ಬ್ರಿಟಿಷ್ ಹೈಕಮಿಶನರ್ ಅಲ್ಲೆಕ್ಸ್ ಎಲ್ಲಿಸ್ ವಡಾ ಪಾವ್ ತಿಂದು ಹೇಳಿದ ಪಾಠವನ್ನು ಎಂದೂ ಮರೆಯುವಂತಿಲ್ಲ!

TV9 Digital Desk

| Edited By: preethi shettigar

Updated on: Sep 11, 2021 | 8:17 AM

ಎಂತಹುದ್ದೇ ಕೆಲಸವಿರಲಿ, ಇಡೀ ದಿನ ಎಷ್ಟೇ ಬ್ಯೂಸಿಯಾಗಿರಲಿ, ಆಯಾ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿಯ ಪ್ರಸಿದ್ಧ ಮತ್ತು ವಿಶೇಷ ತಿಂಡಿಯನ್ನು ಸವಿಯುವುದು ಬಹಳ ಮುಖ್ಯ.

ಬ್ರಿಟಿಷ್ ಹೈಕಮಿಶನರ್ ಅಲ್ಲೆಕ್ಸ್ ಎಲ್ಲಿಸ್ ವಡಾ ಪಾವ್ ತಿಂದು ಹೇಳಿದ ಪಾಠವನ್ನು ಎಂದೂ ಮರೆಯುವಂತಿಲ್ಲ!
ಅಲೆಕ್ಸ್ ಎಲ್ಲಿಸ್ ವಡಾ ಪಾವ್ ಸವಿದ ಪ್ರಕರಣವು

ಬ್ರಿಟಷ್ ಹೈಕಮಿಶನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಭಾರತದ ತಿಂಡಿಗಳೆಂದತರೆ ಪಂಚಪ್ರಾಣ. ಅದು ಪದೇ ಪದೇ ಸಾಬೀತಾಗುತ್ತಲೇ ಇದೆ. ಭಾರತದ ಮಸಾಲಾ ದೋಸೆ, ಇಡ್ಲಿ ವಡಾಗಳನ್ನೆಲ್ಲ ತಿನ್ನುತ್ತ ತಮ್ಮ ನಾಲಗೆಯ ದಾಹವನ್ನು ಈಡೇರಿಸುತ್ತ ಮತ್ತಷ್ಟು ಪ್ರಚೊದಿಸುತ್ತಲೆ ಇರುತ್ತಾರೆ ಅಲೆಕ್ಸ್ ಎಲ್ಲಿಸ್. ಈಮುನ್ನ ಅವರು ಬೆಂಗಳೂರಿನಲ್ಲಿ ಮಸಾಲೆ ದೋಸೆ ತಿಂದಿದ್ದು ಬಹಳ ಸುದ್ದಿಯಾಗಿತ್ತು. ಇದೀಗ ತಮ್ಮ ಕಾರ್ಯನಿಮಿತ್ತ ಮುಂಬೈಗೆ ತೆರಳಿದ್ದ ಅವರು ವಡಾ ಪಾವ್ ಸವಿದಿದ್ದಾರೆ. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಗಾಳಿ ಬೀಸುವಂತೆ ಮಾಡಿದೆ. ಏಕೆಂದರೆ ಅವರು ವಡಾ ಪಾವ್ ಸವಿದಿರುವ ಟ್ವೀಟ್​ಗೆ 19,000ಕ್ಕೂ ಹೆಚ್ಚು ಲೈಕ್ ಬಂದಿದೆ. ಆಸಕ್ತಿದಾಯಕ ಮತ್ತು ಕುತೂಹಲಕಾರಿ ಕಾಮೆಂಟುಗಳು ಹರಿದುಬಂದಿವೆ.

ಎಂತಹುದ್ದೇ ಕೆಲಸವಿರಲಿ, ಇಡೀ ದಿನ ಎಷ್ಟೇ ಬ್ಯೂಸಿಯಾಗಿರಲಿ, ಆಯಾ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿಯ ಪ್ರಸಿದ್ಧ ಮತ್ತು ವಿಶೇಷ ತಿಂಡಿಯನ್ನು ಸವಿಯುವುದು ಬಹಳ ಮುಖ್ಯ. ಇಲ್ಲದಿದ್ದರೆ ನಾವು ಏನನ್ನೂ ಕಳೆದುಕೊಳ್ಳುತ್ತೇವೆ ಎಂಬ ಜೀವನಪಾಠವನ್ನು ಬ್ರಿಟಿಷ್ ಹೈ ಕಮಿಶನರ್ ಅಲೆಕ್ಸ್ ಎಲ್ಲಿಸ್ ಈಮೂಲಕ ಹೇಳುತ್ತಿದ್ದಾರೆ ಅನಿಸುವಂತಿದೆ.

ಈಹಿಂದೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಲೆಕ್ಸ್ ಎಲ್ಲಿಸ್ ಭೇಟಿ ಮಾಡಿದ್ದರು. ತಮ್ಮ ಭೇಟಿಗೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಸಾಲೆ ದೋಸೆ ಸವಿದಿದ್ದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮಸಾಲೆ ಬೊಂಬಾಟ್ ಗುರು ಎಂದು ಟ್ವೀಟ್ ಮಾಡಿದ್ದರು. ಅಲ್ಲದೇ ಟ್ವಿಟರ್​​​ನಲ್ಲಿ ದಕ್ಷಿಣ ಭಾರತೀಯರೇ ನಾಳೆ ನಾನು ದೋಸೆ ಹೇಗೆ ತಿನ್ನಬೇಕು ಎಂಬ ಪ್ರಶ್ನೆಯೊಂದಿಗೆ ಟ್ವಿಟರ್ ಪೋಲ್ ಮಾಡಿದ್ದರು. ಕೈಯಿಂದ ಎಂಬ ಪೋಲ್ ಆಯ್ಕೆಗೆ ಶೇ92ರಷ್ಟು ಮಂದಿ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ:  ಮಸಾಲೆ ದೋಸೆ ಬೊಂಬಾಟ್ ಗುರು ಎಂದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್

ಬ್ರಿಟಿಷ್ ಹೈ ಕಮಿಷನರ್​ ಅಲೆಕ್ಸ್ ಎಲ್ಲಿಸ್​ಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್: ವಿಡಿಯೋ ವೈರಲ್

(British High Commissioner to India Alex Ellis tweets tastes vada pav in Mumbai )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada