ಮಹಿಳೆಯ ಕತ್ತು ಹಿಸುಕಿ ಕೊಂದು ಚರಂಡಿಗೆ ಎಸೆದ ಟೈಲರ್

ದೆಹಲಿಯ ಚರಂಡಿಯಲ್ಲಿ ಹಣದ ವಿಚಾರದಲ್ಲಿ ಜಗಳವಾಡಿದ ಟೈಲರ್ ಮಹಿಳೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಮೃತದೇಹವನ್ನು ಚರಂಡಿಗೆ ಎಸೆದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ 35 ವರ್ಷದ ಟೈಲರ್ ಅನ್ನು ಬಂಧಿಸಲಾಗಿದೆ. ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯ ಕತ್ತು ಹಿಸುಕಿ ಕೊಂದು ಚರಂಡಿಗೆ ಎಸೆದ ಟೈಲರ್
Crime News

Updated on: Aug 25, 2025 | 3:33 PM

ನವದೆಹಲಿ, ಆಗಸ್ಟ್ 25: ಹಣದ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ದೆಹಲಿಯಲ್ಲಿ (Delhi Crime)  ಮಹಿಳೆಯ ಕತ್ತು ಹಿಸುಕಿ ಆಕೆಯ ಮೃತದೇಹವನ್ನು ಚರಂಡಿಗೆ ಎಸೆದ ಘಟನೆ ನಡೆದಿದೆ. ಈ ಕೊಲೆ ಮಾಡಿದ 35 ವರ್ಷದ ಟೈಲರ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಂದಾಪುರ ನಿವಾಸಿಯಾಗಿರುವ ಮೃತ ಮಹಿಳೆ ಆಗಸ್ಟ್ 21ರಂದು ನಾಪತ್ತೆಯಾಗಿದ್ದಾರೆ ಎಂದು ಆಕೆಯ ತಾಯಿ ದೂರು ನೀಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆ ಮಹಿಳೆಯ ಕೊನೆಯ ಚಲನವಲನಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.

ಆಗಸ್ಟ್ 23ರಂದು ಮಧ್ಯಾಹ್ನ 2.54ರ ಸುಮಾರಿಗೆ ಪೊಲೀಸ್ ಠಾಣೆಗೆ ಯಾರೋ ಮೃತದೇಹವನ್ನು ಕಂಡವರು ಫೋನ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆ ಮೃತದೇಹವನ್ನು ಪತ್ತೆಹಚ್ಚಿದ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಆ ಮೃತದೇಹ ಕಾಣೆಯಾದ ಮಹಿಳೆಯದ್ದಾಗಿದ್ದು, ಆಗಸ್ಟ್ 21ರಂದು ಆಕೆಯ ತಾಯಿ ತನ್ನ ಮಗಳು ಕಾಣೆಯಾಗಿರುವುದಾಗಿ ದೂರು ನೀಡಿದ್ದರು.

ಇದನ್ನೂ ಓದಿ: ಅಪಾರ್ಟ್​​ಮೆಂಟ್​ನ ಲಿಫ್ಟ್​​ ಒಳಗೆ ಸಿಲುಕಿ 5 ವರ್ಷದ ಬಾಲಕ ಸಾವು

ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಲಿಸಿ, ತಾಂತ್ರಿಕ ಕಣ್ಗಾವಲು ಬಳಸಿ ಆ ಮಹಿಳೆಯ ಕೊನೆಯ ಚಲನವಲನಗಳನ್ನು ಪತ್ತೆಹಚ್ಚಿದರು. ಆಗಸ್ಟ್ 21ರಂದು ಕೊನೆಯ ಬಾರಿಗೆ ಆಕೆಯ ಮನೆಗೆ ಟೈಲರ್ ಬಂದಿದ್ದ. ಆತ ಉತ್ತರ ಪ್ರದೇಶದ ಹಾರ್ಡೋಯ್ ಮೂಲದ ಸಲೀಮ್ ಎಂದು ಗುರುತಿಸಲಾಗಿದೆ. ಆತನ ವಿಚಾರಣೆ ನಡೆಸಿದಾಗ ಕೊಲೆಯ ಸಂಗತಿ ಬೆಳಕಿಗೆ ಬಂದಿದೆ.

“ಬಳಿಕ, ಆ ಆರೋಪಿಯು ಅಡಗಿಸಿಟ್ಟ ಮಹಿಳೆಯ ಶವದೊಂದಿಗೆ ಆ ಕಟ್ಟಡದಿಂದ ಹೊರಬರುತ್ತಿರುವುದು ಕಂಡುಬಂದಿದೆ” ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಏನಿದು ಅಸಹ್ಯ, ಬೇಕರಿಯಲ್ಲಿ ಬಾಲಕಿಗೆ ಮುತ್ತಿಟ್ಟು, ಬಾಯೊಳಗೆ ಬೆರಳು ಹಾಕಿದ ವ್ಯಕ್ತಿ

ಸಲೀಮ್ ಮತ್ತು ಆ ಮಹಿಳೆ ಪರಸ್ಪರ ಪರಿಚಿತರಾಗಿದ್ದರು. ಅವರಿಬ್ಬರೂ ಸಾಕಷ್ಟು ತಿಂಗಳಿಂದ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ಮಹಿಳೆ ತನಗೆ ನೀಡಬೇಕಿದ್ದ ಹಣವನ್ನು ವಾಪಾಸ್ ಕೊಡುವಂತೆ ಕೇಳುತ್ತಿದ್ದರು. ಇದು ಅವರಿಬ್ಬರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎನ್ನಲಾಗಿದೆ.

“ಕೋಪದ ಭರದಲ್ಲಿ ಆ ಟೈಲರ್ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಬೈಕ್​ನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿ ಚರಂಡಿಗೆ ಎಸೆದಿದ್ದಾನೆ. ಆದರೆ ಅದನ್ನು ಕೆಲವರು ನೋಡಿದ್ದರಿಂದ ಹೆಸರಿದ ಸಲೀಮ್ ಆ ಸ್ಥಳದಿಂದ ಪರಾರಿಯಾಗಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Mon, 25 August 25

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us