ದೆಹಲಿ ಸಚಿವ ಸತ್ಯೇಂದರ್ ಜೈನ್ ಮನೆಯಲ್ಲಿ ಇಡಿ ದಾಳಿ; ₹2.82ಕೋಟಿ ನಗದು,133 ಚಿನ್ನದ ನಾಣ್ಯ ವಶಕ್ಕೆ
ಇಡಿ ದಾಳಿ ನಂತರ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷ ಪಂಜಾಬ್ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ನಡೆಸುತ್ತಿರುವುದರಿಂದ ಪ್ರಧಾನಿ ಆಮ್ ಆದ್ಮಿ ಪಕ್ಷದ ಹಿಂದೆಯೇ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ (Satyendar Jain) ಮತ್ತು ಅವರ ಸಹಾಯಕರ ಆವರಣದಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ದಾಳಿ ನಡೆಸಿದ್ದು ₹ 2.82 ಕೋಟಿ ನಗದು ಮತ್ತು 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದೆ. ಜೂನ್ 6 ರಂದು ಇಡಿ (ED) ದಾಳಿ ನಡೆಸಿದ್ದು, ಅಲ್ಲಿ ವಶ ಪಡಿಸಿಕೊಂಡಿರುವ ಹಣ ಮತ್ತು ಚಿನ್ನದ ನಾಣ್ಯಗಳ ಚಿತ್ರಗಳನ್ನು ಪ್ರಕಟಿಸಿದೆ. ಸತ್ಯೇಂದರ್ ಜೈನ್ ಅವರನ್ನು ಜೂನ್ 9ರ ವರಗೆ ಇಡಿ ಕಸ್ಟಡಿಯಲ್ಲಿರಿಸುವಂತೆ ವಿಶೇಷ ನ್ಯಾಯಮೂರ್ತಿ ಗೀತಾಂಜಲಿ ಗೋಯಲ್ ನಿರ್ದೇಶಿಸಿದ್ದರು. ಇಡಿ ದಾಳಿ ನಂತರ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal), ಆಮ್ ಆದ್ಮಿ ಪಕ್ಷ ಪಂಜಾಬ್ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ನಡೆಸುತ್ತಿರುವುದರಿಂದ ಪ್ರಧಾನಿ ಆಮ್ ಆದ್ಮಿ ಪಕ್ಷದ ಹಿಂದೆಯೇ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ಜೈನ್ ಅವರು ಆರೋಗ್ಯ, ವಿದ್ಯುತ್,ವಸತಿ,ಪಿಡಬ್ಲ್ಯುಡಿ, ನಗರಾಭಿವೃದ್ಧಿ, ಪ್ರವಾಹ, ಜಲ ಮತ್ತು ನೀರು ಸರಬರಾಜು ಖಾತೆಯನ್ನು ಹೊಂದಿದ್ದಾರೆ. ಕೊಲ್ಕತ್ತಾ ಮೂಲದ ಸಂಸ್ಥೆಗೆ ಹವಾಲಾ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಸತ್ಯೇಂದರ್ ಜೈನ್ ನಿವಾಸದಲ್ಲಿ ಜೂನ್ 6ರಂದು ಶೋಧ ನಡೆಸಿದೆ. ಏಪ್ರಿಲ್ ತಿಂಗಳಲ್ಲಿ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಸಚಿವ ಸತ್ಯೇಂದರ್ ಜೈನ್ ಅವರು “ಲಾಭದಾಯಕವಾಗಿ ಒಡೆತನದ ಮತ್ತು ನಿಯಂತ್ರಿಸುವ” ಕುಟುಂಬ ಮತ್ತು ಕಂಪನಿಗಳ ₹4.81 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.
ಇಡಿ ಈ ಹಿಂದೆ, ಆಸ್ತಿಗಳ ಜಪ್ತಿಗಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತಾತ್ಕಾಲಿಕ ಆದೇಶವನ್ನು ಹೊರಡಿಸಿತ್ತು. ಎಎಪಿ ಸಚಿವರು ಮತ್ತು ಇತರರ ವಿರುದ್ಧದ ಅಕ್ರಮ ಹಣ ವ್ಯವಹಾರ ಪ್ರಕರಣವು ಆಗಸ್ಟ್ 2017 ರಲ್ಲಿ ಸಿಬಿಐ ದಾಖಲಿಸಿದ ಎಫ್ಐಆರ್ ಅನ್ನು ಆಧರಿಸಿದೆ.
Enforcement Directorate seized Rs 2.82 crores of cash & 133 gold coins weighing 1.80 kg under PMLA from unexplained sources to be secreted in the premises of Delhi Health Minister Satyendar Jain & his aide during its day-long raid conducted on June 6. Further probe underway: ED pic.twitter.com/wLd8OVQPMl
— ANI (@ANI) June 7, 2022
ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರು ಬಂಧಿತ ಸಚಿವರನ್ನು ಸಮರ್ಥಿಸಿಕೊಂಡಿದ್ದಾರೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣವು ನಕಲಿ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:54 pm, Tue, 7 June 22