AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕೀಕೃತ ಮಿಲಿಟರಿ ಕಮಾಂಡ್: ಭಾರತ-ಪಾಕ್ ಉದ್ವಿಗ್ನತೆ ನಡುವೆ ಮೂರು ಸೇನೆಗಳಿಗೆ ಕೇಂದ್ರದ ಮಾರ್ಗಸೂಚಿ ಪ್ರಕಟ

ಕೇಂದ್ರ ರಕ್ಷಣಾ ಸಚಿವಾಲಯವು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಏಕೀಕೃತ ಮಿಲಿಟರಿ ಕಮಾಂಡ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ವ್ಯವಸ್ಥೆಯು ತ್ರಿವಿಧ ಪಡೆಗಳ ಕಾರ್ಯಚಟುವಟಿಕೆಯನ್ನು ಒಗ್ಗೂಡಿಸಿ, ಸಮನ್ವಯಿತ ನಿರ್ಧಾರಮಾಡಲು ಸಹಾಯ ಮಾಡಲಿದೆ.ಸುಲಭವಾಗಿ ಹೇಳುವುದಾದರೆ, ಒಂದು ಪ್ರದೇಶದಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯೆಲ್ಲಾ ಕಾರ್ಯನಿರ್ವಹಿಸುತ್ತಿರುವಾಗ ಬೇತರೆ ಬೇರೆ ಕಮಾಂಡರ್​ಗಳ ನಿರ್ಧಾರದಿಂದ ಗೊಂದಲ ಉಂಟಾಗಬಹುದು.

ಏಕೀಕೃತ ಮಿಲಿಟರಿ ಕಮಾಂಡ್: ಭಾರತ-ಪಾಕ್ ಉದ್ವಿಗ್ನತೆ ನಡುವೆ ಮೂರು ಸೇನೆಗಳಿಗೆ ಕೇಂದ್ರದ ಮಾರ್ಗಸೂಚಿ ಪ್ರಕಟ
ಭಾರತೀಯ ಸೇನೆ
ನಯನಾ ರಾಜೀವ್
| Edited By: |

Updated on:May 28, 2025 | 11:40 AM

Share

ನವದೆಹಲಿ, ಮೇ 28: ಏಕೀಕೃತ ಮಿಲಿಟರಿ ಕಮಾಂಡ್(Unified Military Command)​ಗೆ ಸಂಬಂಧಿಸಿದಂತೆ ಮೂರು ಸೇನೆಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಏಕೀಕೃತ ಮಿಲಿಟರಿ ಕಮಾಂಡ್ ಎಂದರೆ ದೇಶದ ಮೂರು ಪ್ರಮುಖ ರಕ್ಷಣಾ ಪಡೆಗಳು ಅಂದರೆ ಸೇನೆ, ನೌಕಾಪಡೆ ಹಾಗೂ ವಾಯುಪಡೆ ಒಂದೇ ನಾಯಕತ್ವದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ.ಇದು ಯುದ್ಧದ ಸಂದರ್ಭದಲ್ಲಿ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ವ್ಯವಸ್ಥೆಯಾಗಿದೆ.

ಸುಲಭವಾಗಿ ಹೇಳುವುದಾದರೆ, ಒಂದು ಪ್ರದೇಶದಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯೆಲ್ಲಾ ಕಾರ್ಯನಿರ್ವಹಿಸುತ್ತಿರುವಾಗ ಬೇರೆ ಬೇರೆ ಕಮಾಂಡರ್​ಗಳ ನಿರ್ಧಾರದಿಂದ ಗೊಂದಲ ಉಂಟಾಗಬಹುದು. ಆದರೆ ಏಕೀಕೃತ ಕಮಾಂಡ್ ವ್ಯವಸ್ಥೆಯಡಿಯಲ್ಲಿ ಒಬ್ಬರೇ ಅಧಿಕಾರಿಯು ಎಲ್ಲಾ ಪಡೆಗಳ ಕಾರ್ಯ ಚಟುವಟಿಕೆಗಳನ್ನು ನಿರ್ದೇಶಿಸುತ್ತಾರೆ.

ಇದನ್ನೂ ಓದಿ
Image
ನಿರೀಕ್ಷೆಯೇ ಮಾಡಿರದ ಸಾವು ಆ ಉಗ್ರರಿಗೆ ಬರಲಿದೆ: ಮೋದಿ
Image
ಪಹಲ್​​ಗಾಂ ಘಟನೆಯಿಂದ ಪಾಕ್ ಆರ್ಥಿಕತೆಗೆ ಎಷ್ಟು ಹಾನಿ?
Image
ಪಹಲ್ಗಾಮ್ ಉಗ್ರ ದಾಳಿಯನ್ನು ಸಂಭ್ರಮಿಸಿತೇ ಭಾರತದಲ್ಲಿರುವ ಪಾಕ್ ಹೈಕಮಿಷನ್?
Image
ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಪಾಕಿಸ್ತಾನಕ್ಕಾಗುವ ನಷ್ಟವೇನು?

ಇಂಟರ್-ಸರ್ವೀಸ್ ಆರ್ಗನೈಸೇಷನ್ (ಕಮಾಂಡ್, ನಿಯಂತ್ರಣ ಮತ್ತು ಶಿಸ್ತು) ಕಾಯ್ದೆ 2023 ರ ಅಡಿಯಲ್ಲಿ ರೂಪಿಸಲಾದ ಈ ನಿಯಮಗಳನ್ನು ಗೆಜೆಟ್ ಅಧಿಸೂಚನೆಯ ಮೂಲಕ ತಿಳಿಸಲಾಗಿದ್ದು, ಮೇ 27 ರಿಂದಲೇ ಜಾರಿಗೆ ಬಂದಿದೆ. ಭೂ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಿಗಾಗಿ ಮಾರ್ಗಸೂಚಿ ಸಿದ್ಧವಿದೆ. ಇದರಿಂದಾಗಿ ಸಶಸ್ತ್ರಪಡೆಗಳ ನಡುವಿನ ಏಕತೆ ಮತ್ತಷ್ಟು ಗಟ್ಟಿಯಾಗಲಿದೆ.

ಮತ್ತಷ್ಟು ಓದಿ: India vs Pak: ಯಾರ ಬಲ ಹೆಚ್ಚು? ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಶಕ್ತಿಗಳ ಒಂದು ಹೋಲಿಕೆ

2023 ರ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ್ದವು.ಆಗಸ್ಟ್ 15, 2023 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದವು ಮತ್ತು ಮೇ 08, 2024 ರ ಗೆಜೆಟ್ ಅಧಿಸೂಚನೆಯ ಪ್ರಕಾರ, ಕಾಯಿದೆಯು ಮೇ 10, 2024 ರಿಂದ ಜಾರಿಗೆ ಬಂದಿತ್ತು.

ಈ ಕಾಯಿದೆಯು ISO ಗಳ ಕಮಾಂಡರ್‌ಗಳು ಮತ್ತು ಅಧಿಕಾರಿಗಳು ತಮ್ಮ ಅಡಿಯಲ್ಲಿ ಸೇವೆ ಸಲ್ಲಿಸುವ ಸೇವಾ ಸಿಬ್ಬಂದಿಯ ಮೇಲೆ ಆಜ್ಞೆ ಮತ್ತು ನಿಯಂತ್ರಣ ಸಾಧಿಸಲು ಅಧಿಕಾರ ನೀಡುತ್ತದೆ. ಸಂಸ್ಥೆಗಳಲ್ಲಿ ಶಿಸ್ತು ಮತ್ತು ಆಡಳಿತದ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸುತ್ತದೆ. ಸಶಸ್ತ್ರ ಪಡೆಗಳ ಪ್ರತಿಯೊಂದು ಶಾಖೆಗೆ ಅನ್ವಯವಾಗುವ ವಿಶಿಷ್ಟ ಸೇವಾ ಪರಿಸ್ಥಿತಿಗಳನ್ನು ಬದಲಾಯಿಸದೆ ಇದನ್ನು ಸಾಧಿಸಲಾಗುತ್ತದೆ.

ಥಿಯೇಟರ್ ಕಮಾಂಡ್ ಎನ್ನುವುದು ಹೊಸ ಪರಿಕಲ್ಪನೆಯೇ?

ಭಾರತ ಈಗ ಥಿಯೇಟರ್ ಕಮಾಂಡ್ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ, ಉದಾಹರಣೆಗೆ ಭಾರತದ ಪಶ್ಚಿಮ ಗಡಿಯಲ್ಲಿ (ಪಾಕಿಸ್ತಾನ ಸಮೀಪ) ವೆಸ್ಟರ್ನ್​ ಥಿಯೇಟರ್ ಕಮಾಂಡ್ ಇದ್ದರೆ, ಆ ಭಾಗದ ಸೇನೆ, ನೌಕಾಪಡೆ , ಮತ್ತು ವಾಯುಪಡೆಗಳು ಒಬ್ಬರ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತವೆ.

ಥಿಯೇಟರ್ ಕಮಾಂಡ್ ಎಂಬುದು ಹೊಸ ಪರಿಕಲ್ಪನೆಯಲ್ಲ. ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ಈಗಾಗಲೇ ಥಿಯೇಟರ್ ಕಮಾಂಡ್ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಿದೆ. ಪಾಕಿಸ್ತಾನದಲ್ಲಿಯೂ ಇಂಥ ಪ್ರಯತ್ನಗಳು ಆರಂಭವಾಗಿವೆ.

ಭಾರತದಲ್ಲಿಯೂ ಕಾರ್ಗಿಲ್ ಸಂಘರ್ಷದ ನಂತರ ಥಿಯೇಟರ್ ಕಮಾಂಡ್ ಮಾದರಿಯಲ್ಲಿ ಸಶಸ್ತ್ರಪಡೆಗಳ ಪುನರ್ ಸಂಘಟನೆ ಬಗ್ಗೆ ಚರ್ಚೆ ಆರಂಭವಾಯಿತು. ಹಲವು ಹಂತಗಳ ಸಮಿತಿಗಳು ಈ ಮಾದರಿಯ ಸೇನಾ ಸಂಘಟನೆಗೆ ಶಿಫಾರಸು ಮಾಡಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Wed, 28 May 25