ಸೆಪ್ಟೆಂಬರ್ 2 ರಂದು ಅರಬ್ಬಿ ಸಮುದ್ರಕ್ಕೆ ಬಿದ್ದ ALH ಪೈಲಟ್‌ನ ಮೃತದೇಹ ಪತ್ತೆ

“ಪೋರಬಂದರ್ ಕರಾವಳಿಯಿಂದ ಸುಮಾರು 55 ಕಿಮೀ ದೂರದಲ್ಲಿ ಪಾರ್ಥಿವ ಶರೀರವನ್ನು ಪಡೆಯಲಾಗಿದೆ. ಹೆಲಿಕಾಪ್ಟರ್‌ನ ಪೈಲಟ್-ಇನ್-ಕಮಾಂಡ್ ಆಗಿದ್ದ ಕಮಾಂಡೆಂಟ್, ಎಂಟಿ ಹರಿ ಲೀಲಾದಿಂದ ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಒಬ್ಬ ಪೈಲಟ್ ಮತ್ತು ಇಬ್ಬರು ವಾಯು ಸಿಬ್ಬಂದಿ ಡೈವರ್‌ಗಳೊಂದಿಗೆ ವೈದ್ಯಕೀಯ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿದ್ದರು”ಎಂದು ಹೇಳಿಕೆ ತಿಳಿಸಿದೆ.

ಪ್ರಾತಿನಿಧಿಕ ಚಿತ್ರ
Follow us
|

Updated on: Oct 11, 2024 | 10:13 PM

ದೆಹಲಿ ಅಕ್ಟೋಬರ್ 11: ಸೆಪ್ಟೆಂಬರ್ 2 ರಂದು ಪೋರಬಂದರ್ ಬಳಿ ಅರಬ್ಬಿ ಸಮುದ್ರಕ್ಕೆ ಧ್ರುವ್ ಸುಧಾರಿತ ಲಘು ಹೆಲಿಕಾಪ್ಟರ್ (ALH Mk-III) ಪತನಗೊಂಡ ನಂತರ ನಾಪತ್ತೆಯಾಗಿದ್ದ ಪೈಲಟ್‌ನ ಮೃತದೇಹವನ್ನು ಕರಾವಳಿ ಕಾವಲು ಪಡೆ ವಶಪಡಿಸಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಗುರುವಾರ ಮೃತದೇಹ ಪತ್ತೆಯಾಗಿದೆ.

ಕಮಾಂಡೆಂಟ್ ರಾಕೇಶ್ ರಾಣಾ, 38, ಕೋಸ್ಟ್ ಗಾರ್ಡ್‌ನ ಪೋರಬಂದರ್ ಮೂಲದ 835 ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದು, ALH ಸೇರಿದ ಅವರು 1,900 ಕ್ಕೂ ಹೆಚ್ಚು ಗಂಟೆಗಳ ಹಾರಾಟ ಅನುಭವ ಹೊಂದಿದವರು. ಹಲವಾರು ಹಡಗುಗಳು, ವಿಮಾನಗಳು ಮತ್ತು ತಜ್ಞ ಡೈವರ್‌ಗಳು ವಾರಗಳ ಕಾಲ ಸುಮಾರು 60 ಮೀಟರ್ ಆಳ ಸಮುದ್ರದಲ್ಲಿ   ಹುಡುಕಾಟ ನಡೆಸಿದ್ದರು.

“ಪೋರಬಂದರ್ ಕರಾವಳಿಯಿಂದ ಸುಮಾರು 55 ಕಿಮೀ ದೂರದಲ್ಲಿ ಪಾರ್ಥಿವ ಶರೀರವನ್ನು ಪಡೆಯಲಾಗಿದೆ. ಹೆಲಿಕಾಪ್ಟರ್‌ನ ಪೈಲಟ್-ಇನ್-ಕಮಾಂಡ್ ಆಗಿದ್ದ ಕಮಾಂಡೆಂಟ್, ಎಂಟಿ ಹರಿ ಲೀಲಾದಿಂದ ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಒಬ್ಬ ಪೈಲಟ್ ಮತ್ತು ಇಬ್ಬರು ವಾಯು ಸಿಬ್ಬಂದಿ ಡೈವರ್‌ಗಳೊಂದಿಗೆ ವೈದ್ಯಕೀಯ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿದ್ದರು”ಎಂದು ಹೇಳಿಕೆ ತಿಳಿಸಿದೆ.

ಎಎಲ್‌ಹೆಚ್‌ನಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಫ್ಲೈಟ್ ಡೈವರ್‌ಗಳು ಸೇರಿದಂತೆ ನಾಲ್ವರು ಸಿಬ್ಬಂದಿ ಇದ್ದರು. ಸೆಪ್ಟೆಂಬರ್ 3 ರಂದು ಕೋಸ್ಟ್ ಗಾರ್ಡ್ ಸಹ ಪೈಲಟ್, ಡೆಪ್ಯುಟಿ ಕಮಾಂಡೆಂಟ್ ವಿಪಿನ್ ಬಾಬು ಮತ್ತು ಡೈವರ್ ಕರಣ್ ಸಿಂಗ್ ಅವರ ಮೃತದೇಹಗಳನ್ನು ಹೊರತೆಗೆದಿದ್ದು ಇತರ ಫ್ಲೈಟ್ ಡೈವರ್ ಅನ್ನು ರಕ್ಷಿಸಿದರು.

ಇದನ್ನೂ ಓದಿ: ಚೆನ್ನೈ ಬಳಿ ಗೂಡ್ಸ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 2 ಬೋಗಿಗಳಿಗೆ ಬೆಂಕಿ

ಡೂಮ್ಡ್ ಹೆಲಿಕಾಪ್ಟರ್, ಟೈಲ್ ನಂ. CG 863, ವ್ಯಾಪಾರಿ ಟ್ಯಾಂಕರ್‌ನಲ್ಲಿ ತುರ್ತು ಪರಿಸ್ಥಿತಿಯ ನಂತರ ವೈದ್ಯಕೀಯ ಸ್ಥಳಾಂತರಿಸುವ ಕಾರ್ಯಾಚರಣೆಗಾಗಿ ಸೆಪ್ಟೆಂಬರ್ 2 ರ ರಾತ್ರಿ ಪ್ರಾರಂಭಿಸಲಾಯಿತು. ಇದೇ ಹೆಲಿಕಾಪ್ಟರ್ ಇತ್ತೀಚೆಗೆ ಪ್ರವಾಹದಿಂದ ತತ್ತರಿಸಿರುವ ಗುಜರಾತ್‌ನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ

ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ

ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ

ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್

ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ

‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ

ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!

ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ

ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ

ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ