
ನವದೆಹಲಿ, ಅಕ್ಟೋಬರ್ 10: ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯು ಸಂಪೂರ್ಣವಾಗಿ “ಫ್ಲಾಪ್ ಶೋ” ಆಗಿದೆ ಎಂದು ಬಿಜೆಪಿ ನಾಯಕ ಹಾಗೂ ಸಂಸದ ಸಂಬಿತ್ ಪಾತ್ರ ಹೇಳಿದ್ದಾರೆ. ಇದೇ ವೇಳೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಅರಾಜಕತೆಯನ್ನು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಹೊರಟಿದ್ದ ನೂರಾರು ಯುವಕರು ಹಾಗೂ ಹಲವು ರಾಜಕಾರಣಿಗಳನ್ನು ಪೊಲೀಸರು ವಶಕ್ಕೆ ಪಡೆದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಬಿತ್ ಪಾತ್ರ, ಇದು ಉದ್ರೇಕಿತ ಗುಂಪಿನ ಆಡಳಿತದ ವಿರುದ್ಧ ಪ್ರಜಾಪ್ರಭುತ್ವ ಸಾಧಿಸಿದ ಗೆಲುವು ಎಂದು ಬಣ್ಣಿಸಿದ್ದಾರೆ.
ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಬಿತ್ ಪಾತ್ರ, ರಾಹುಲ್ ಗಾಂಧಿ ಅವರನ್ನು ನಾಲಾಯಕ್ ನಾಯಕ ಎಂದು ಕರೆದಿದ್ದು, ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಭೆಯಲ್ಲಿ ಇಂಡಿಯ ಮೈತ್ರಿಕೂಟದ ಮತ ಕಳ್ಳತನದ ಆರೋಪವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ ಎಂದು ರಾಹುಲ್ ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
#WATCH | Delhi: BJP National Spokesperson and MP Sambit Patra says, “…Jantar Mantar’s story is not India’s story. What is happening at Jantar Mantar, what you can see on TV and a few social media handles, is not India’s story. India is calm and going ahead under good governance. We have been seeing that a few anarchist forces have been spreading anarchy in a corner of Delhi for the past few days. But today the anarchists have failed. The flop show of anarchist elements has completely collapsed. There was an attempt to hold India, the national capital, captive; that there be arson here, that there be violence here. But today, ‘loktantra’ has triumphed over ‘bheedtantra’…”
— ANI (@ANI) October 10, 2026
“ಜಂತರ್ ಮಂತರ್‌ನಲ್ಲಿ ಏನು ನಡೆಯುತ್ತಿದೆಯೋ, ಟಿವಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಏನು ತೋರಿಸಲಾಗುತ್ತಿದೆಯೋ ಅದು ಭಾರತದ ನೈಜ ಚಿತ್ರಣವಲ್ಲ. ಭಾರತವು ಶಾಂತಿಯುತವಾಗಿದೆ ಮತ್ತು ಉತ್ತಮ ಆಡಳಿತದೊಂದಿಗೆ ಮುನ್ನಡೆಯುತ್ತಿದೆ” ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.
#WATCH | Delhi: BJP National Spokesperson and MP Sambit Patra says, “Yesterday a few politicians visited the Rashtrapati Bhavan. The statement of Rahul Gandhi after coming out of the Rashtrapati Bhavan was like that of a ‘nalayak neta’…Never before was an attempt made to drag the President into a street protest. But a ‘nalayak neta’ attempted to do that. The anarchist Rahul Gandhi tried to pull the President of India to the anarchism which he is trying his best to conduct on the streets of India.”
— ANI (@ANI) October 10, 2026
ಈ ಪ್ರತಿಭಟನೆಯ ಮೂಲಕ ದೇಶದ ರಾಜಧಾನಿ ಹಾಗೂ ಇಡೀ ಭಾರತವನ್ನು ಬಂಧಿಯಾಗಿಸುವ ಯತ್ನ ನಡೆದಿತ್ತು ಎಂದು ಅವರು ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (ಎಸ್ಐಆರ್) ನೆಪದಲ್ಲಿ ಮತದಾರರ ಪಟ್ಟಿಯನ್ನು ತಿದ್ದಲಾಗಿದೆ ಮತ್ತು ಮತದಾರರಾಗಿ ನೋಂದಾಯಿಸಿಕೊಳ್ಳಲು ಪ್ರಮುಖ ದಾಖಲೆಯಾದ ಫಾರ್ಮ್ 6 ಅನ್ನು ಬದಲಾಯಿಸಲು ತಮ್ಮ ಇಬ್ಬರು ಸಹೋದ್ಯೋಗಿಗಳನ್ನು ಬದಿಗೊತ್ತಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕರೆ ನೀಡಿದ್ದ ಪ್ರತಿಭಟನೆಯನ್ನು ತಡೆಯಲು ಇಂದು ದೆಹಲಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ