AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್

ಇತ್ತೀಚಿಗೆ ಲವ್​ ಕೇಸ್​​ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅದರಂತೆ ಹಾಸನದಲ್ಲಿ 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಮಹಿಳೆ ತನ್ನ ಗಂಡನನ್ನು ಬಿಟ್ಟು ರಾತ್ರೋ ರಾತ್ರಿ ಲವರ್ ಜೊತೆ ಪರಾರಿಯಾಗಿದ್ದು, ಕಾರಿನಲ್ಲೇ ಪ್ರಿಯಕರನ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ. ಆದ್ರೆ, ಇದೀಗ ಈ ಪ್ರಕರಣ ಬೇರೆ ಸ್ವರೂಪ ಪಡೆದುಕೊಂಡಿದ್ದು, ಗಂಡ ಹೆಂಡ್ತಿಯ ಆಡಿಯೋ ಸಂಭಾಷಣೆ ವೈರಲ್ ಆಗಿದೆ ಪ್ರಿಯಕರ ಹಿಂದೆ ಹೋಗಿರುವ ಅಸಲಿ ಕಾರಣವೇನು ಎನ್ನುವುದನ್ನು ಮಹಿಳೆ ಗಂಡನ ಮುಂದೆ ಬಿಚ್ಚಿಟ್ಟಿದ್ದಾಳೆ. ಹಾಗಾದ್ರೆ, ಆಡಿಯೋನಲ್ಲೆನಿದೆ? ಎನ್ನುವ ಡಿಟೇಲ್ಸ್ ಇಲ್ಲಿದೆ.

ಲವರ್​​ ಜೊತೆ ಕಾರಿನಲ್ಲೇ ಮದುವೆ ಪ್ರಕರಣಕ್ಕೆ ಟ್ವಿಸ್​​​: ಗಂಡ ಹೆಂಡ್ತಿ ಸಂಭಾಷಣೆ ಆಡಿಯೋ ವೈರಲ್
ಪ್ರಿಯಕರನ ಜತೆ ಕಾರಿನಲ್ಲಿ ಮದ್ವೆ
ಮಂಜುನಾಥ ಕೆಬಿ
| Edited By: |

Updated on:Apr 13, 2026 | 2:33 PM

Share

ಹಾಸನ (ಏಪ್ರಿಲ್.13): 8 ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ (Lover) ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ (Hassan) ನಡೆದಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ಚಿಸ್ಟ್ ಸಿಕ್ಕಿದೆ. ಮನೆಬಿಟ್ಟು ಹೋಗಿ ಪ್ರಿಯಕರನ ಕೈಯಿಂದ ತಾಳಿಕಟ್ಟಿಸಿಕೊಂಡಿದ್ದ ಮಹಿಳೆ ಇದೀಗ ತನ್ನನ್ನು ವಾಪಸ್ ಕರೆದುಕೊಂಡು ಹೋಗಿ ಎಂದು ಗಂಡನ ಮುಂದೆ ಅಳಲು ತೋಡಿಕೊಂಡಿದ್ದಾರೆ. ಹೌದು…ಪ್ರಕಾಶ್-ಹರ್ಷಿತಾ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಪ್ರಿಯಕರನಿಂದ ಹೋಗಿದ್ಯಾಕೆ? ಕಾರಿನಲ್ಲಿ ತಾಳಿಕಟ್ಟಿಸಿಕೊಂಡಿದ್ಯಾಕೆ? ಎನ್ನುವುದನ್ನು ಗಂಡನ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ತಪ್ಪಾಯ್ತು ಎಂದು ಸಹ ಬೇಡಿಕೊಂಡಿದ್ದಾಳೆ.

ಇದನ್ನೂ ಓದಿ : ಹಾಸನ: ಪತಿ, 7 ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾದ ಮಹಿಳೆ!

ಪ್ರಕಾಶ್-ಹರ್ಷಿತಾ ಮಾತನಾಡಿದ ಆಡಿಯೋನಲ್ಲೇನಿದೆ?

ಪ್ರಕಾಶ್ (ಗಂಡ) : ಇಷ್ಟೆಲ್ಲಾ ಆಗಿದೆ ಅಪ್ಪಿ ಏನ್ಮಾಡೋದು, ನೋಡಿದ್ರೆ ಅವನು‌ ನೂರಕ್ಕೆ ನೂರು ಈ ತರ ಆಗಿದೆ ಬೇಕಾದರೆ ರಿಪೋರ್ಟ್ ಎಲ್ಲಾ ಇದೆ ಕಳುಸ್ಲಾ ಅಂದ

ಹರ್ಷಿತಾ (ಹೆಂಡ್ತಿ) : ಕಳುಸ್ಕೊಡಿ ಆಯ್ತು

ಪ್ರಕಾಶ್ : ಗೊತ್ತಾಗುತ್ತಲಾ ಈಗ ಆಗಿರೋದು ಏನು ಅಂಥ, ನೀನು ಅದು ಹೇಗೆ ಕಾರಿನಲ್ಲಿ ನಗು ನಗುತ್ತಾ ತಾಳಿ ಕಟ್ಟಿಸಿಕೊಂಡೆ, ಬ್ಲಾಕ್‌ಮೇಲೆ ಮಾಡಿದ್ರೆ ನಿನ್ನ ಮನಸ್ಸಿನಲ್ಲಿ, ಮುಖದಲ್ಲಿ ಇದು ಇರಬೇಕಿತ್ತು

ಹರ್ಷಿತಾ : ಅವಾಗ ಬ್ಲಾಕ್‌ಮೇಲ್ ಅಲ್ಲಾ, ಈಗ ಲಾಸ್ಟ್‌ಗೆ ಬ್ಲಾಕ್‌ಮೇಲ್ ಮಾಡಿದ್ದು ಅದಕ್ಕೆ ಬಂದಿದ್ದು, ಇಲ್ಲ ಅಂದರೆ ಏನಕ್ಕೆ ಬರ್ತಿದ್ದೆ

ಪ್ರಕಾಶ್ : ಅವಾಗ ಮಾತ್ರ ಏಕೆ ಖುಷಿಯಾಗಿ ಕಟ್ಟಿಸಿಕೊಂಡೆ

ಹರ್ಷಿತಾ : ಅವಾಗ ಅವನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದ, ನನ್ನ ತಲೆಗೆ ಎಲ್ಲಿ ಬರುತ್ತೆ ನಾನು ಹೇಳಿಬಿಟ್ಟು ಸುಮ್ನೆ ಬರೋಣ ಅಂಥ ಬಂದೆ, ಹಿಂಗೆ ಆಗುತ್ತೆ, ಬ್ಲಾಕ್ ಮೇಲ್ ಮಾಡ್ತಾನೆ ಅಂಥ ಗೊತ್ತಿರಲಿಲ್ಲ

ಪ್ರಕಾಶ್ : ಅವನ್ಯಾಕೆ ಸೂಸೈಡ್ ಮಾಡ್ಕತನೆ, ನಿನಗೆ ಏಕೆ ಹೀಗ್ ಮಾಡ್ದಾ, ನೀನು ಹೇಳದ್ರಲ್ಲಿ ಒಂದು ಕ್ಲಾರಿಫಿಕೇಷನ್ ಇಲ್ಲಾ

ಹರ್ಷಿತಾ : ಸೂಸೈಡ್ ಮಾಡ್ಕತಿನಾ ಅಂದ ಅದ್ಕೆ

ಪ್ರಕಾಶ್ : ನೀನು ಕಾರಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತಿದ್ದಿಯಲ್ಲವಾ

ಹರ್ಷಿತಾ : ಒಂಚೂರು ವಿಷ ಕುಡಿದಿದ್ದಕ್ಕೆ ಹಾಸನಕ್ಕೆ ಬಂದೆ

ಪ್ರಕಾಶ್ : ಪಡುವಲಹಿಪ್ಪೆ ಆಸ್ಪತ್ರೆಯಲ್ಲಿ ರೆಡ್ ಶರ್ಟ್ ಹಾಕೊಂಡು ಗ್ಲೂಕೋಸ್ ಹಾಕುಸ್ಕಂಡು ನೀನು ಮದುವೆ ಆಗಲಿಲ್ಲ ಎಂದರೆ ಸೂಸೈಡ್ ಮಾಡ್ಕತಿನಿ ಅಂಥ ಅವನಿಗೆ ಕಳ್ಸಿದಿಯಾ, ಆ ಫೋಟೋ ನನ್ನ ಹತ್ರ ಇದೆ

ಹರ್ಷಿತಾ : ನಾನು ಮದುವೆಯಾಗು ಅಂಥ ಏನು ಹೇಳೇ ಇಲ್ಲ, ಯಾವುದೇ ಕಾರಣಕ್ಕೂ ಹೇಳೇ ಇಲ್ಲಾ, ನಾನು ಯಾವ ಟೀ ಶರ್ಟ್ ಹಾಕಂಡು ಏನಕ್ಕೆ ಹೋಗಲಿ

ಪ್ರಕಾಶ್ : ಹ್ಯಾಪಿ ಮ್ಯಾರಿಡ್ ಲೈಫ್ ಕಿರಾಕತ ಅಂಥ ಕಳ್ಸಿದಿಯಾ, ಅವತ್ತು ನೀನು ಬಹಳ ಖುಷಿಯಾಗಿದಿಯಾ, ಇಲ್ಲಿ ಸಾಕ್ಷಿ ಸಿಗುತ್ತಿದಿದೆಯೆಲ್ಲಾ, ನಾನು ಆಸ್ಪತ್ರೆಯಿಂದ ಮನೆಗೆ ಬಂದಾಗ ಅವನು ಊಟ ಮಾಡಿಸಿ ಹೋದನಂತೆ

ಹರ್ಷಿತಾ : ಅವನು ಹೇಗೆ ಊಟ ಮಾಡುಸ್ತನೆ, ಪಕ್ಕದ ಬೆಡ್ ಅವರು ಇರಲಿಲ್ಲಾ, ಅವನು ಬಂದು ನೋಡಿಕೊಂಡು ಹೋದ ಅಷ್ಟೇ, ಊಟ ಮಾಡಿಸಲಿಲ್ಲ

ಪ್ರಕಾಶ್ : ನಾನು ಊಟ ತಂದು ಕೊಟ್ಟಿರಲಿಲ್ವಾ ಮುಂಡಗೋಡಿಗೆ ಹೋಗಿ ಲೋಕೇಷನ್ ಹಾಕು ಅಂಥ ಹೇಳಿರ್ಲಿಲ್ವಾ

ಹರ್ಷಿತಾ : ನಾನು ತಡೆ ಒಡೆಸಲು ಹೋಗಿದ್ದೆ

ಪ್ರಕಾಶ್ : ಈಗಲೂ ಸುಳ್ಳು ಹೇಳ್ತಿದಿಯಲ್ಲಾ, ಹೇಳು ಈಗ

ಹರ್ಷಿತಾ : ಸರಿ ಈಗ ಬರ್ತಿನಿ, ಅವನು ಜೊತೆ ಹೋಗಲ್ಲ, ಅವನಿಗೂ ನನಗೂ ಸಂಬಂಧವಿಲ್ಲ, ಅವನ ಹತ್ತಿರನೂ ಸಹಿ ಹಾಕಿಸಿಕೊಳ್ಳಿ, ತಪ್ಪಾಯ್ತು, ಇನ್ಮುಂದೆ ಹೀಗೆ ಮಾಡಲ್ಲ, ಪಾಪು ಮುಖ ನೋಡ್ಕಂಡು ಇರ್ತಿನಿ, ಬಂದು ಕರ್ಕಂಡು ಹೋಗಿ ಇಲ್ಲಿಂದ

ಪ್ರಕಾಶ್: ಬೇರೆ ಏನೇನ್ ಮುಚ್ಚಿಟ್ಟಿದ್ದೀ ನನ್ನಿಂದ ಹೇಳು

ಹರ್ಷಿತಾ : ಇಷ್ಟೇ ಬೇರೆ ಏನು ನಡೆದಿಲ್ಲಾ

ಪ್ರಕಾಶ್ : ಸುಳ್ಳು ಮೇಲೆ ಸುಳ್ಳು ಹೇಳ್ಕಂಡೆ ಹೋದೆ

ಹರ್ಷಿತಾ : ಮನೆ ಹತ್ತಿರ ಬಂದು ಜಗಳ ಆಡ್ತಿರಾ ಅಂಥ ಹೇಳ್ದೆ

ಪ್ರಕಾಶ್ : ನನ್ನ ಕೈಯಲ್ಲಿ ಏನು ಆಗಲ್ಲ ಅನ್ಕೊಂಡೆ ಅಲ್ವಾ, ಎಲ್ಲಾ ಏನಂತಾರೆ ಗೊತ್ತಾ ಈಗ, ಮೂಮೂಲಿ ಕ್ರಿಮಿನಲ್ ಅಲ್ಲಾ, ಇಂಟರ್‌ನ್ಯಾಷನಲ್ ಕ್ರಿಮಿನಲ್ ತರ ಯೋಚನೆ ಮಾಡಿದ್ದಾಳೆ ಅಂತಾರೆ, ಆ ತರ ಮೈಂಡ್ ಯಾರಿಗೂ ಓಡಿಲ್ಲ, ಆ ಸ್ಪೀಡ್‌ಲಿ ಮೈಂಡ್ ಓಡ್ಸಿದಿಯಾ

ಹರ್ಷಿತಾ : ಎಲ್ಲಾ ಅವನು ಹೇಳ್ಕೊಟ್ಟಿದ್ದು, ನಾನೇನು ಹೇಳಿಲ್ಲ, ಲಾಯರ್ ಹತ್ರ ಅವನೇ ಮಾತನಾಡಿದ್ದು, ನೀನು ಹೋದರೆ ಫೋಟೋಸ್ ಸೋಷಿಯಲ್‌ ಮಿಡಿಯಾಗೆ ಹಾಕ್ತಿನಿ ಅಂಥ ಹೆದ್ರುಸ್ದಾ, ನನ್ನ ಹತ್ತಿರ ದುಡ್ಡು ಎಲ್ಲಿ ಇತ್ತು ಲಾಯರ್‌ಗೆ ಕೊಡೊಕೆ

ಪ್ರಕಾಶ್ : ಅವರ ಮನೆ ಆಯಾ ಮಾಡ್ಸೋ ವಿಡಿಯೋ ಮಾಡಿದ್ದೀರಿ ಮನೆ, ಸೈಟ್ ಸಿಗುತ್ತೆ ಅಂಥ ಖುಷಿ ಆಗ್ಬಿಟ್ಟೆ ಅಲ್ವಾ

ಹರ್ಷಿತಾ : ಅವನು ಬ್ಲಾಕ್‌ಮೇಲ್ ಮಾಡ್ದಾ, ಅವನು ಸೋಷಿಯಲ್ ಮಿಡೀಯಾದಲ್ಲಿ ಹಾಕಿದ್ರೆ ಏನ್ ಮಾಡ್ಲಿ

ಪ್ರಕಾಶ್ : ನೀನು ಹೇಳಬೇಕಿತ್ತು

ಹರ್ಷಿತಾ : ನಾನು ರಕ್ಷಿ ಹತ್ತಿರ ಹೇಳ್ಕೊಬೇಕಿತ್ತು

ಪ್ರಕಾಶ್ : ಅವತ್ತು ಬೇಡ, ಇನ್ಸ್‌ಪೆಕ್ಟರ್ ಅಷ್ಟು ಕೇಳ್ದಾಗ್ಲೆ ಹೇಳಬೇಕಿತ್ತಲ್ವಾ, ಯಾವುದು ಹೊರಗಡೆ ಬರ್ದಂಗೆ ಮಾಡೋರು, ಗೊರೂರಲ್ಲಿ ಅಷ್ಟೊಂದು ಹೇಳಿದ್ರು, ನೀನು ಏನು ಮಾಡ್ಲಿಲ್ವಲಾ, ಯಾವ್ಯಾವ ತರ ಸುಳ್ಳು ಹೇಳ್ದೆ, ಈಗಲೂ ಸುಳ್ಳು ಹೇಳ್ದೆ ನೀನು, ಕನ್ಸಿವ್ ಆಗಿದೆ ಅಂದೆ, ನನ್ನಿಂದ ಅಂತೂ ಆಗಿಲ್ಲ, ಈಗ ಕ್ಲಿಯರ್ ಮಾಡ್ಕಂಡಾ, ಈಗ ಪಕ್ಕ ಅವನಿಂದ ಅಲ್ವಾ

ಹರ್ಷಿತಾ : ಕ್ಲಿಯರ್ ಮಾಡ್ಕಂಡೆ, ಅವನದ್ದು ಅಂಥ ಹೇಗೆ ಪಕ್ಕಾ ಆಗುತ್ತೆ, ನನಗೆ ಬೇಡ ಅಂಥ ಕ್ಲಿಯರ್ ಮಾಡ್ಕಂಡೆ, ಅವನ ಜೊತೆ ಸೇರಿದ್ರೆ ಸುಮ್ನೆ ಮಾಡ್ಕೊತ್ತಿದ್ದೆ

ಪ್ರಕಾಶ್ : ಸೇರಿರೋದ್ಕೆ ಬೇಡ ಅಂತ ಈ ತರ ಮಾಡ್ಕಂಡಿದಿಯಾ

ಹರ್ಷಿತಾ : ನಾನು ನನಗೆ ಬೇಡ ಅಂಥ ಮಾಡ್ಕಂಡಿದ್ದು

ಪ್ರಕಾಶ್ : ಎಸ್‌ಎಸ್‌ಎಂ ಆಸ್ಪತ್ರೆಗೆ ತೋರ್ಸಿದ್ನಾ

ಹರ್ಷಿತಾ : ಎಸ್‌ಎಸ್‌ಎಂಗಲ್ಲ, ನಾನು ಅವನಿಗೆ ಏನು ಹೇಳಿಲ್ಲ, ನಿಮಗೆ ಹೇಳ್ಕಂಡು ಮಾಡ್ಕೊಂಡಿರೋದು

ಪ್ರಕಾಶ್ : ಅವನು ನನ್ನಂದಾನೆ ಆಗಿರೋದು ರಿಪೋರ್ಟ್ ಇದೆ ಅಂಥ ಹೇಳ್ದಾ

ಹರ್ಷಿತಾ : ನೀವು ತಾನೇ ಸಹಿ ಮಾಡಿದ್ದು ಆಸ್ಪತ್ರೆಲಿ, ಅವನನ್ನು ಕೇಳಿದ್ರೆ ಅವನೇ ಮಾಡ್ದಿದ್ದಾ ತಾನೇ

ಪ್ರಕಾಶ್ : ನನ್ನನ್ನು ಉಪಯೋಗಿಸಿಕೊಂಡೆ ಅಷ್ಟೇ, ನನ್ನನ್ನು ನಂಬ್ಸಿದಿಯಾ, ಇಷ್ಟು ವರ್ಷದಿಂದ ಆಗದ್ದು ಈಗ ಹೇಗೆ ಆಗುತ್ತೆ

ಹರ್ಷಿತಾ : ಆ ತರ ಇದ್ದಿದ್ರೆ ಅವನನ್ನು ಕೇಳಿ ಅವನತ್ರನೇ ತೆಗಿಸಿಕೊಳ್ತಿದ್ದೆ

ಪ್ರಕಾಶ್ : ಅರ್ಧ ಗಂಟೆಯಿಂದಲೂ ಸುಳ್ಳೇ ಹೇಳ್ತಿದಿಯಾ

ಹರ್ಷಿತಾ : ಸತ್ಯ ಹೇಳ್ತಿದ್ದೀನಿ ಅಷ್ಟೇ, ಅವನು ಬ್ಲಾಕ್‌ಮೇಲ್ ಮಾಡ್ದಾ, ಅದಕ್ಕೆ ಹೋಗಿದ್ದು, ಗೋಲ್ಡ್ ಹರಾಜಾಗುತ್ತೆ ಅಂಥ ತಗೊಂಡು ಹೋದೆ, ದುಡ್ಡು ನಾನೇ ಹಾಕ್ಲಿಲ್ವಾ

ಪ್ರಕಾಶ್ : ಹಾಕ್ದೆ, ಅಲ್ಲಿ ಕೋಟಿ ಕೋಟಿ ಸಿಗುತ್ತೆ, ಅವನತ್ರ ಮನೆ, ಸೈಟ್ ಸಿಗುತ್ತೆ, ದಿಲ್‌ದಾರ್ ಆಗಿ ಇರಬಹುದು ಅಂಥ ಹಾಕ್ದೆ, ಅವನ ಕಥೆ ಏನು ಹೇಳು

ಹರ್ಷಿತಾ : ನನಗು ಅವನಿಗೂ ಸಂಬಂಧವಿಲ್ಲ, ಪೊಲೀಸ್ ಠಾಣೆಯಲ್ಲಿ ಬರ್ಕೊಡ್ತಿನಿ

ಪ್ರಕಾಶ್ : ನಿರಂಜನ್ ಅನ್ನೋನ್ನನ್ನ ಏಕೆ ಉಪಯೋಗಿಸಿಕೊಂಡೆ

ಹರ್ಷಿತಾ : ಆದರ್ಶ್‌ಗೆ ಎಲ್ಲಾ ಗೊತ್ತು ಅದು

ಪ್ರಕಾಶ್ : ಫೋಟೋ ಎಲ್ಲಾ ಕಳ್ಸಿದಿಯಾ, ಇವರ ಜೊತೆ ನನ್ನ ಎಂಗೇಜ್ಮೆಂಟ್ ಇದೆ ಅಂಥ, ಇಸ್ಕ್ಟಾಗ್ರಾಂ ಅಕೌಂಟ್ ಏಕೆ ಎರಡೆರಡು ಮಾಡ್ಕೊಂಡೆ

ಹರ್ಷಿತಾ : ನನ್ನ ಹತ್ತಿರ ಎರಡು ಎಲ್ಲಿದೆ, ಒಂದೇ ಅಕೌಂಟ್ ಇರೋದು

ಪ್ರಕಾಶ್ : ವರ್ಷಾ 29 ನಾ

ಹರ್ಷಿತಾ : ಅದಲ್ಲಾ, ವರ್ಷಾP29 ರೆಡ್ ಶರ್ಟ್ ಹಾಕಿರೋದು, ಅದನ್ನು ಹ್ಯಾಕ್ ಮಾಡಿ ಎಲ್ಲರಿಗೂ ಮೆಸೇಜ್ ಮಾಡಿದ್ರು, ಕಿರಗಡಲು ದರ್ಶು ಕೇಳಿ

ಪ್ರಕಾಶ್ : ನೀನು ಬರ್ತಾ ಬರ್ತಾ ಸಿಂಗಲ್ ಫೋಟೋ ಹಾಕೋದು, ಏಕೆ ಬೇಕಾಗಿತ್ತು ನಿನಗೆ ಇದೆಲ್ಲವಾ, ಅವಾಗ್ಲೆ ವಾರ್ನ್ ಮಾಡಿದ್ದೆ, ನಾನೇ ಊಟ ಮಾಡ್ಸಿದ್ದೆ, ಅವತ್ತು ನಾನು ತಿಳಿದುಕೊಳ್ಳಲಿಲ್ಲ, ನಿನಗೆ ದುಡ್ಡು ಮುಖ್ಯ ಆಯ್ತು ಅಷ್ಟೇ, ಫೋನ್ ಇಡು

Published On - 2:33 pm, Mon, 13 April 26

Follow Us
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ