ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ಆಗಸ್ಟ್​ 16ರಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಇತ್ತೀಚೆಗಷ್ಟೇ ಮೊಘಲ್​ ಗಾರ್ಡನ್​ನಿಂದ ಅಮೃತ ಉದ್ಯಾನವೆಂದು ಮರುನಾಮಕರಣಗೊಂಡಿರುವ ಉದ್ಯಾನವು ಆಗಸ್ಟ್​ 16ರಿಂದ ಒಂದು ತಿಂಗಳ ಕಾಲ ಸಾರ್ವಜನಿಕರರು ಮುಕ್ತವಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ದೆಹಲಿಯ ರಾಷ್ಟ್ರಪತಿ ಭವನದೊಳಗಿದೆ.

ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ಆಗಸ್ಟ್​ 16ರಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಅಮೃತ ಉದ್ಯಾನ
Follow us
|

Updated on: Aug 08, 2024 | 10:35 AM

ರಾಷ್ಟ್ರಪತಿ ಭವನದಲ್ಲಿರುವ ಅಮೃತ ಉದ್ಯಾನವು ಆಗಸ್ಟ್ 16ರಿಂದ ಸೆಪ್ಟೆಂಬರ್ 15ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ವಾರ್ಷಿಕ ಉದ್ಯಾನೋತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಸ್ಟ್​ 14ರಂದು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ಆಗಸ್ಟ್ 29 ಅನ್ನು ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಹಿಂದಿನ ವರ್ಷದಂತೆ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಮೀಸಲಿಡಲಾಗಿದೆ.

ನಿರ್ವಹಣೆಗಾಗಿ ಅಮೃತ್ ಉದ್ಯಾನವನ್ನು ಎಲ್ಲಾ ಸೋಮವಾರಗಳಂದು ಮುಚ್ಚಲಾಗುತ್ತದೆ. ಸಾರ್ವಜನಿಕರಿಗೆ ಪ್ರವೇಶವು ರಾಷ್ಟ್ರಪತಿ ಭವನದ ಗೇಟ್ ನಂ. 35 ರಿಂದ ಉತ್ತರ ಅವೆನ್ಯೂ ರಸ್ತೆಯ ಬಳಿ ಇರುತ್ತದೆ. ಅಷ್ಟೇ ಅಲ್ಲದೆ ಸ್ಪಿರಿಚುವಲ್ ಗಾರ್ಡನ್‌, ಹರ್ಬಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್, ಮ್ಯೂಸಿಕಲ್ ಗಾರ್ಡನ್ ಗಳನ್ನು ಕೂಡ ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಪ್ರವೇಶ ಮಾಡಬಹುದು. ಹಾಗೆಯೇ ಅದೇ ಗೇಟ್ ಮೂಲಕವೇ ಹೊರಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.

ಉದ್ಯಾನದಲ್ಲಿ ಸುಂದರವಾದ ಹುಲ್ಲು, ಆಧ್ಯಾತ್ಮಿಕ ಉದ್ಯಾನ, ಗಿಡಮೂಲಿಕೆಯ ಗಾರ್ಡನ್ ಹಾಗೂ ಸಂಗೀತ ಉದ್ಯಾನವಿದೆ. ನೀರಿನ ಬಾಟಲಿ, ಕ್ಯಾಮರಾ, ರೇಡಿಯೋ, ಬ್ಯಾಗ್, ತಿಂಡಿ ಸೇರಿದಂತೆ ಯಾವುದೇ ವಸ್ತುಗಳನ್ನು ಉದ್ಯಾನಕ್ಕೆ ತರುವಂತಿಲ್ಲ. ಶೌಚಾಲಯ, ಪ್ರಥಮ ಚಿಕಿತ್ಸೆ , ವೈದ್ಯಕೀಯ ಸೌಲಭ್ಯವನ್ನು ಅಲ್ಲಿಯೇ ಒದಗಿಸಲಾಗುತ್ತದೆ.

ಇತ್ತೀಚೆಗಷ್ಟೇ ರಾಷ್ಟ್ರಪತಿ ಭವನದ ಆವರಣದಲ್ಲಿರುವ ಮೊಘಲ್ ಉದ್ಯಾನಕ್ಕೆ ಅಮೃತ ಉದ್ಯಾನ ಎಂದು ರಾಷ್ಟ್ರಪತಿಯವರು ಮರುನಾಮಕರಣ ಮಾಡಿದ್ದಾರೆ. ಮೂಲತಃ ಇದು ಈಸ್ಟ್ ಲಾನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸರ್ಕ್ಯುಲರ್ ಗಾರ್ಡನ್ ಅನ್ನು ಒಳಗೊಂಡಿತ್ತು. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ರಾಮ್ ನಾಥ್ ಕೋವಿಂದ್ ಅವರ ಅವಧಿಯಲ್ಲಿ ಹರ್ಬಲ್-I, ಹರ್ಬಲ್-II, ಟ್ಯಾಕ್ಟೈಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್ ಮತ್ತು ಆರೋಗ್ಯ ವನಂಗಳಂತಹ ಹೆಚ್ಚಿನ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಯಿತು.

ಮತ್ತಷ್ಟು ಓದಿ: Mughal Garden: ದೆಹಲಿಯ ಮೊಘಲ್ ಗಾರ್ಡನ್‌ ಇನ್ನು ಅಮೃತ ಉದ್ಯಾನ; ಹೆಸರು ಬದಲಾಯಿಸಿದ ಕೇಂದ್ರ

ರಾಷ್ಟ್ರಪತಿ ಭವನದ ವೆಬ್‌ಸೈಟ್‌ನಲ್ಲಿ (https://visit.rashtrapatibhavan.gov.in/) ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಬಹುದು ಮತ್ತು ಗೇಟ್ ನಂ. ಹೊರಗೆ ಇರುವ ಸ್ವಯಂ ಸೇವಾ ಕಿಯೋಸ್ಕ್‌ಗಳ ಮೂಲಕ ಬುಕ್ಕಿಂಗ್ ಮಾಡಬಹುದು.

ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಅಮೃತ ಉದ್ಯಾನ ಬೇಸಿಗೆ ಕಾಯಕ್ರಮದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ಉಚಿತವಾಗಿರುತ್ತದೆ. ಆಟಗಾರರು ಹಾಗೂ ಶಿಕ್ಷಕರು ವಿಶೇಷ ದಿನಗಳಲ್ಲಿ ಅಂದರೆ ಆಗಸ್ಟ್​ 29 ಹಾಗೂ ಸೆಪ್ಟೆಂಬರ್ 5ರಂದು ಯಾವುದೇ ಶುಲ್ಕವಿಲ್ಲದೆ ಮ್ಯೂಸಿಯಂಗೆ ಭೇಟಿ ನೀಡಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ