Noida Twin Towers: ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ ನೊಯ್ಡಾದ ಅವಳಿ ಕಟ್ಟಡ ಧ್ವಂಸವಾದ ಜಾಗ

Uttar Pradesh News: ಉತ್ತರ ಪ್ರದೇಶದ ನೋಯ್ಡಾದಲ್ಲಿ ಎತ್ತರದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಸ್ಫೋಟಗೊಳಿಸಿ ನೆಲಸಮಗೊಳಿಸಲಾಗಿದೆ. ಆ ಸ್ಥಳದಲ್ಲಿ ಈಗ ಧೂಳು ಮಾತ್ರ ಆವರಿಸಿಕೊಂಡಿದೆ.

Noida Twin Towers: ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ ನೊಯ್ಡಾದ ಅವಳಿ ಕಟ್ಟಡ ಧ್ವಂಸವಾದ ಜಾಗ
ನೊಯ್ಡಾದ ಅವಳಿ ಕಟ್ಟಡದ ಅವಶೇಷಗಳುImage Credit source: Indian Express
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 29, 2022 | 11:06 AM

ನವದೆಹಲಿ: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ಸೂಪರ್‌ಟೆಕ್‌ನ ಅವಳಿ ಕಟ್ಟಡಗಳನ್ನು (Twin Towers) ನೆಲಸಮಗೊಳಿಸಿದ ಮರುದಿನ ಆ ಜಾಗದಲ್ಲಿ ಸಿಮೆಂಟ್, ಬೂದಿ ಮತ್ತು ಇತರ ವಸ್ತುಗಳ ಅವಶೇಷಗಳ ರಾಶಿಯೇ ಕಂಡುಬಂದಿದೆ. ಆ ಸ್ಥಳ ಈಗ ಯುದ್ಧಪೀಡಿತ ಭೂಮಿಯಂತೆ ಕಾಣುತ್ತಿದೆ. ಸುಮಾರು 100 ಮೀಟರ್ ಎತ್ತರದ ಎರಡು ಬೃಹತ್ ಕಟ್ಟಡಗಳು ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕೆ ಕುಸಿದಿವೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಎತ್ತರದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಸ್ಫೋಟಗೊಳಿಸಿ ನೆಲಸಮಗೊಳಿಸಲಾಗಿದೆ. ಆ ಸ್ಥಳದಲ್ಲಿ ಈಗ ಧೂಳು ಮಾತ್ರ ಆವರಿಸಿಕೊಂಡಿದೆ.

ನೊಯ್ಡಾದ ಸೆಕ್ಟರ್ 93Aನಲ್ಲಿರುವ 40 ಅಂತಸ್ತಿನ ಎರಡು ಗಗನಚುಂಬಿ ಕಟ್ಟಡಗಳು (ಅಪೆಕ್ಸ್ ಮತ್ತು ಸೆಯಾನೆ) ದೆಹಲಿಯ ಐಕಾನಿಕ್ ಕಟ್ಟಡವಾದ ಕುತುಬ್ ಮಿನಾರ್‌ಗಿಂತ ಎತ್ತರವಾಗಿದ್ದವು. ಇವುಗಳನ್ನು ಅಕ್ರಮವಾಗಿ ಕಟ್ಟಿದ ಹಿನ್ನೆಲೆಯಲ್ಲಿ ಈ ಕಟ್ಟಡಗಳನ್ನು ಪತನಗೊಳಿಸಲಾಗಿದೆ.

ಇದನ್ನೂ ಓದಿ: ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ ಮಾಡಲು ಗುಂಡಿ ಒತ್ತಿದ್ದಇಂಜಿನಿಯರ್ ಕಣ್ಣಲ್ಲಿ ಆನಂದಭಾಷ್ಪ

ಅವಳಿ ಗೋಪುರಗಳನ್ನು ನೆಲಸಮಗೊಳಿಸಿದ ಮಾರನೇ ದಿನವಾದ ಇಂದು ಈ ಪ್ರದೇಶವು ಧೂಳಿನ ಕಣಗಳೊಂದಿಗೆ ಯುದ್ಧದಿಂದ ಹಾನಿಗೀಡಾದ ಸ್ಥಳದಂತೆ ಕಾಣುತ್ತಿದೆ. ಈ ಜಾಗದ ಅಕ್ಕಪಕ್ಕದ ಪ್ರದೇಶಗಳ ಶುಚಿಗೊಳಿಸುವ ಕಾರ್ಯವು ನಡೆಯುತ್ತಿದೆ. ಸಂಪೂರ್ಣ ಸ್ವಚ್ಛಗೊಳಿಸುವ ಕಾರ್ಯ ಮುಗಿದ ನಂತರ ಅಕ್ಕಪಕ್ಕದ ಸೊಸೈಟಿಗಳ ನಿವಾಸಿಗಳು ತಮ್ಮ ಮನೆಗಳಿಗೆ ಮರಳಲು ಅನುಮತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಡವುವಿಕೆಯ ಹಿನ್ನೆಲೆಯಲ್ಲಿ ನೆರೆಯ ಕಟ್ಟಡಗಳಲ್ಲಿ ಕಿಟಕಿ ಮತ್ತು ಗೋಡೆಗೆ ಹಾನಿಯಾದ ಬಗ್ಗೆ ಕೆಲವು ವರದಿಗಳಿವೆ ಎಂದು ನೋಯ್ಡಾ ಸಿಇಒ ರಿತು ಮಹೇಶ್ವರಿ ಹೇಳಿದ್ದಾರೆ. ಈ ಕಟ್ಟಡದ ಪಕ್ಕದ ಎಟಿಎಸ್ ಸೊಸೈಟಿಯ ಗಡಿ ಗೋಡೆಯ ಸುಮಾರು 10 ಮೀಟರ್ ಹಾನಿಗೊಳಗಾಗಿದೆ. ಅದರ ಕೆಲವು ಗಾಜಿನ ಕಿಟಕಿಗಳು ಅವಶೇಷಗಳ ಹೊಡೆತದಿಂದ ಒಡೆದುಹೋಗಿವೆ.

ಇದನ್ನೂ ಓದಿ: Noida Supertech Twin Towers ನೆಲಸಮವಾಯ್ತು ನೋಯ್ಡಾದ ಅವಳಿ ಕಟ್ಟಡ, ವಿಡಿಯೊ ನೋಡಿ

ನೊಯ್ಡಾದ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಭಾನುವಾರ ಸ್ಫೋಟದಿಂದ ಸುರಕ್ಷಿತವಾಗಿ ಕೆಡವಲಾಯಿತು. ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಎರಡು ಹೌಸಿಂಗ್ ಸೊಸೈಟಿಗಳ 5,000 ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಸ್ಫೋಟದ ದೃಷ್ಟಿಯಿಂದ ಸೆಕ್ಟರ್ 93A ಯಲ್ಲಿನ ಎರಡು ಸೊಸೈಟಿಗಳಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ನಿವಾಸಿಗಳು ಮಾತ್ರವಲ್ಲದೆ, ಅವರ ವಾಹನಗಳು ಮತ್ತು ಸಾಕುಪ್ರಾಣಿಗಳನ್ನು ಸಹ ಸ್ಥಳಾಂತರಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್