ಹೈದರಾಬಾದ್​ನ ಬಂಜಾರಾ ಹಿಲ್ಸ್​​ನಿಂದ ಮತ್ತೊಂದು ಆಘಾತಕಾರಿ ಸುದ್ದಿ, ಖ್ಯಾತ ಫ್ಯಾಷನ್​ ಡಿಸೈನರ್​ ಅನುಮಾನಾಸ್ಪದ ಸಾವು

Fashion Designer Prathyusha Garimella: ಖಿನ್ನತೆಗೊಳಗಾಗಿ ಪ್ರತ್ಯೂಷಾ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ. ಡೆತ್​​ನೋಟ್​ ಬರೆದಿಟ್ಟು ಗರಿಮೆಳ್ಳ ಪ್ರತ್ಯೂಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗರಿಮೆಳ್ಳ ಪ್ರತ್ಯೂಷಾ ಬ್ಯಾಗ್​​ನಲ್ಲಿ ಕಾರ್ಬನ್ ಮೊನಾಕ್ಸೈಡ್ ಬಾಟಲ್ ಪತ್ತೆಯಾಗಿದೆ

ಹೈದರಾಬಾದ್​ನ ಬಂಜಾರಾ ಹಿಲ್ಸ್​​ನಿಂದ ಮತ್ತೊಂದು ಆಘಾತಕಾರಿ ಸುದ್ದಿ, ಖ್ಯಾತ ಫ್ಯಾಷನ್​ ಡಿಸೈನರ್​ ಅನುಮಾನಾಸ್ಪದ ಸಾವು
ಹೈದರಾಬಾದ್​ನಿಂದ ಮತ್ತೊಂದು ಆಘಾತಕಾರಿ ಸುದ್ದಿ, ಫ್ಯಾಷನ್​ ಡಿಸೈನರ್​ ಅನುಮಾನಾಸ್ಪದ ಸಾವು
TV9kannada Web Team

| Edited By: Apurva Kumar Balegere

Jun 11, 2022 | 8:50 PM

ಹೈದರಾಬಾದ್: ಮಹಿಳೆಯರ ಫ್ಯಾಷನ್​ ಡಿಸೈನಿಂಗ್​ ಕ್ಷೇತ್ರದಲ್ಲಿ ತಮ್ಮ ವಿನೂತನ ಶೈಲಿ ಡಿಸೈಗಳಿಂದ ಹೆಸರುವಾಸಿಯಾಗಿದ್ದ ಯುವತಿ ಇಹಲೋಕ ತ್ಯಜಿಸಿದ್ದಾರೆ. ಹೈದರಾಬಾದ್​​ನಲ್ಲಿ ಫ್ಯಾಷನ್​ ಡಿಸೈನರ್​ ಅನುಮಾನಾಸ್ಪದ ಸಾವು ಕಂಡಿದ್ದು, ಬಂಜಾರಾ ಹಿಲ್ಸ್​ ​ನಲ್ಲಿರುವ ತಮ್ಮ ನಿವಾಸದಲ್ಲಿ ಗರಿಮೆಳ್ಳ ಪ್ರತ್ಯೂಷಾ ಎಂಬ ಯುವತಿಯ (Prathyusha Garimella) ಮೃತದೇಹ ಪತ್ತೆಯಾಗಿದೆ. ಕಾರ್ಬನ್ ಮೊನಾಕ್ಸೈಡ್ (Carbon Monoxide) ಸೇವಿಸಿ ಪ್ರತ್ಯೂಷಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಖಿನ್ನತೆಗೊಳಗಾಗಿ ಪ್ರತ್ಯೂಷಾ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ. ಡೆತ್​​ನೋಟ್​ ಬರೆದಿಟ್ಟು ಗರಿಮೆಳ್ಳ ಪ್ರತ್ಯೂಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗರಿಮೆಳ್ಳ ಪ್ರತ್ಯೂಷಾ ಬ್ಯಾಗ್​​ನಲ್ಲಿ ಕಾರ್ಬನ್ ಮೊನಾಕ್ಸೈಡ್ ಬಾಟಲ್ ಪತ್ತೆಯಾಗಿದೆ ಎಂಬುದು ಗಮನಾರ್ಹ.

ಟಾಲಿವುಡ್​, ಬಾಲಿವುಡ್​​ ಗೆ ಫ್ಯಾಷನ್​ ಡಿಸೈನಿಂಗ್ ಮಾಡುತ್ತಿದ್ದರು:

ಅಮೆರಿಕದಲ್ಲಿ ಫ್ಯಾಷನ್​ ಡಿಸೈನಿಂಗ್​ ವ್ಯಾಸಂಗ ಮಾಡಿದ್ದ ಗರಿಮೆಳ್ಳ ಪ್ರತ್ಯೂಷಾ ಹೈದರಾಬಾದ್​​ನಲ್ಲಿ ವೃತ್ತಿ ಆರಂಭಿಸಿದ್ದರು. 2013 ರಲ್ಲಿ ತಮ್ಮದೇ ಹೆಸರಿನಲ್ಲಿ ಫ್ಯಾಷನ್​ ಡಿಸೈನಿಂಗ್ ಮಾಡಲಾರಂಭಿಸಿದ ಗರಿಮೆಳ್ಳ ಪ್ರತ್ಯೂಷಾ, ತಮ್ಮ ವೃತ್ತಿ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಟಾಲಿವುಡ್​, ಬಾಲಿವುಡ್​​ ಗೆ ಸಹ ಫ್ಯಾಷನ್​ ಡಿಸೈನಿಂಗ್ ಮಾಡುತ್ತಿದ್ದರು. ಖ್ಯಾತ ನಾಮರು ಇವರ ಫ್ಯಾಷನ್​ ಡಿಸೈನಿಂಗ್ ಗೆ ಮಾರುಹೋಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada