AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Refugee Day 2026: ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ

ಜಗತ್ತಿನಾದಂತ್ಯ ನಾನಾ ಕಾರಣಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿ ನಿರಾಶ್ರಿತರಾದವರು ಅನೇಕ ಜನರಿದ್ದಾರೆ. ಇರಲು ಸೂರಿಲ್ಲ, ತೊಟ್ಟುಕೊಳ್ಳಲು ಬಟ್ಟೆಯಿಲ್ಲ. ತಿನ್ನಲು ಆಹಾರವಿಲ್ಲ. ಅಂತಹವರು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ನಿರಾಶ್ರಿತರ ದಿನ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಮಾಹಿತಿ ಇಲ್ಲಿದೆ.

World Refugee Day 2026: ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ವಿಶ್ವ ನಿರಾಶ್ರಿತರ ದಿನImage Credit source: Pinterest
ಸಾಯಿನಂದಾ
|

Updated on: Jun 20, 2026 | 10:02 AM

Share

ಯುದ್ಧ, ಆರ್ಥಿಕ ಬಿಕ್ಕಟ್ಟು, ರಾಜಕೀಯ ಗಲಭೆ, ಪ್ರಾಕೃತಿಕ ವಿಕೋಪ ಹಾಗೂ ಹಿಂಸಾಚಾರ ಹೀಗೆ ನಾನಾ ಕಾರಣಗಳಿಂದ ಊರು, ದೇಶ ಬಿಟ್ಟು ಹೋಗುವವರೇ ಹೆಚ್ಚು. ಹೀಗೆ ಊರು ಬಿಟ್ಟು ಬೇರೆ ಕಡೆಗೆ ಹೋದವರು ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದಾರೆ. ಅವರ ಬದುಕು ದಿನನಿತ್ಯ ಹೋರಾಟವಾಗಿದೆ. ಹೀಗಾಗಿ ಅಂತಹವರಿಗೆ ಮೂಲಸೌಕರ್ಯ ಹಾಗೂ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಲು, ಪುನರ್‌ವಸತಿಯ ಬಗ್ಗೆ ಜಾಗೃತಿ ಮೂಡಿಸಲು ಜೂನ್ 20 ರಂದು ವಿಶ್ವ ನಿರಾಶ್ರಿತರ ದಿನವನ್ನು (World Refugee Day) ಆಚರಿಸಲಾಗುತ್ತಿದೆ.

ವಿಶ್ವ ನಿರಾಶ್ರಿತರ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯು ಡಿಸೆಂಬರ್ ತಿಂಗಳ ಜೂನ್ 20, 2000 ದಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರತ್ಯೇಕ ಸಂಘಟನೆಯನ್ನು ರಚಿಸಲಾಗಿದೆ. ಈ ಸಂಘಟನೆಯನ್ನು ದಿ ಯುನೈಟೆಡ್‌ ನೇಷನ್ಸ್‌ ಹೈ ಕಮಿಷನರ್ ಎಂದು ಹೆಸರಿಡಲಾಗಿದೆ. ಈ ಸಂಸ್ಥೆಯು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಸಹಾಯ ಮಾಡಲು, ಅವರಿಗೆ ಬದುಕು ಕಟ್ಟಿಕೊಡಲು ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: International Picnic Day 2026: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ

ವಿಶ್ವ ನಿರಾಶ್ರಿತರ ದಿನದ ಮಹತ್ವವೇನು?

ವಿಶ್ವ ನಿರಾಶ್ರಿತರ ದಿನದಂದು ಈಗಾಗಲೇ ಲಕ್ಷಾಂತರ ನಿರ್ಗತಿಕರು ಆಹಾರ, ಬಟ್ಟೆ, ವಸತಿ, ಕುಟುಂಬ, ಶಿಕ್ಷಣ, ಮತ್ತು ಬದುಕುವ ಹಕ್ಕನ್ನೇ ಕಳೆದುಕೊಂಡವರ ಮೇಲೆ ಬೆಳಕು ಚೆಲ್ಲುವುದು. ನಿರಾಶ್ರಿತರ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವುದು ಈ ದಿನ ಮೂಲ ಉದ್ದೇಶವಾಗಿದೆ. ಈ ದಿನದಂದು ಜಾಗೃತಿ ಕಾರ್ಯಾಗಾರಗಳು, ಶಿಬಿರಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್