ಫಸ್ಟ್​ ನೈಟ್​ಗೂ ಮೊದಲು ಹೆಂಡತಿಯ ಬೇಡಿಕೆ ಕೇಳಿ ಶಾಕ್ ಆದ ಗಂಡ!

ದೆಹಲಿಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಮದುವೆಯ ಮೊದಲ ರಾತ್ರಿ ನವವಿವಾಹಿತ ವಧು ತನ್ನ ಪತಿಯಿಂದ 90 ಲಕ್ಷ ರೂಪಾಯಿ ಕೇಳಿದ್ದಾಳೆ. ಹಣ ಸಿಗುವವರೆಗೂ ಲೈಂಗಿಕ ಕ್ರಿಯೆ ನಡೆಸಲು ಬಿಡುವುದಿಲ್ಲ ಎಂಬ ಷರತ್ತನ್ನು ಹಾಕಿದ್ದಾಳೆ. ಇದರಿಂದ ಗಾಬರಿಯಾದ ವರ ತನ್ನ ಮೊದಲ ರಾತ್ರಿಯಂದೇ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರ ವಿಚಾರಣೆಯ ವೇಳೆ ವಧು ಆಘಾತಕಾರಿ ವಿಷಯಗಳನ್ನು ಬಾಯಿ ಬಿಟ್ಟಿದ್ದಾಳೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಫಸ್ಟ್​ ನೈಟ್​ಗೂ ಮೊದಲು ಹೆಂಡತಿಯ ಬೇಡಿಕೆ ಕೇಳಿ ಶಾಕ್ ಆದ ಗಂಡ!
ಸಾಂದರ್ಭಿಕ ಚಿತ್ರ
Image Credit source: iStock

Updated on: Apr 15, 2026 | 11:09 PM

ನವದೆಹಲಿ, ಏಪ್ರಿಲ್ 15: ಮದುವೆಯಾದ ಮೊದಲ ರಾತ್ರಿ ಹೆಂಡತಿಗಾಗಿ ಬೆಡ್​ ರೂಂನಲ್ಲಿ ಕಾದು ಕುಳಿತಿದ್ದ ಗಂಡನಿಗೆ ಶಾಕ್ (Viral News) ಕಾದಿತ್ತು. ಪ್ರೀತಿಯಿಂದ ಹೆಂಡತಿಯನ್ನು ಮುಟ್ಟಲು ಹೋದ ಗಂಡ ತನ್ನ ಹೆಂಡತಿಯ ಡಿಮ್ಯಾಂಡ್ ಕೇಳಿ ಆಘಾತಗೊಂಡಿದ್ದಾನೆ. ರೂಂನೊಳಗೆ ಬಂದ ಗಂಡನಿಗೆ ತನ್ನನ್ನು ಮುಟ್ಟಬೇಕೆಂದರೆ 90 ಲಕ್ಷ ರೂ. ಹಣ ಕೊಡಬೇಕೆಂದು ಹೆಂಡತಿ ಬೇಡಿಕೆ ಇಟ್ಟಿದ್ದಾಳೆ. ಇದನ್ನು ಕೇಳಿ ಗಂಡ ತಲೆ ತಿರುಗಿ ಬೀಳುವುದೊಂದೇ ಬಾಕಿ.

ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಮೊದಲ ರಾತ್ರಿಯೇ ವಧು ತನ್ನ ಪತಿಗೆ ಶಾಕ್ ನೀಡಿದ್ದಾಳೆ. ತನ್ನನ್ನು ಮುಟ್ಟಿದರೆ 90 ಲಕ್ಷ ರೂ. ನೀಡಬೇಕಾಗುತ್ತದೆ ಎಂದು ಹೇಳಿದ ಆಕೆಯ ಮಾತುಗಳನ್ನು ಕೇಳಿ ವರ ಆಘಾತಕ್ಕೊಳಗಾಗಿದ್ದಾನೆ. ಆಗ್ರಾದಲ್ಲಿ ವಧುವಿನೊಬ್ಬಳು ತನ್ನ ಗಂಡನಿಂದ ಮೊದಲ ರಾತ್ರಿಯೇ 90 ಲಕ್ಷ ರೂ. ಕೇಳಿದ್ದ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ಜಗದೀಶಪುರದ ಯುವಕನೊಬ್ಬ ಇತ್ತೀಚೆಗೆ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹತ್ರಾಸ್‌ನ ಯುವತಿಯನ್ನು ವಿವಾಹವಾಗಿದ್ದ. ಮದುವೆ ಸಮಾರಂಭ ಮುಗಿದ ತಕ್ಷಣ ಕುಟುಂಬ ಸದಸ್ಯರು ಮೊದಲ ರಾತ್ರಿಗೆ ಸಿದ್ಧತೆ ಮಾಡಿದ್ದರು. ಆದರೆ, ಮಲಗುವ ಕೋಣೆಯಲ್ಲಿ ವಧು 90 ಲಕ್ಷ ರೂ. ನೀಡಿದರೆ ಮಾತ್ರ ನನ್ನನ್ನು ಮುಟ್ಟಬಹುದು ಎಂದು ಹೇಳಿದ್ದಾಳೆ. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ಆತ ಹೇಳಿದಾಗ ಆಕೆ ಜಗಳವಾಡಿದ್ದಾಳೆ.

ಇದನ್ನೂ ಓದಿ: ಇದ್ದಕ್ಕಿದ್ದಂತೆ ಗಂಡ ನಾಪತ್ತೆ, ಮೈದುನನ ಜತೆ ಪತ್ನಿ ಮದುವೆ, 25 ವರ್ಷಗಳ ಬಳಿಕ ಬಂದ ಮೊದಲ ಪತಿ

ಕೋಣೆಯಿಂದ ಬರುತ್ತಿದ್ದ ಜಗಳದ ಶಬ್ದಗಳನ್ನು ಕೇಳಿ ಕುಟುಂಬದವರೆಲ್ಲರೂ ಅಲ್ಲಿಗೆ ಬಂದಿದ್ದಾರೆ. ಆಗ ವರನು ತನ್ನ ಕುಟುಂಬದ ಸದಸ್ಯರಿಗೆ ಅಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದನು. ಅವರೆಲ್ಲರೂ ಅವಳನ್ನು ಸುಮ್ಮನಾಗಿಸಲು ಪ್ರಯತ್ನಿಸಿದರೂ ಅವಳು ಸ್ವಲ್ಪವೂ ಶಾಂತವಾಗಲಿಲ್ಲ. ಅವಳು ತನ್ನ ಸಂಬಂಧಿಕರಿಗೆ ಕರೆ ಮಾಡಿದಳು. ಅಲ್ಲಿಗೆ ಬಂದ ಅವರು ವರನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿದರು. ಇದಾದ ನಂತರ, ವರನ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದರು.

ಆದರೆ, ದೂರಿನಲ್ಲಿ ವರನ ಕುಟುಂಬದ ಸದಸ್ಯರು ವಧುವಿನ ಕಡೆಯವರು ತಮ್ಮನ್ನು ರೂಂನಲ್ಲಿ ಕೂಡಿಹಾಕಿ ಗ್ಯಾಸ್ ಸಿಲಿಂಡರ್ ಪೈಪ್ ತೆಗೆದು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿದರು. ಕೊನೆಗೆ ವರನ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತು, ನ್ಯಾಯಾಲಯವು ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಆದೇಶಿಸಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದರು.

ಇದನ್ನೂ ಓದಿ: ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಆದರೆ, ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದವು. ತನಿಖೆಯ ಸಮಯದಲ್ಲಿ ವಧು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದಳು. ಈ ಮದುವೆ ತನಗೆ ಬೇಡವೆಂದು ಮತ್ತು ಹಣಕ್ಕಾಗಿ ಮಾತ್ರ ಮದುವೆಗೆ ಒಪ್ಪಿಕೊಂಡೆ ಎಂದು ಅವಳು ಒಪ್ಪಿಕೊಂಡಳು. ಇದರಿಂದ ಪೊಲೀಸರು ಆಕೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us