ಮದುವೆ ದಿನ ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಗೆ ಗುಂಡು ಹಾರಿಸಿ ಹತ್ಯೆಗೈದ ಮಾಜಿ ಪ್ರಿಯಕರ

ಬ್ಯೂಟಿ ಪಾರ್ಲರ್​ಗೆ ಬಂದ ಮಾಜಿ ಪ್ರಿಯತಮೆಯನ್ನು ಯುವಕನೊಬ್ಬ ಗುಂಡು ಹಾರಿಸಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಯುವಕ ಬೆನ್ನಿಗೊಂದು ಬ್ಯಾಗ್ ಹಾಗೂ ಕೈಯಲ್ಲಿ ಪಿಸ್ತೂಲ್ ಹಿಡಿದು ಬ್ಯೂಟಿ ಪಾರ್ಲರ್​ ಒಳಗೆ ಬಂದು ಗುಂಡು ಹಾರಿಸಿದ್ದಾನೆ.

ಮದುವೆ ದಿನ ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಗೆ ಗುಂಡು ಹಾರಿಸಿ ಹತ್ಯೆಗೈದ ಮಾಜಿ ಪ್ರಿಯಕರ
ಗುಂಡಿನ ದಾಳಿ

Updated on: Jun 25, 2024 | 2:15 PM

ಮದುವೆ ದಿನ ಸಿಂಗರಿಸಿಕೊಳ್ಳಲೆಂದು ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಯನ್ನು ಮಾಜಿ ಪ್ರಿಯಕರ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಯುವಕ ಬೆನ್ನಿಗೊಂದು ಬ್ಯಾಗ್ ಹಾಗೂ ಕೈಯಲ್ಲಿ ಪಿಸ್ತೂಲ್ ಹಿಡಿದು ಬ್ಯೂಟಿ ಪಾರ್ಲರ್​ ಒಳಗೆ ಬಂದಿದ್ದಾನೆ.

ಆತ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ, ನಂತರ 32 ಸೆಕೆಂಡುಗಳಲ್ಲಿ ಯುವಕ ಯುವತಿಯ ಎದೆಗೆ ಎರಡು ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಧ್ಯಪ್ರದೇಶದ ದಾತಿಯಾ ನಿವಾಸಿ 20 ವರ್ಷದ ಕಾಜಲ್ ಭಾನುವಾರ ವಿವಾಹವಾಗಬೇಕಿತ್ತು, ಪಕ್ಕದ ಮನೆಯ ಯುವಕ ದೀಪಕ್ ಎಂಬಾತ ಆಕೆಯನ್ನು ಇಷ್ಟಪಟ್ಟಿದ್ದ, ಇಬ್ಬರೂ ಮದುವೆಯಾಗಲು ಬಯಸಿದ್ದರು.
ಮದುವೆಗೆ ಸ್ವಲ್ಪ ಸಮಯದ ಮೊದಲು ಕಾಜಲ್ ಕೂಡ ದೀಪಕ್ ಜೊತೆ ಓಡಿ ಹೋಗಿದ್ದಳು. ಆದರೆ ನಂತರ ಅವಳು ತನ್ನ ಕುಟುಂಬ ಆಯ್ಕೆ ಮಾಡಿದ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದಳು.

ನಂತರ ಕುಟುಂಬವು ಕಾಜಲ್ ಮದುವೆಯನ್ನು ಝಾನ್ಸಿಯ ಚಿರ್ಗಾಂವ್‌ನ ಸಿಂತಾರಿ ಗ್ರಾಮದ ನಿವಾಸಿ ರಾಜ್ ಅವರೊಂದಿಗೆ ನಿಶ್ಚಯಿಸಿತು. ಕಾಜಲ್ ತಂದೆ ವರನಿಗೆ 8 ಲಕ್ಷದ 41 ಸಾವಿರ ರೂಪಾಯಿ ಮೌಲ್ಯದ ಕಾರನ್ನು ಸಹ ನೀಡಿದ್ದರು.

ಮತ್ತಷ್ಟು ಓದಿ: ಪ್ರಿಯತಮೆಗೆ ಬಾಡಿಗೆ ಮನೆ ಮಾಡಿಟ್ಟಿದ್ದ: ಆಗಾಗ ಬಂದು ಹೋಗುತ್ತಿದ್ದವ ನಿನ್ನೆ ಕೊಂದು ಹೋದ

ಆದರೆ ಮದುವೆಗೂ ಮುನ್ನ ಕಾಜಲ್ ದೀಪಕ್ ನಿಂದ ಕೊಲೆಯಾಗಿದ್ದಾಳೆ. ಭಾನುವಾರ ಮದುವೆ ಮೆರವಣಿಗೆಗೂ ಮುನ್ನ ರೆಡಿಯಾಗಲು ಕಾಜಲ್ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದರು. ಅಷ್ಟರಲ್ಲಿ ದೀಪಕ್ ಅಲ್ಲಿಗೆ ಬಂದು ತನ್ನ ಜತೆ ಬರುವಂತೆ ಕೇಳಿದ್ದಾನೆ.

ಆಕೆ ನಿರಾಕರಿಸಿದಾಗ ಎದೆಗೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ನೀನು ನನ್ನವಳಾಗದಿದ್ದರೆ ಬೇರೆಯವರಿಗೂ ನಿನ್ನನ್ನು ಸಿಗಲು ಬಿಡುವುದಿಲ್ಲ ಎಂದು ಹೇಳಿ ಹತ್ಯೆ ಮಾಡಿದ್ದಾನೆ, ಕಾಜಲ್ ಅಲ್ಲಿಯೇ ಸಾವನ್ನಪ್ಪಿದ್ದಾಳೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us