‘ಟಿಕ್ ಟಾಕ್’ ಚಟಕ್ಕೆ ಚಟ್ಟವೇರಿದ ಯುವಕ; ನಂದಿತು ಆ ಯುವಕನ ಬಾಳು
ಇತ್ತೀಚಿನ ದಿನಗಳಲ್ಲಿ ಎಂತಹವರ ಮೊಬೈನಲ್ಲೂ ‘ಟಿಕ್ ಟಾಕ್’ ಇದ್ದೇ ಇರುತ್ತೆ. ಅದ್ರಲ್ಲೂ ಹೆಚ್ಚಾಗಿ ‘ಟಿಕ್ ಟಾಕ್’ ಗೀಳಿಗೆ ಯುವಕರೇ ಅಡಿಕ್ಟ್ ಆಗಿರುವುದು ಬೇಸರದ ಸಂಗತಿಯಾಗಿದೆ. ಯುವಜನತೆಯನ್ನು ಸಾಕಷ್ಟು ಕಾಡಿರುವ ಈ ಟಿಕ್ ಟಾಕ್ನಿಂದ ಎಷ್ಟೋ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಕೋಲಾರದ ಯುವತಿಯೊಬ್ಬಳು ಟಿಕ್ ಟಾಕ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಳು. ಇದೀಗ ತೆಲಂಗಾಣದ ಗೋನಗುಪ್ಪಲದ ಕಪ್ಪಲ ಬಳಿ ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿ ಯುವಕ ಮೃತಪಟ್ಟಿದ್ದಾನೆ. ಇತ್ತೀಚೆಗಷ್ಟೇ ಮೂವರು ಯುವಕರು […]
ಇತ್ತೀಚಿನ ದಿನಗಳಲ್ಲಿ ಎಂತಹವರ ಮೊಬೈನಲ್ಲೂ ‘ಟಿಕ್ ಟಾಕ್’ ಇದ್ದೇ ಇರುತ್ತೆ. ಅದ್ರಲ್ಲೂ ಹೆಚ್ಚಾಗಿ ‘ಟಿಕ್ ಟಾಕ್’ ಗೀಳಿಗೆ ಯುವಕರೇ ಅಡಿಕ್ಟ್ ಆಗಿರುವುದು ಬೇಸರದ ಸಂಗತಿಯಾಗಿದೆ. ಯುವಜನತೆಯನ್ನು ಸಾಕಷ್ಟು ಕಾಡಿರುವ ಈ ಟಿಕ್ ಟಾಕ್ನಿಂದ ಎಷ್ಟೋ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮೊನ್ನೆಯಷ್ಟೇ ಕೋಲಾರದ ಯುವತಿಯೊಬ್ಬಳು ಟಿಕ್ ಟಾಕ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಳು. ಇದೀಗ ತೆಲಂಗಾಣದ ಗೋನಗುಪ್ಪಲದ ಕಪ್ಪಲ ಬಳಿ ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿ ಯುವಕ ಮೃತಪಟ್ಟಿದ್ದಾನೆ.
ಇತ್ತೀಚೆಗಷ್ಟೇ ಮೂವರು ಯುವಕರು ನಿಜಾಮಾಬಾದ್ನ ಗೋನಗುಪ್ಪಲದ ಚೆಕ್ ಡ್ಯಾಂ ಬಳಿ ಟಿಕ್ ಟಾಕ್ ಮಾಡುತ್ತಿದ್ದರು, ಈ ವೇಳೆ ಪ್ರವಾಹಕ್ಕೆ ಸಿಲುಕಿ ಮೂವರು ಯುವಕರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಆದ್ರೆ ದಿನೇಶ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಬಳಿಕ ಸ್ಥಳೀಯ ಪೊಲೀಸರು ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ.
Published On - 7:10 pm, Sun, 22 September 19