Delhi Earthquake: ದೆಹಲಿ-ಎನ್ಸಿಆರ್ನಲ್ಲಿ 4.0 ತೀವ್ರತೆಯ ಭೂಕಂಪ
ದೆಹಲಿ-ಎನ್ಸಿಆರ್ನಲ್ಲಿ ಇಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ. ಬೆಳಗ್ಗೆ 5.36 ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ 4.0 ರಷ್ಟಿದ್ದರೂ, ಕಂಪನವು ಬಲವಾಗಿತ್ತು. ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಪ್ರಬಲ ಭೂಕಂಪನದ ಅನುಭವವನ್ನು ಅನುಭವಿಸಿದ್ದಾರೆ. ಈ ಭೂಕಂಪದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ, ಮಂಚ, ಕಿಟಕಿಗಳು ಮತ್ತು ಮನೆಯಲ್ಲಿದ್ದ ಅನೇಕ ವಸ್ತುಗಳು ಅಲುಗಾಡಲು ಪ್ರಾರಂಭಿಸಿದವು.

ಜನರಲ್ಲಿ ಭಯದ ವಾತಾವರಣವಿತ್ತು. ತಕ್ಷಣ ಜನರು ತಮ್ಮ ಮನೆಗಳಿಂದ ಹೊರಬರಲು ಪ್ರಾರಂಭಿಸಿದರು. ಈ ಭೂಕಂಪದ ಕೇಂದ್ರ ದೆಹಲಿಯಲ್ಲಿತ್ತು ಮತ್ತು ಅದರ ಆಳ ಕೇವಲ 5 ಕಿ.ಮೀ. ಆದರೆ, ಇಲ್ಲಿಯವರೆಗೆ ಯಾವುದೇ ನಷ್ಟದ ಸುದ್ದಿ ಬಂದಿಲ್ಲ. ನಮಗೆ ರೈಲಿನಲ್ಲಿ ಚಲಿಸುತ್ತಿರುವಂತೆ ಭಾಸವಾಯಿತು ಎಂದು ಸ್ಥಳೀಯರೊಬ್ಬರು ಹೇಳಿಕೊಂಡಿದ್ದಾರೆ.
Just Look at the Blast and Wave it was something else still thinking about it My Home CCTV video #earthquake #Delhi pic.twitter.com/AiNtbIh9Uc
— Mahiya18 (@mooniesssoobin) February 17, 2025
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮತ್ತು ಸಂಭವನೀಯ ಭೂಕಂಪಗಳ ಬಗ್ಗೆ ಎಚ್ಚರದಿಂದಿರುವಂತೆ ಕೋರಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Tremors were felt in Delhi and nearby areas. Urging everyone to stay calm and follow safety precautions, staying alert for possible aftershocks. Authorities are keeping a close watch on the situation.
— Narendra Modi (@narendramodi) February 17, 2025
ಭೂಮಿ ಸ್ಫೋಟಗೊಳ್ಳುವ ಹಂತದಲ್ಲಿದೆಯೇನೋ ಎಂಬಂತೆ ಭಾಸವಾಯಿತು. ನನಗೆ ಈ ರೀತಿ ಹಿಂದೆಂದೂ ಅನಿಸಿರಲಿಲ್ಲ. ಇಡೀ ಕಟ್ಟಡ ನಡುಗಿತು ಎಂದರು.
ಮತ್ತಷ್ಟು ಓದಿ: ವ್ಯಾನವಾಟುವಿನಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ನವದೆಹಲಿ ರೈಲು ನಿಲ್ದಾಣದಲ್ಲಿ ತನ್ನ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕನೊಬ್ಬ, ಅದು ಅಲ್ಪಾವಧಿಗೆ ಮಾತ್ರ ಇತ್ತು ಆದರೆ ಅದರ ತೀವ್ರತೆ ತುಂಬಾ ಬಲವಾಗಿತ್ತು ಎಂದು ಹೇಳಿದರು. ಕೆಳಗಿನಿಂದ ರೈಲು ಹಾದು ಹೋಗುತ್ತಿರುವಂತೆ ಭಾಸವಾಯಿತು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ