ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು ಇಲ್ಲವಾದರೆ ಅಣುಬಾಂಬ್ ದಾಳಿ ನಡೆಸಬಹುದು: ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ
ಪಾಕಿಸ್ತಾನವನ್ನು ಗೌರವದಿಂದ ಕಾಣಬೇಕು ಇಲ್ಲವಾದಲ್ಲಿ ಭಾರತದ ಮೇಲೆ ಅಣುಬಾಂಬ್ ದಾಳಿ ನಡೆಸಬಹುದು ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾವು ಪಾಕಿಸ್ತಾನಕ್ಕೆ ಗೌರವ ನೀಡದಿದ್ದರೆ ಅವರು ಭಾರತದ ಮೇಲೆ ಪರಮಾಣು ದಾಳಿ ಮಾಡುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ.
ಭಾರತ(India)ವು ಪಾಕಿಸ್ತಾನ(Pakistan)ವನ್ನು ಗೌರವಿಸಬೇಕೇ ಹೊರತು ತನ್ನ ಸೇನಾ ಬಲವನ್ನು ಹೆಚ್ಚಿಸಬಾರದು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್(Mani Shankar Aiyar) ವಿವಾದ ಸೃಷ್ಟಿಸಿದ್ದಾರೆ. ನಾವು ಪಾಕಿಸ್ತಾನಕ್ಕೆ ಗೌರವ ನೀಡದಿದ್ದರೆ ಅವರು ಭಾರತದ ಮೇಲೆ ಪರಮಾಣು ದಾಳಿ ಮಾಡುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ.
ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಯಾವಾಗಲೂ ಹೇಳುತ್ತಿರುತ್ತದೆ, ಆದರೆ ಭಯೋತ್ಪಾದನೆ ಮಾತುಕತೆಯಿಂದ ಮಾತ್ರ ಕೊನೆಗೊಳ್ಳುತ್ತದೆ ಎಂದು ಹೇಳಿದರು.
ಭಾರತ ಸರ್ಕಾರ ಬಯಸಿದರೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬಹುದು, ಆದರೆ ನೆರೆಯ ದೇಶವನ್ನು ಗೌರವಿಸದಿದ್ದರೆ ಭಾರೀ ಬೆಲೆ ತೆರೆಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.
ಆದರೆ ಕೆಲವು ಹುಚ್ಚರು ಲಾಹೋರ್ನಲ್ಲಿ ಬಾಂಬ್ ಸ್ಫೋಟಿಸಲು ನಿರ್ಧರಿಸಿದರೆ, ಪಾಕ್ನವರಿಗೆ ಅಮೃತಸರವನ್ನು ತಲುಪಲು 8 ಸೆಕೆಂಡುಗಳಲ್ಲೂ ತೆಗೆದುಕೊಳ್ಳುವುದಿಲ್ಲ ಎಂದು ಎಚ್ಚಿರಿಸಿದರು. ನಾವು ಅವರಿಗೆ ಗೌರವ ನೀಡದಿದ್ದರೆ ಅವರು ಭಾರತದ ವಿರುದ್ಧ ಅಣುಬಾಂಬ್ ಪ್ರಯೋಗಿಸಲು ಯೋಚಿಸುತ್ತಾರೆ.
ಮತ್ತಷ್ಟು ಓದಿ: ಭಾರತದ ಪೂರ್ವದಲ್ಲಿರುವವರು ಚೀನೀಯರಂತೆಯೂ ದಕ್ಷಿಣದವರು ಆಫ್ರಿಕನ್ನರಂತೆಯೂ ಕಾಣ್ತಾರೆ: ಸ್ಯಾಮ್ ಪಿತ್ರೋಡಾ
ನಾವು ಅವರನ್ನು ಗೌರವಿಸಿದರೆ ಅವರು ಶಾಂತಿಯಿಂದ ಇರುತ್ತಾರೆ, ಧಿಕ್ಕಿರಿಸಿದರೆ ಭಾರತದ ವಿರುದ್ಧ ಅಣುಬಾಂಬ್ ದಾಳಿ ನಡೆಸುತ್ತಾರೆ. ದ್ವೇಷ ಸಾಧಿಸಿ ಅಥವಾ ಬಂದೂಕು ತೋರಿಸಿ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಕಿಸ್ತಾನವೂ ಸಾರ್ವಭೌಮ ರಾಷ್ಟ್ರ ಅದಕ್ಕೂ ಗೌರವವಿದೆ ಎಂದರು.
ಇದಕ್ಕೂ ಮುನ್ನ ಸಾಗರೋತ್ತರ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸ್ಯಾಮ್ ಮಿತ್ರೋಡಾ ಪಿತ್ರಾರ್ಜಿತ ತೆರಿಗೆ ಹಾಗೂ ಭಾರತೀಯರ ಚರ್ಮದ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ