Chennai Rain: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ ಅಬ್ಬರ; ತಿರುವಳ್ಳೂರ್, ಕಾಂಚೀಪುರಂನಲ್ಲಿ ಇಂದು ಶಾಲೆಗಳಿಗೆ ರಜೆ
Cyclone Mandous: ಮಳೆಯಿಂದ ಕಾಂಚೀಪುರಂ ಜಿಲ್ಲೆ ಮಾತ್ರವಲ್ಲದೆ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಚೆನ್ನೈ: ಮಾಂಡೌಸ್ ಚಂಡಮಾರುತದ (Mandous Cyclone) ಪ್ರಭಾವದಿಂದಾಗಿ ತಮಿಳುನಾಡಿನಲ್ಲಿ (Tamil Nadu Rains) ಸುರಿಯುತ್ತಿರುವ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿರುವ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ನೂರಾರು ಮರಗಳು ಧರೆಗುರುಳಿದೆ. ಇಂದು ಕೂಡ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗುವ ಸೂಚನೆ ಇರುವುದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕಾಂಚೀಪುರಂ ಜಿಲ್ಲೆಯಲ್ಲದೆ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಮಾಂಡೌಸ್ ಚಂಡಮಾರುತವು ಈಗಾಗಲೇ ಮಾಮಲ್ಲಪುರಂನಲ್ಲಿ ಕರಾವಳಿಯನ್ನು ದಾಟಿರುವುದರಿಂದ ಇಂದು ಕೂಡ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.
ಇಂದು ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಮತ್ತು ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಡಿಸೆಂಬರ್ 15ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ತಮಿಳುನಾಡಿನ ಹಲವೆಡೆ ಶಾಲೆಗಳನ್ನು ಡಿಸೆಂಬರ್ 15ರವರೆಗೂ ಮುಚ್ಚಲ್ಪಡುತ್ತವೆ ಎಂದು ನಿರೀಕ್ಷಿಸಲಾಗಿದೆ.
ಮಾಂಡೌಸ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಇಂದು ಚೆನ್ನೈನಲ್ಲಿ ಶಾಲೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಚೆನ್ನೈ ಮತ್ತು ತಮಿಳುನಾಡಿನ ಹಲವಾರು ಭಾಗಗಳಲ್ಲಿ ನಿನ್ನೆ ಭಾರೀ ಮಳೆಯಾಗಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆ; ಕರಾವಳಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್
ಕಾಂಚೀಪುರಂ ಜಿಲ್ಲೆ ಮಾತ್ರವಲ್ಲದೆ ತಿರುವಳ್ಳೂರು ಮತ್ತು ಉತ್ತುಕೊಟ್ಟೈ ತಾಲೂಕುಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಶಾಲೆಗಳನ್ನು ಮುಚ್ಚಲು ನಿರ್ದೇಶನ ನೀಡುವುದರ ಹೊರತಾಗಿ, ಮೀನುಗಾರರಿಗೆ ಆಗ್ನೇಯ ಮತ್ತು ಪಕ್ಕದ ಪೂರ್ವ ಮಧ್ಯ ಅರೇಬಿಯನ್ ಸಮುದ್ರ ಮತ್ತು ಕೇರಳ-ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.