AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಜಲಮಂಡಳಿ ಅಗೆದಿದ್ದ ಹೊಂಡಕ್ಕೆ ಬಿದ್ದು ಬೈಕ್ ಸವಾರ ಸಾವು

ದೆಹಲಿಯ ಜನಕಪುರಿ ಪ್ರದೇಶದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಜಲಮಂಡಳಿಯ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ನಾಗರಿಕ ಸುರಕ್ಷತೆ ಮತ್ತು ಪೊಲೀಸರ ಪ್ರತಿಕ್ರಿಯೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಬಲಿಪಶುವನ್ನು ಕೈಲಾಸಪುರಿಯ ನಿವಾಸಿ ಕಮಲ್ ಎಂದು ಗುರುತಿಸಲಾಗಿದ್ದು, ಅವರು ತಡರಾತ್ರಿ ರೋಹಿಣಿಯಲ್ಲಿರುವ ತಮ್ಮ ಕಚೇರಿಯಿಂದ ಮನೆಗೆ ಮರಳುತ್ತಿದ್ದರು. ಕಮಲ್ ಅವರ ಸಂಬಂಧಿಕರ ಪ್ರಕಾರ, ರಾತ್ರಿಯಿಡೀ ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಕುಟುಂಬದವರು ಹುಡುಕಾಟ ಆರಂಭಿಸಿದ್ದರು.

ದೆಹಲಿ: ಜಲಮಂಡಳಿ ಅಗೆದಿದ್ದ ಹೊಂಡಕ್ಕೆ ಬಿದ್ದು ಬೈಕ್ ಸವಾರ ಸಾವು
ಬೈಕ್
ನಯನಾ ರಾಜೀವ್
|

Updated on:Feb 06, 2026 | 12:51 PM

Share

ನವದೆಹಲಿ, ಫೆಬ್ರವರಿ 06: ಜಲಮಂಡಳಿ ಅಗೆದಿದ್ದ ಹೊಂಡಕ್ಕೆ ಬಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ದೆಹಲಿಯ ಜನಕಪುರಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ಕಮಲ್ ತನ್ನ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ(Accident) ಸಂಭವಿಸಿದೆ. ವರದಿಗಳ ಪ್ರಕಾರ, ರೋಹಿಣಿಯಲ್ಲಿರುವ ತಮ್ಮ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದರು.ಕೈಲಾಸಪುರಿಯಲ್ಲಿ ವಾಸವಾಗಿದ್ದರು. ತಡರಾತ್ರಿಯಾದರೂ ಮಗ ಮನೆಗೆ ಬಾರದ್ದನ್ನು ಕಂಡು ಕುಟುಂಬದವರು ಆತಂಕಕ್ಕೊಳಗಾದರು.

ಕುಟುಂಬದವರ ಪ್ರಕಾರ, ಅವರು ಇಡೀ ರಾತ್ರಿ ಜನಕಪುರಿ, ಸಾಗರ್‌ಪುರ, ವಿಕಾಸಪುರಿ ಮತ್ತು ರೋಹಿಣಿ ಸೇರಿದಂತೆ ಅರ್ಧ ಡಜನ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬೆಳಗ್ಗೆ 7.30 ರ ಸುಮಾರಿಗೆ ಪೊಲೀಸರಿಂದ ಕರೆ ಬಂದಿತ್ತು ನಂತರ ಈ ಘಟನೆ ತಿಳಿದುಬಂದಿದೆ.

ಅಲ್ಲಿಗೆ ತಲುಪಿದಾಗ ಕಮಲ್ ತನ್ನ ಬೈಕ್‌ನೊಂದಿಗೆ ಹಳ್ಳಕ್ಕೆ ಬಿದ್ದಿರುವುದು ಕಂಡುಬಂದಿದೆ. ಕುಟುಂಬವು ಪ್ರಸ್ತುತ ಅಪಘಾತಕ್ಕೆ ಜಲಮಂಡಳಿಯ ನಿರ್ಲಕ್ಷ್ಯವನ್ನು ದೂಷಿಸುತ್ತಿದೆ. ಕಮಲ್‌ನನ್ನು ಯಾರೋ ಕೊಲೆ ಮಾಡಿ ಹಳ್ಳಕ್ಕೆ ಎಸೆದಿರಬಹುದು ಎಂದು ಹೇಳುತ್ತಿದ್ದು, ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಸಿಸಿ ಕ್ಯಾಮರಾದಲ್ಲಿ ಎದೆ ಝಲ್​​ ಎನಿಸುವ ದೃಶ್ಯ ಸೆರೆ

ಈ ಘಟನೆಯ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯ ಬಿಜೆಪಿ ಸರ್ಕಾರವನ್ನು ಟೀಕಿಸಿದೆ. ಇದಕ್ಕೂ ಮೊದಲು, ಜನವರಿ 16 ರಂದು, ನೋಯ್ಡಾದ ಸೆಕ್ಟರ್ 150 ರಲ್ಲಿ, ಎಂಜಿನಿಯರ್ ಯುವರಾಜ್ ಅವರ ಕಾರು ನೆಲಮಾಳಿಗೆಗಾಗಿ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದಿತ್ತು. ಭಾರೀ ಮಂಜಿನಿಂದಾಗಿ, ಚಾಲಕನಿಗೆ ರಸ್ತೆ ಕಂಡಿರಲಿಲ್ಲ. ಯುವರಾಜ್ ಸುಮಾರು ಎರಡು ಗಂಟೆಗಳ ಕಾಲ ಸಹಾಯಕ್ಕಾಗಿ ಬೇಡಿಕೊಂಡರು, ಆದರೆ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಸಾವು ಆಕಸ್ಮಿಕವೇ ಅಥವಾ ದುಷ್ಕೃತ್ಯದ ಪರಿಣಾಮವೇ ಎಂಬುದನ್ನು ನಿರ್ಧರಿಸಲು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:51 pm, Fri, 6 February 26