ಒಬ್ಬರನ್ನೂ ಬಿಡುವುದಿಲ್ಲ, ಹುಡುಕಿ ಹೊಡೆಯುತ್ತೇವೆ; ಉಗ್ರರಿಗೆ ಅಮಿತ್ ಶಾ ಖಡಕ್ ಎಚ್ಚರಿಕೆ
ಪಹಲ್ಗಾಮ್ ದಾಳಿಗೆ ಕಾರಣರಾದ ಒಬ್ಬ ಭಯೋತ್ಪಾದಕನನ್ನು ಕೂಡ ಬಿಡುವುದಿಲ್ಲ. ಅವರು ಎಲ್ಲೇ ಅಡಗಿದ್ದರೂ ಹುಡುಕಿ ಹುಡುಕಿ ಹೊಡೆಯುತ್ತೇವೆ. ಮೋದಿ ಸರ್ಕಾರದಲ್ಲಿ ಯಾವ ಉಗ್ರರನ್ನೂ ಬಿಡುವ ಮಾತೇ ಇಲ್ಲ. ಭಯೋತ್ಪಾದನೆಯನ್ನ ನಾವು ಮಟ್ಟ ಹಾಕುತ್ತೇವೆ. ಉಗ್ರರನ್ನ ಮಟ್ಟಹಾಕುವವರೆಗೂ ನಾವು ವಿಶ್ರಮಿಸುವುದಿಲ್ಲ. ಉಗ್ರರ ದಾಳಿಗೆ ನಾವು ತಕ್ಕ ಪ್ರತ್ಯುತ್ತರ ಕೊಟ್ಟೇ ಕೊಡುತ್ತೇವೆ ಎಂದು ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ಪಟ್ಟಣ ಪಹಲ್ಗಾಮ್ ಬಳಿಯ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ 26 ಜನರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು.

ನವದೆಹಲಿ, ಮೇ 1: “ಭಯೋತ್ಪಾದಕರು ಯುದ್ಧ ಗೆದ್ದಿದ್ದೇವೆ ಎಂದು ಭಾವಿಸಬಾರದು. ಈ ಹೋರಾಟ ಇನ್ನೂ ಮುಗಿದಿಲ್ಲ. ನಾವು ಎಲ್ಲಾ ಭಯೋತ್ಪಾದಕರ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ. ಅವರು ಎಲ್ಲೇ ಅವಿತಿದ್ದರೂ ಹುಡುಕಿ ಹೊಡೆಯುತ್ತೇವೆ” ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಬಲಿಯಾದ ಪ್ರತಿಯೊಬ್ಬರ ಸಾವಿಗೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಅಲ್ಲಿಯವರೆಗೂ ನಾವು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಉಗ್ರರು ಮರೆಯಬಾರದು. ನಾವು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತೇವೆ. ನಾವು ಭಯೋತ್ಪಾದನೆಯನ್ನ ಬೇರುಸಹಿತ ಕಿತ್ತುಹಾಕುತ್ತೇವೆ ಎಂದು ಪಹಲ್ಗಾಮ್ ದಾಳಿಕೋರರಿಗೆ ಅಮಿತ್ ಶಾ ಕಠಿಣ ಎಚ್ಚರಿಕೆ ನೀಡಿದ್ದಾರೆ.
“ಹೇಡಿತನದ ಕೃತ್ಯ ನಡೆಸುವುದು ತಮ್ಮ ದೊಡ್ಡ ಗೆಲುವು ಎಂದು ಉಗ್ರರು ಅಂದುಕೊಂಡರೆ ಅದು ಅವರ ಭ್ರಮೆ. ಇದು ನರೇಂದ್ರ ಮೋದಿ ಸರ್ಕಾರ. ನಾವು ತಪ್ಪು ಮಾಡಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. “ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಇದು ಅವರ ಕುಟುಂಬಗಳ ದುಃಖ ಮಾತ್ರವಲ್ಲ, ಇಡೀ ರಾಷ್ಟ್ರವು ಅನುಭವಿಸುವ ದುಃಖವೂ ಹೌದು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಭಯೋತ್ಪಾದನೆಯ ಬಗ್ಗೆ ಕಠಿಣ ಶೂನ್ಯ ಸಹಿಷ್ಣುತೆಯ ನಿಲುವನ್ನು ಕಾಯ್ದುಕೊಂಡಿದೆ ಎಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ.” ಎಂದು ಅಮಿತ್ ಶಾ ಹೇಳಿದ್ದಾರೆ.
#WATCH | Delhi: Union Home Minister Amit Shah says, “Today, I want to tell the public that we have been fighting strongly on the policy of zero tolerance against those who have been running terrorism in Kashmir since the 90s. Today, they (terrorists) should not think that they… pic.twitter.com/Gqvye3MSBF
— ANI (@ANI) May 1, 2025
ಇದನ್ನೂ ಓದಿ: PM Modi cabinet panel meeting: ಪಹಲ್ಗಾಮ್ ಉಗ್ರ ದಾಳಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಂಪುಟ ಸಮಿತಿಗಳ ಸಭೆ
ನವದೆಹಲಿಯಲ್ಲಿ ಬೋಡೋಫಾ ಉಪೇಂದ್ರನಾಥ್ ಬ್ರಹ್ಮ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಅವರ ಗೌರವಾರ್ಥವಾಗಿ ರಸ್ತೆಗೆ ಮರುನಾಮಕರಣ ಮಾಡಿದ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಈ ಹೇಳಿಕೆಗಳನ್ನು ನೀಡಿದರು. ಅಸ್ಸಾಂನಲ್ಲಿ ಬೋಡೋ ಸಮುದಾಯದ ಉನ್ನತಿ ಮತ್ತು ಪ್ರಗತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಕ್ಕಾಗಿ ಬ್ರಹ್ಮ ಅವರನ್ನು ಸ್ಮರಿಸಲಾಗುತ್ತದೆ.
#WATCH | Delhi: Union Home Minister Amit Shah says, “…If someone, by doing a cowardly attack, thinks that it is their big victory, then understand one thing, this is the Narendra Modi government, no one will be spared. It is our resolve to uproot terrorism from every inch of… pic.twitter.com/c4c4FPN17h
— ANI (@ANI) May 1, 2025
ಇದನ್ನೂ ಓದಿ: ಭದ್ರತಾ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ; ಪಹಲ್ಗಾಮ್ ದಾಳಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಏಪ್ರಿಲ್ 22ರಂದು, ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಆ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡರು. ಜನಪ್ರಿಯ ಪ್ರವಾಸಿ ತಾಣವಾದ ಪಹಲ್ಗಾಮ್ ಬಳಿಯ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ-ಭಾರತ ಗಡಿಯಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 pm, Thu, 1 May 25