ಕೇಂದ್ರವು ಲಸಿಕಾ ನೀತಿಯನ್ನು ಬದಲಾಯಿಸಿದೆ, ಏನೇನು ಬದಲಾಗಿದೆ ಅಂತ ತಿಳಿದುಕೊಳ್ಳಲು ಇದನ್ನು ಓದಿ

ಜನ ಖಾಸಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಬಯಸಿದರೆ, ಹಣ ತೆರಬೇಕಾಗುತ್ತದೆ. ಆದರೆ ಪ್ರತಿ ಡೋಸಿನ ಕೋವಿಷೀಲ್ಡ್​ಗೆ ರೂ. 780, ಕೊವ್ಯಾಕ್ಸಿನ್​ಗೆ ರೂ. 1,410 ಮತ್ತು ಸ್ಫುಟ್ನಿಕ್ ವಿಗೆ ರೂ. 1,145ಕ್ಕಿಂತ ಹೆಚ್ಚು ಪಾವತಿಸಬೇಕಿಲ್ಲ.

ಕೇಂದ್ರವು ಲಸಿಕಾ ನೀತಿಯನ್ನು ಬದಲಾಯಿಸಿದೆ, ಏನೇನು ಬದಲಾಗಿದೆ ಅಂತ ತಿಳಿದುಕೊಳ್ಳಲು ಇದನ್ನು ಓದಿ
ಪ್ರಾತಿನಿಧಿಕ ಚಿತ್ರ
Follow us
| Edited By: Arun Kumar Belly

Updated on: Jun 09, 2021 | 6:33 PM

ನವದೆಹಲಿ: ಕೋವಿಡ್​ ಲಸಿಕಾ ನೀತಿಯಲ್ಲಿ ಒಂದು ಪ್ರಮುಖ ಬದಲಾವಣೆಯನ್ನು ತಂದಿರುವ ಕೇಂದ್ರ ಸರ್ಕಾರವು ಲಸಿಕೆ ಸಂಗ್ರಹವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಿದ್ದು ಈ ವ್ಯವಸ್ಥೆಯು ಜೂನ್ 21 ರಿಂದ ಜಾರಿಗೆ ಬರಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಪಡೆಯಲಿಚ್ಛಿಸುವವರನ್ನು ಹೊರತುಪಡಿಸಿ ಉಳಿದವರಿಗೆಲ್ಲ ಅದನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವ ಲಸಿಕೆಯ ಮೇಲೆ ದರವನ್ನು ನಿಗದಿಪಡಿಸಲಾಗಿದೆ. ಇದಲ್ಲದೆ ಸರ್ಕಾರವು ಲಸಿಕಾ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಬದಲಾಗಿರುವ ನೀತಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಯಾರಿಗೆ ಆದ್ಯತೆ ನೀಡಲಾಗುತ್ತದೆ?

ಈ ಮೊದಲಿನಂತೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಲಾಗುತ್ತದೆ ಮತ್ತು ಅವರ ನಂತರ ಮುಂಚೂಣಿಯ ಕಾರ್ಯಕರ್ತರು ಮತ್ತು 45 ಕ್ಕಿಂತ ಹೆಚ್ಚು ವಯಸ್ಸಿನ ನಾಗರಿಕರಿಗೆ ಲಸಿಕೆ ನೀಡಲಾಗುತ್ತದೆ. ಅದಾದ ಮೇಲೆ, ಈಗಾಗಲೇ ಮೊದಲ ಡೋಸ್​ ತೆಗೆದುಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ. ನಂತರ, 18ವರ್ಷಕ್ಕಿಂತ ಮೇಲ್ಪಟ್ಟವರನ್ನು ಲಸಿಕೆ ಹಾಕಿಸಿಕೊಳ್ಳಲು ಪರಿಗಣಿಸಲಾಗುತ್ತದೆ. ಅದರೆ, ಲಸಿಕೆಯ ಲಭ್ಯತೆ ಆಧಾರದ ಮೇಲೆ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಗಳು ಆದ್ಯತೆಯನ್ನು ನಿರ್ಧರಿಸಲಿವೆ ಎಂದು ಕೇಂದ್ರ ಹೇಳಿದೆ.

ಲಸಿಕೆಗಾಗಿ ಜನ ಹಣ ನೀಡಬೇಕೇ?

ಜನ ಖಾಸಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಬಯಸಿದರೆ, ಹಣ ತೆರಬೇಕಾಗುತ್ತದೆ. ಆದರೆ ಪ್ರತಿ ಡೋಸಿನ ಕೋವಿಷೀಲ್ಡ್​ಗೆ ರೂ. 780, ಕೊವ್ಯಾಕ್ಸಿನ್​ಗೆ ರೂ. 1,410 ಮತ್ತು ಸ್ಫುಟ್ನಿಕ್ ವಿಗೆ ರೂ. 1,145ಕ್ಕಿಂತ ಹೆಚ್ಚು ಪಾವತಿಸಬೇಕಿಲ್ಲ. ಹಣ ತೆತ್ತು ಲಸಿಕೆ ಪಡೆಯಲಿಚ್ಛಿಸುವವರು ಧಾರಾಳವಾಗಿ ಖಾಸಗಿ ಕೇಂದ್ರಗಳಿಗೆ ಹೋಗಬಹುದಾಗಿದೆ.

ವ್ಯಾಕ್ಸಿನ್ ಎ-ವೌಚರ್ ಎಂದರೇನು? ಕೋವಿಡ್​ ಲಸಿಕೆಯನ್ನು ಉಡುಗೊರೆಯಾಗಿ ನೀಡಬಹುದೇ?

ನೀತಿ ಆಯೋಗದ (ಆರೋಗ್ಯ) ಸದಸ್ಯರಾಗಿರುವ ವಿಕೆ ಪೌಲ್ ಅವರು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ‘ಕೇಂದ್ರ ಸರ್ಕಾರವು, ವರ್ಗಾಯಿಸಲಾಗದ ಎಲೆಕ್ಟ್ರಾನಿಕ್ ವೌಚರ್​ಗಳನ್ನು ಬಿಡುಗಡೆ ಮಾಡುವ ಯೋಚನೆ ಮಾಡುತ್ತಿದ್ದು, ಅದನ್ನು ಖಾಸಗಿ ಲಸಿಕಾ ಕೇಂದ್ರವೊಂದರಲ್ಲಿ ಖರೀದಿಸಿ ತಮಗೆ ಬೇಕಾದವರೊಬ್ಬರಿಗೆ ಲಸಿಕೆ ಪಡೆದುಕೊಳ್ಳುವ ಅವಕಾಶ ಮಾಡಿಕೊಡಬಹುದಾಗಿದೆ. ‘ಲೋಕ ಕಲ್ಯಾಣದ ಚೇತನವನ್ನು ಜನರಲ್ಲಿ ಮೂಡಿಸುವುದು ಕೇಂದ್ರದ ಇಚ್ಛೆಯಾಗಿದೆ. ಆರ್ಥಿಕವಾಗಿ ದುರ್ಬಲರಾಗಿರುವರಿಗೆ ಶ್ರೀಮಂತರು ಲಸಿಕೆಯ ವರ್ಗಾಯಿಸಲು ಬಾರದ ಇ-ವೌಚರ್ ಖರೀದಿಸಿ ಅವರಿಗೆ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಅದನ್ನು ಪಡೆಯಲು ನೆರವಾಗಬಹುದಾಗಿದೆ,’ ಎಂದು ಹೇಳಿದ್ದರು.

ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳುವ ಅವಕಾಶವಿದೆಯೇ?

ಹೌದು, ಕೋವಿನ್ ಮೂಲಕ ಹೆಸರು ನೋಂದಾಯಿಸಿಕೊಳ್ಳುವುದಲ್ಲದೆ ಸ್ಥಳದಲ್ಲೇ ಹೆಸರನ್ನು ನೋಂದಾಯಿಸಿಕೊಳ್ಳುವ ಏರ್ಪಾಟನ್ನು ಸರ್ಕಾರೀ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮಾಡಲಾಗುತ್ತಿದೆ.

ವ್ಯಾಕ್ಸಿನ್​ ಸರ್ಟಿಫಿಕೇಟ್​ಗಳಲ್ಲಿ ತಿದ್ದುಪಾಟು ಮಾಡುವುದು ಸಾಧ್ಯವೇ?

ಹೌದು, ವ್ಯಾಕ್ಸನ್ ಸರ್ಟಿಫಿಕೇಟನ್ನು ಕೇವಲ ಒಮ್ಮೆ ಮಾತ್ರ ತಿದ್ದುಪಾಟು ಮಾಡಬಹುದಾದ ಒಂದು ಫೀಚರನ್ನು ಕೋವಿನ್ ಜಾರಿಗೆ ತರುತ್ತಿದೆ. ಹೆಸರು, ಜನ್ಮ ದಿನಾಂಕ ಮತ್ತು ಲಿಂಗದ ಬಗ್ಗೆ ವಿವರಗಳನ್ನು ಮಾತ್ರ ತಿದ್ದುಪಾಟು ಮಾಡಬಹುದು.

ಕೋವಿಷೀಲ್ಡ್​ ಲಸಿಕೆಯ ಎರಡನೇ ಡೋಸನ್ನು 12 ವಾರಗಳಿಗಿಂತ ಮೊದಲು ತೆಗೆದುಕೊಳ್ಳಬಹುದೆ?

ಖಂಡಿತವಾಗಿ, ಆದರೆ ಕೇವಲ ಕೆಲವು ಪರಿಸ್ಥಿತಿಗಳಲ್ಲಿ ಮಾತ್ರ. ಮೊದಲ ಡೋಸ್ ತೆಗೆದುಕೊಂಡ 12 ವಾರಗಳ ಮುಂಚೆಯೇ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಬೇರೆ ರಾಷ್ಟ್ರಗಳಲ್ಲಿ ಉದ್ಯೋಗಳಿಗೆ ಅರ್ಜಿ ಸಲ್ಲಿಸಿರುವವರು ಮತ್ತು ಟೊಕಿಯೋ ಒಲಂಪಿಕ್ಸ್​ನಲ್ಲಿ ಬಾಗವಹಿಸಲಿರುವ ಅಥ್ಲೀಟ್​ಗಳು ನಿಗದಿತ ಅವಧಿಗೆ ಮೊದಲೇ ಕೋವಿಷೀಲ್ಡ್​ ಲಸಿಕೆಯ ಎರಡನೇ ಡೋಸ್ ಪಡೆಯಬಹುದಾಗಿದೆ. ಕೋವಿನ್​ನಲ್ಲಿ ಈ ಆಪ್ಷನ್ ಇನ್ನೂ ಅಳವಡಿಸಲಾಗಿಲ್ಲ, ಸ್ಥಳೀಯ ಆಡಳಿತಗಳೇ ಇದನ್ನು ಮಾಡಲಿವೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: 18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್