
ಚೆನ್ನೈ, ಅಕ್ಟೋಬರ್ 11: ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚೆನ್ನೈನಲ್ಲಿ ವೇದಿಕೆ ಹಂಚಿಕೊಂಡ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕೇಂದ್ರ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟಿದ್ದಾರೆ. ಚೆನ್ನೈನಲ್ಲಿ ಇಂದು ಪ್ರಧಾನಿ ಮೋದಿ 13,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ವಿಜಯ್ ಜಂಟಿಯಾಗಿ 3,700 ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಿದರು.
ಸಿಎಂ ವಿಜಯ್ ಸಲ್ಲಿಸಿದ ಬೇಡಿಕೆಗಳು:
‘ಸಮಗ್ರ ಶಿಕ್ಷಾ ಅಭಿಯಾನ’ (SSA) ಯೋಜನೆಯಡಿ ತಮಿಳುನಾಡಿಗೆ ಬರಬೇಕಾಗಿರುವ 5,110 ಕೋಟಿ ರೂ.ಗಳ ಬಾಕಿ ಅನುದಾನವನ್ನು ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
VIDEO | Chennai: “Requesting Government of India to take up river-linking projects including merging of Godavari-Cauvery as national project,” says Tamil Nadu CM C. Joseph Vijay.
(Source: PM Modi’s YT)
(Full video available on PTI Videos – https://t.co/d8jp61yd2p) https://t.co/N200CI4Hz3
— Press Trust of India (@PTI_News) October 11, 2026
ಕರ್ನಾಟಕ-ತಮಿಳುನಾಡಿಗೆ ಮೆಟ್ರೋ ಸಂಪರ್ಕ:
ಚೆನ್ನೈ ನಗರದಾದ್ಯಂತ ಸಾರಿಗೆ ಸಂಪರ್ಕ ಹೆಚ್ಚಿಸಲು ಚೆನ್ನೈ ಮೆಟ್ರೋ ಹಂತ-3ಕ್ಕೆ ಶೀಘ್ರ ಅನುಮೋದನೆ ನೀಡಬೇಕು, ಕೊಯಮತ್ತೂರು ಮತ್ತು ಮಧುರೈ ನಗರಗಳಿಗೆ ಹೊಸ ಮೆಟ್ರೋ ಯೋಜನೆಗಳನ್ನು ಮಂಜೂರು ಮಾಡಬೇಕು ಹಾಗೂ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರದ ನಡುವೆ ಅಂತಾರಾಜ್ಯ ಮೆಟ್ರೋ ಲಿಂಕ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ತಮಿಳುನಾಡು- ಕರ್ನಾಟಕ ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ತಮಿಳುನಾಡಿನ ಹೊಸೂರಿನಿಂದ ಬೊಮ್ಮಸಂದ್ರದವರೆಗೆ ಅಂತರ್ ರಾಜ್ಯ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೂ ಅನುಮೋದನೆ ಕೋರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ‘ಸಿಎಂ ವಿಜಯ್ ಜೊತೆಗೂಡಿ ಕೆಲಸ ಮಾಡುತ್ತೇವೆ’; ಚೆನ್ನೈನಲ್ಲಿ ಪ್ರಧಾನಿ ಮೋದಿ ಭರವಸೆ
ಗೋದಾವರಿ – ಕಾವೇರಿ ನದಿ ಜೋಡಣೆ:
ದಕ್ಷಿಣ ಭಾರತದ ರಾಜ್ಯಗಳ ನಡುವೆ ನೀರಿನ ಅಭಾವವನ್ನು ನೀಗಿಸಲು ಹಾಗೂ ಸಮಾನ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ‘ಗೋದಾವರಿ-ಕಾವೇರಿ-ಗುಂಡಾರ್’ ನದಿ ಜೋಡಣೆ ಯೋಜನೆಯನ್ನು ತ್ವರಿತಗೊಳಿಸಿ, ಅದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ ಎಂದು ಘೋಷಿಸುವಂತೆ ಮರುಪರಿಶೀಲನಾ ವಿನಂತಿ ಮಾಡಿದರು.
VIDEO | Tamil Nadu: Addressing a gathering in Chennai, Chief Minister Vijay says, “On behalf of the government and the people of Tamil Nadu, I extend a warm welcome to Prime Minister Narendra Modi and convey our gratitude for the inauguration of Chennai Metro Rail Project Phase 2 from Vadapalani to Poonamallee and also for inauguration and foundation stone laying of various infrastructure projects. Our government has transformed the political landscape and ushered in a new political chapter having successfully completed more than 100 days we are striving to establish a corruption free and transparent administration rooted in social justice. Strong states make a strong India and Tamil Nadu has always been a foundation for India’s, economic, social and cultural progress…”
(Full video available on PTI Videos – https://t.co/bIyFWTfmBd)
— Press Trust of India (@PTI_News) October 11, 2026
2026ರ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾದ ಚೆನ್ನೈ-ಬೆಂಗಳೂರು ಮತ್ತು ಚೆನ್ನೈ-ಹೈದರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಿಗಾಗಿ ಸಿಎಂ ವಿಜಯ್ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ