AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dehradun: ದಂಪತಿ ಆತ್ಮಹತ್ಯೆ: ಕೊಳೆತ ಶವಗಳ ನಡುವೆ, ಬದುಕಿದ್ದೂ ಶವದಂತಿತ್ತು 6 ದಿನಗಳ ಹಸುಗೂಸು

ಪೋಷಕರು ಸತ್ತು ಮೂರು ದಿನಗಳೇ ಕಳೆದಿವೆ, ದೇಹಗಳು ಕೊಳೆಯುತ್ತಿವೆ, ಕೆಟ್ಟ ವಾಸನೆ ಈ ಮೂರು ದಿನ 6 ದಿನಗಳ ಮಗು ಈ ಶವಗಳ ಮಧ್ಯೆಯೇ ಇತ್ತು. ಈಗಷ್ಟೇ ಕಣ್ಣು ತೆರೆದು ಪ್ರಪಂಚ ನೋಡಿದ್ದಷ್ಟೇ, ತಾಯಿಯ ಎದೆ ಹಾಲಿಲ್ಲ, ಅತ್ತಾಗ ಮುದ್ದಿಸುವ ಅಪ್ಪನೂ ಇಲ್ಲ.

Dehradun: ದಂಪತಿ ಆತ್ಮಹತ್ಯೆ: ಕೊಳೆತ ಶವಗಳ ನಡುವೆ, ಬದುಕಿದ್ದೂ ಶವದಂತಿತ್ತು 6 ದಿನಗಳ ಹಸುಗೂಸು
ಮಗು
ನಯನಾ ರಾಜೀವ್
|

Updated on: Jun 15, 2023 | 2:45 PM

Share

ಪೋಷಕರು ಸತ್ತು ಮೂರು ದಿನಗಳೇ ಕಳೆದಿವೆ, ದೇಹಗಳು ಕೊಳೆಯುತ್ತಿವೆ, ಕೆಟ್ಟ ವಾಸನೆ ಈ ಮೂರು ದಿನ 6 ದಿನಗಳ ಮಗು ಈ ಶವಗಳ ಮಧ್ಯೆಯೇ ಇತ್ತು. ಈಗಷ್ಟೇ ಕಣ್ಣು ತೆರೆದು ಪ್ರಪಂಚ ನೋಡಿದ್ದಷ್ಟೇ, ತಾಯಿಯ ಎದೆ ಹಾಲಿಲ್ಲ, ಅತ್ತಾಗ ಮುದ್ದಿಸುವ ಅಪ್ಪನೂ ಇಲ್ಲ. ಈ ಪ್ರಪಂಚದಲ್ಲಿ ಮನುಷ್ಯರೂ ಇರುತ್ತಾರೆ ಎಂದು ಮಗುವಿಗೆ ತಿಳಿದಂತಿಲ್ಲ. ಆ ಶವಗಳ ಮಧ್ಯೆ ಅನಾಥವಾಗಿ ಜೀವವಿದ್ದೂ ಶವದಂತೆ ಮಲಗಿತ್ತು ಮಗು. ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ನಡೆದಿದೆ, ಖಾಸಿಫ್(25), ಅಮನ್(22) ವಿಷ ಸೇವಿಸಿ ಆತ್ಮಹತ್ಯ ಮಾಡಿಕೊಂಡಿದ್ದರು.

ಅಮನ್ ಗೃಹಿಣಿಯಾಗಿದ್ದು ಜೂನ್ 8ರಂದು ಮಗುವಿಗೆ ಜನ್ಮ ನೀಡಿದ್ದಳು. ಅದೇನಾಯಿತೋ ಏನೋ ಮಗುವನ್ನು ಅನಾಥ ಮಾಡಿ ಹೋಗಿದ್ದಾರೆ. ಶವಗಳ ಪಕ್ಕ ನೀರು ಹಾಗೂ ಹಳಸಿದ ಆಹಾರವಿತ್ತು. ಮಗು ಹಾಲಿಲ್ಲದೇ ನಿತ್ರಾಣವಾಗಿತ್ತು ಆದರೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Ballari News: ಬಳ್ಳಾರಿ; ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

ದಂಪತಿ ಉತ್ತರ ಪ್ರದೇಶದ ಸಹರಾನ್​ಪುರದವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಒಂದು ತಿಂಗಳ ಹಿಂದಷ್ಟೇ ಡೆಹ್ರಾಡೂನ್​ಗೆ ಬಂದಿದ್ದರು. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು, ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಇದ್ದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ, ಖಾಸಿಪ್ ಕ್ರೇನ್ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ, ಆರ್ಥಿಕ ಸಮಸ್ಯೆ ಇತ್ತು ಇದೇ ಸಾವಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್