ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಯಲ್ಲಿ ರಾಜ್ಯಗಳಿಗೆ ತಾರತಮ್ಯ ಎಂಬ ಆರೋಪ ಶುದ್ಧ ಸುಳ್ಳು, ಅಂತಹ ಯಾವುದೇ ತಾರತಮ್ಯ ಮಾಡಿಲ್ಲ : ಪ್ರಲ್ಹಾದ್ ಜೋಶಿ ಸ್ಪಷ್ಟನೆ
ಕಲ್ಲಿದ್ದಲು ಗಣಿ ಕಾಯಿದೆ, ಗಣಿ ಮತ್ತು ಖನಿಜ ಅಭಿವೃದ್ಧಿಯ ಕಾಯಿದೆಗಳು ಗಣಿ ಹಂಚಿಕೆಯ ಪಾರದರ್ಶಕ ಕಾರ್ಯವಿಧಾನವನ್ನು ಒದಗಿಸುತ್ತವೆ. 2020 ರ ಜೂನ್ 18 ರಂದು ವಾಣಿಜ್ಯ ಗಣಿಗಾರಿಕೆಯನ್ನು ಪ್ರಾರಂಭಿಸಿದ ನಂತರ ಅತ್ಯಂತ ಪಾರದರ್ಶಕ ಹರಾಜು ವಿಧಾನವನ್ನು ಅನುಸರಿಸಲಾಗುತ್ತಿದೆ - ಕೇಂದ್ರ ಕಲ್ಲಿದ್ದಲು ಸಚಿವ ಜೋಶಿ
ನವದೆಹಲಿ: ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ಒಂದು ರಾಜ್ಯ ಸರ್ಕಾರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ ಎಂಬ ಆರೋಪಗಳು ಶುದ್ಧ ಸುಳ್ಳು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ (Clarification) ಹೊರಡಿಸಲಾಗಿದ್ದು, ಕಲ್ಲಿದ್ದಲು ಬ್ಲಾಕ್ಸ್ ಗಳ (Coal Blocks) ಹಂಚಿಕೆಯಲ್ಲಿ ಯಾವುದೇ ಒಂದು ರಾಜ್ಯಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲು ಯಾವುದೇ ವಿಶೇಷ ನಿಯಮ ಅಥವಾ ವ್ಯಾಪ್ತಿ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.
2015 ರಲ್ಲಿ GMDC (ಗುಜರಾತ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ಗೆ ಎರಡು ಲಿಗ್ನೈಟ್ ಬ್ಲಾಕ್ಗಳನ್ನು ಹಂಚಲಾಯಿತು. ಅದೇ ರೀತಿ, ಮೂರು ಕಲ್ಲಿದ್ದಲು ಬ್ಲಾಕ್‌ಗಳನ್ನು ತೆಲಂಗಾಣದ SCCL ಗೆ (Singareni Collieries Company Ltd) ಹಂಚಲಾಯಿತು.
ಒಡಿಶಾದ ನೈನಿ ಕಲ್ಲಿದ್ದಲು ಬ್ಲಾಕ್, ತೆಲಂಗಾಣದ ಪೆಂಗಡಪ್ಪ ಕಲ್ಲಿದ್ದಲು ಬ್ಲಾಕ್, ಒಡಿಶಾದ ಹೊಸ ಪತ್ರಪರ ಕಲ್ಲಿದ್ದಲು ಬ್ಲಾಕ್ ಗಳನ್ನ ಹಂಚಿಕೆ ಮಾಡಲಾಗಿದೆ. 2015 ರಲ್ಲಿ SCCL ಗೆ ಮಂಜೂರು ಮಾಡಲಾದ ನೈನಿ ಬ್ಲಾಕ್ ಗೆ ತೆಲಂಗಾಣ ಸರ್ಕಾರವು ಎಲ್ಲಾ ಅನುಮತಿಗಳನ್ನು ಪಡೆಯುವಲ್ಲಿ ಅನುಕೂಲ ಮಾಡಿಕೊಟ್ಟಿದ್ದರೂ ಸಹ ಇನ್ನೂ ಅದು ಕಾರ್ಯನಿರ್ವಹಿಸುತ್ತಿಲ್ಲ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 ಮತ್ತು ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯಿದೆ, 2015 ರ ಮೂಲಕ ಕಲ್ಲಿದ್ದಲು ಬ್ಲಾಕ್‌ಗಳ ಹರಾಜನ್ನು ನಡೆಸಲಾಗುತ್ತಿದೆ.
ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯಿದೆ, ಗಣಿ ಮತ್ತು ಖನಿಜ ಅಭಿವೃದ್ಧಿಯ ಕಾಯಿದೆಗಳು ಗಣಿ ಹಂಚಿಕೆಯ ಪಾರದರ್ಶಕ ಕಾರ್ಯವಿಧಾನವನ್ನು ಒದಗಿಸುತ್ತವೆ. 2020 ರ ಜೂನ್ 18 ರಂದು ವಾಣಿಜ್ಯ ಗಣಿಗಾರಿಕೆಯನ್ನು ಪ್ರಾರಂಭಿಸಿದ ನಂತರ ಅತ್ಯಂತ ಪಾರದರ್ಶಕ ಹರಾಜು ವಿಧಾನವನ್ನು ಅನುಸರಿಸಲಾಗುತ್ತಿದೆ.
ಇದನ್ನೂ ಓದಿ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಕಲ್ಲಿದ್ದಲು ಉತ್ಪಾದನೆ: ಸಚಿವ ಪ್ರಲ್ಹಾದ್ ಜೋಶಿ ಮುಕುಟಕ್ಕೆ ಮತ್ತೊಂದು ಗರಿ
ಅದರ ಅಡಿಯಲ್ಲಿ ಎಲ್ಲಾ ಕಲ್ಲಿದ್ದಲು/ಲಿಗ್ನೈಟ್ ಮಾರಾಟಕ್ಕೆ ಹರಾಜು ಮಾರ್ಗದ ಮೂಲಕ ಲಿಗ್ನೈಟ್ ಬ್ಲಾಕ್‌ಗಳನ್ನು ನೀಡಲಾಗಿದೆ. ಯಾವುದೇ ರಾಜ್ಯ ಅಥವಾ ಕೇಂದ್ರ ಪಿಎಸ್‌ಯುಗೆ ವಾಣಿಜ್ಯ ಗಣಿಗಾರಿಕೆಯನ್ನು ಪ್ರಾರಂಭಿಸಿದ ನಂತರ ಹಂಚಿಕೆ ಮಾರ್ಗದ ಮೂಲಕ ಯಾವುದೇ ಕಲ್ಲಿದ್ದಲು/ಲಿಗ್ನೈಟ್ ಬ್ಲಾಕ್‌ಗಳನ್ನು ನೀಡಲಾಗಿಲ್ಲ ಎಂದು ಕಲ್ಲಿದ್ದಲು ಸಚಿವಾಲಯ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸುವ ಇದರೊಂದಿಗೆ ಈ ಸಂಬಂಧ ಕೇಳಿಬಂದಿರುವ ಆರೋಪಗಳೆಲ್ಲ ಸುಳ್ಳು ಎಂದು ಮನವರಿಕೆ ಮಾಡಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ