ್ರಮಕ್ಕೆ ಸೇರಿದ ವಿದ್ಯಾರ್ಥಿನಿ, ಇತ್ತೀಚೆಗಷ್ಟೇ 72 ವರ್ಷದ ಸ್ವಾಮಿ ಚಿನ್ಮಯಾನಂದ […]
ಶಹಜಾನ್ ಪುರ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದ ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರನ್ನ ಶುಕ್ರವಾರ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ನ್ಯಾಯಾಲಯವು 14 ದಿನಗಳ ಕಾಲ ಮಾಜಿ ಸಂಸದ ಚಿನ್ಮಯಾನಂದರನ್ನು ಜೈಲಿಗೆ ಕಳುಹಿಸಿದೆ.
ಕೇಂದ್ರದ ಮಾಜಿ ಸಚಿವ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಪರಮಾಪ್ತ ಸ್ವಾಮಿ ಚಿನ್ಮಯಾನಂದ ಅವರು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರ ಆಶ್ರಮಕ್ಕೆ ಸೇರಿದ ವಿದ್ಯಾರ್ಥಿನಿ, ಇತ್ತೀಚೆಗಷ್ಟೇ 72 ವರ್ಷದ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಎಸಗಿರುವ ಬಗ್ಗೆ ಆರೋಪ ಮಾಡಿದ್ದರು.
ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ತೆಗೆದು ಸುಮಾರು ಒಂದು ವರ್ಷ ಕಾಲ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ತಕ್ಷಣ ಸ್ವಾಮಿ ಚಿನ್ಮಯಾನಂದ ಅವರನ್ನ ಬಂಧಿಸಬೇಕು. ಇಲ್ಲದಿದ್ರೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಬೆದರಿಕೆ ಹಾಕಿದ್ದಳು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಸ್ವಾಮಿ ಚಿನ್ಮಯಾನಂದ ಇದೀಗ ಜೈಲು ಪಾಲಾಗಿದ್ದಾರೆ. ತನ್ನ ಆಶ್ರಮದಲ್ಲಿರುವ ಹಲವಾರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಪೆನ್ಡ್ರೈವ್ ಸೇರಿದಂತೆ ಹಲವು ಪ್ರಮುಖ ದಾಖಲೆಗಳನ್ನು ಎಸ್ಐಟಿ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Published On - 5:41 pm, Fri, 20 September 19