ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಾವನನ್ನು ಜೀವಂತ ಸುಟ್ಟ ಸೊಸೆಯ ಪ್ರಿಯಕರ, ಬೆಂಕಿಯಲ್ಲಿ ಒದ್ದಾಡಿದ ರೈತ
ಕಡಲೂರು ಜಿಲ್ಲೆಯ ಕಡಂಪುಲಿಯೂರಿನಲ್ಲಿ ನಡೆದ ಭೀಕರ ಘಟನೆಯಲ್ಲಿ ರೈತ ರಾಜೇಂದ್ರನ್ ಅವರನ್ನು ಪೆಟ್ರೋಲ್ ಸುರಿದು ಜೀವಂತ ದಹಿಸಲಾಗಿದೆ. ಕೌಟುಂಬಿಕ ಕಲಹ ಅಥವಾ ಅನೈತಿಕ ಸಂಬಂಧ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಣಿಕಂಠನ್ ಮತ್ತು ರಾಜೇಂದ್ರನ್ ಸೊಸೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆಗೆ ಕಾರಣವಾಗಿದೆ.

ತಮಿಳುನಾಡು, ಜ.31: ಕಡಲೂರು (Cuddalore) ಜಿಲ್ಲೆಯಲ್ಲಿ ನಡೆದ ಈ ಘಟನೆ ಅತ್ಯಂತ ಭೀಕರವಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಡಲೂರು ಜಿಲ್ಲೆಯ ಪನ್ರುಟಿ (Panruti) ಸಮೀಪದ ಕಡಂಪುಲಿಯೂರು (Kadampuliyur) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಲಿಗಂಪಟ್ಟು ಗ್ರಾಮದ ನಿವಾಸಿ ಮತ್ತು ರೈತ ರಾಜೇಂದ್ರನ್ (70) ಸಾವನ್ನಪ್ಪಿದ್ದಾರೆ. ರಾಜೇಂದ್ರನ್ ಅವರು ತಮ್ಮ ಸ್ನೇಹಿತ ಕಂದನ್ ಎಂಬುವವರ ಜೊತೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ವೇಳೆ ಒಂದು ವ್ಯಾನ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಇವರನ್ನು ಅಡ್ಡಗಟ್ಟಿದ್ದಾರೆ. ಆ ಸಮಯದಲ್ಲಿ ಹೆದರಿದ ಕಂದನ್ ಸ್ಥಳದಿಂದ ಓಡಿಹೋಗಿದ್ದಾರೆ. ಒಂಟಿಯಾದ ರಾಜೇಂದ್ರನ್ ಅವರ ಮೇಲೆ ದಾಳಿ ಮಾಡಿದ ಈ ಅಪರಿಚಿತ ವ್ಯಕ್ತಿಗಳು ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ರಾಜೇಂದ್ರನ್ ಅವರು ಬೆಂಕಿಯ ಜ್ವಾಲೆಯಲ್ಲಿ ರಸ್ತೆಯಲ್ಲೇ ಓಡುತ್ತಾ ಸಹಾಯಕ್ಕಾಗಿ ಕಿರುಚುತ್ತಿದ್ದಾರೆ.
ಈ ಭೀಕರ ದೃಶ್ಯವು ಸಿಸಿಟಿವಿ ಕೆಮರಾಗಳಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ನಡುಗಿಸುವಂತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದೊಂದು ಕೌಟುಂಬಿಕ ಕಲಹ ಅಥವಾ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಹತ್ಯೆ ಎಂದು ಹೇಳಲಾಗಿದೆ. ರಾಜೇಂದ್ರನ್ ಅವರ ಸೊಸೆಯೊಂದಿಗೆ ಮಣಿಕಂಠನ್ ಎಂಬ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಇದನ್ನು ರಾಜೇಂದ್ರನ್ ಅವರು ಬಲವಾಗಿ ವಿರೋಧಿಸಿದ್ದರು. ಇದೇ ದ್ವೇಷದಿಂದ ಮಣಿಕಂಠನ್ ಮತ್ತು ಅವನ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ರಾಜ್‌ಕೋಟ್ ಬಳಿ ಸೇತುವೆಯಿಂದ ಬಿದ್ದು ಹೊತ್ತಿ ಉರಿದ ಕಾರು; ಮೂವರು ಸಾವು
ಘಟನೆಯ ನಂತರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನಾಲ್ವರು ಆರೋಪಿಗಳನ್ನು (ಮಣಿಕಂಠನ್ ಮತ್ತು ಅವನ ಸಹಚರರು ಹಾಗೂ ರಾಜೇಂದ್ರನ್ ಅವರ ಸೊಸೆ) ಬಂಧಿಸಿದ್ದಾರೆ.ರಾಜೇಂದ್ರನ್ ಅವರು ಸುಮಾರು 70% ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಕಿಲ್ಪಾಕ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ದುರದೃಷ್ಟವಶಾತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯು ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ (AIADMK) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರನ್ನು ಕಡಲೂರು ಕೇಂದ್ರ ಕಾರಾಗೃಹಕ್ಕೆ (Cuddalore Central Prison) ರವಾನಿಸಲಾಗಿದೆ. ಘಟನೆಯ ಭೀಕರತೆಯನ್ನು ಗಮನಿಸಿ ಪೊಲೀಸರು ಈ ಪ್ರಕರಣವನ್ನು ‘ಫಾಸ್ಟ್ ಟ್ರ್ಯಾಕ್’ ಕೋರ್ಟ್ ಮೂಲಕ ಶೀಘ್ರವಾಗಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:54 am, Sat, 31 January 26
