ಬಿಸ್ಲೇರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ

ಬಿಸ್ಲೇರಿ ಬ್ರಾಂಡ್ 'ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್' ಆಗಿದ್ದು, ನಾವು ಸಾಮಾನ್ಯವಾಗಿ 'ಮಿನರಲ್ ವಾಟರ್' ಎಂದು ಕರೆಯುವುದೇ ಬಿಸ್ಲೇರಿಯನ್ನು, ಅಷ್ಟರ ಮಟ್ಟಿಗೆ ಮಾರುಕಟ್ಟೆಯಲ್ಲಿ ಈ ಬಿಸ್ಲೇರಿ ವಾಟರ್ ಬೇರೂರಿದೆ. ಆದ್ರೆ, ಇದೀಗ ಬಿಸ್ಲೇರಿ ಡ್ರಿಂಕಿಂಗ್ ವಾಟರ್ ಶುದ್ಧವಿಲ್ಲ ಎನ್ನುವುದು ಪರೀಕ್ಷೆಯಲ್ಲಿ ದೃಢವಾಗಿದೆ. ಇದರಿಂದ ಬಿಸ್ಲೇರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ.

ಬಿಸ್ಲೇರಿ ನೀರು ಶುದ್ಧವಲ್ಲ, ಪರೀಕ್ಷೆಯಲ್ಲಿ ದೃಢ: ಬಿಸ್ಲೇರಿ ಇಂಟರ್‌ನ್ಯಾಷನಲ್ ಪ್ರಾಸಿಕ್ಯೂಷನ್‌ಗೆ ಅನುಮತಿ
Bisleri Water
Edited By:

Updated on: Nov 22, 2026 | 9:08 PM

ಬೆಂಗಳೂರು, (ನವೆಂಬರ್ 22): ಬಿಸ್ಲೇರಿ ಭಾರತದ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರಾಂಡ್ ಆಗಿದೆ. 1969ರಲ್ಲಿ ಸ್ಥಾಪಿಸಲ್ಪಟ್ಟ ಬಿಸ್ಲೇರಿ ಇಂಟರ್‌ನ್ಯಾಶನಲ್ ಸಂಸ್ಥೆಯು, ದೇಶಾದ್ಯಂತ ಮಾರುಕಟ್ಟೆಯಲ್ಲಿ ಒಂದು ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಆದ್ರೆ, ಇದೀಗ ಬಿಸ್ಲೇರಿ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ ಎಂದು ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೌದು.. ಬಿಸ್ಲೇರಿ ನೀರಿನ ಸ್ಯಾಂಪಲ್‌ನಲ್ಲಿ ನಿಗದಿತ ಬ್ರೋಮೇಟ್ ಮಿತಿ ಉಲ್ಲಂಘನೆಯಾಗಿದೆ. ಹೀಗಾಗಿ FSS ಆ್ಯಕ್ಟ್ 2006ರ ಅಡಿ ನೀರು ಅನ್‌ಸೇಫ್ ಎಂದು ಘೋಷಣೆ ಮಾಡಲಾಗಿದ್ದು, ಕಾನೂನು ಕ್ರಮಕ್ಕೆ ಬಿಸ್ಲೇರಿ ಇಂಟರ್‌ನ್ಯಾಷನಲ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ.

ಮೇಲ್ಮನವಿ ಬಳಿಕ ರೆಫರಲ್ ಫುಡ್ ಲ್ಯಾಬ್‌ನಲ್ಲೂ ಪರೀಕ್ಷೆ ಮಾಡಲಾಗಿದ್ದು, ಅಲ್ಲೂ ಸಹ ನೀರಿನಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್ ಪತ್ತೆಯಾಗಿದೆ. ಎರಡನೇ ಲ್ಯಾಬ್ ಪರೀಕ್ಷೆಯಲ್ಲೂ ಅನ್‌ಸೇಫ್ ಎಂದು ವರದಿ ಬಂದಿದ್ದು, ಈ ಮೂಲಕ ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘನೆಯಾಗಿರುವುದು ದೃಢವಾಗಿದೆ. ಇದರಿಂದ ಬಿಸ್ಲೇರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ.

Loading...

ಇದನ್ನೂ ನೋಡಿ: ರಾಜ್ಯಾದ್ಯಂತ ಎಫ್‌ಡಿಎ ಕಾರ್ಯಾಚರಣೆ: ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್

ಬಿಸ್ಲೇರಿ ಬಗ್ಗೆ ಒಂದಿಷ್ಟು ಮಾಹಿತಿ

ಬಿಸ್ಲೇರಿ ಇಂಟರ್‌ನ್ಯಾಶನಲ್ ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಕಂಪನಿಯಾಗಿದೆ. ಭಾರತದಲ್ಲಿ ಬಾಟಲಿ ನೀರಿಗೆ ‘ಬಿಸ್ಲೇರಿ’ ಎಂಬ ಹೆಸರೇ ಪರ್ಯಾಯ ಪದವಾಗಿ ಬಳಕೆಯಾಗುವಷ್ಟು ಇದು ಮನೆಮಾತಾಗಿದೆ.

1965ರಲ್ಲಿ ಇಟಾಲಿಯನ್ ವೈದ್ಯ ಸಿಸಾರಿ ರೊಸ್ಸಿ ಮತ್ತು ಭಾರತೀಯ ಉದ್ಯಮಿ ಖುಶ್ರೂ ಸುಂಟೂಕ್ ಅವರು ಮುಂಬೈನ ಥಾಣೆಯಲ್ಲಿ ಮೊದಲ ಘಟಕ ಸ್ಥಾಪಿಸುವ ಮೂಲಕ ಇದನ್ನು ಭಾರತಕ್ಕೆ ಪರಿಚಯಿಸಿದರು. ಆರಂಭದಲ್ಲಿ ಇದು ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾಟಲಿಗಳಲ್ಲಿ ಮಾತ್ರ ಲಭ್ಯವಿತ್ತು.

ಬಳಿಕ 1969ರಲ್ಲಿ ಪಾರ್ಲೆ ಸಮೂಹದ ಚೌಹಾಣ್ ಸಹೋದರರು (ಜಯಂತಿಲಾಲ್ ಮತ್ತು ರಮೇಶ್ ಚೌಹಾಣ್) ಬಿಸ್ಲೇರಿ ಬ್ರಾಂಡ್ ಅನ್ನು ಕೇವಲ 4 ಲಕ್ಷಕ್ಕೆ ಖರೀದಿಸಿದ್ದು. ನಂತರ ಪ್ಲಾಸ್ಟಿಕ್ (PET) ಬಾಟಲಿಗಳನ್ನು ಪರಿಚಯಿಸುವ ಮೂಲಕ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ನೀರನ್ನು ತಲುಪಿಸಿದರು. 250 ಮಿ.ಲೀ, 300 ಮಿ.ಲೀ (Rockstar), 500 ಮಿ.ಲೀ, 1 ಲೀಟರ್, 2 ಲೀಟರ್, 5 ಲೀಟರ್ ಬಾಟಲಿಗಳು ಮತ್ತು 20 ಲೀಟರ್ ಕ್ಯಾನ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಪ್ರಸ್ತುತ ಬಿಸ್ಲೇರಿ ಭಾರತದ ಸಂಘಟಿತ ಬಾಟಲಿ ನೀರಿನ ಮಾರುಕಟ್ಟೆಯಲ್ಲಿ ಸುಮಾರು 60% ಪಾಲನ್ನು ಹೊಂದಿದೆ. ದೇಶಾದ್ಯಂತ 150ಕ್ಕೂ ಹೆಚ್ಚು ಉತ್ಪಾದನಾ ಘಟಕಗಳು ಮತ್ತು 6,000ಕ್ಕೂ ಹೆಚ್ಚು ವಿತರಕರ ಜಾಲವನ್ನು ಹೊಂದಿದೆ. ಆದ್ರೆ, ಇದೀಗ ಲ್ಯಾಬ್ ಟೆಸ್ಟ್​​ನಲ್ಲಿ  ಬಿಸ್ಲೇರಿ ನೀರಿನ ಸ್ಯಾಂಪಲ್‌ನಲ್ಲಿ ನಿಗದಿತ ಬ್ರೋಮೇಟ್ ಮಿತಿಯ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.

ತ್ತೀಚಗೆ ನೀರಿನ ಘಟಕ ತಪಾಸಣೆ

ಆರೋಗ್ಯ ಸಚಿವ ಯುಟಿ ಖಾದರ್ ಆದೇಶದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗದಿಂದ ಇತ್ತೀಚೆಗೆ ರಾಜ್ಯಾದ್ಯಂತ 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗಿತ್ತು. ಈ ತಪಾಸಣೆಯಲ್ಲಿ 32 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಲವು ಘಟಕಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು, ಲೇಬಲ್‌ನಲ್ಲಿ ತಪ್ಪುಗಳು ಮತ್ತು ಕೀಟ ನಿಯಂತ್ರಣ ಪ್ರಮಾಣಪತ್ರ ಇಲ್ಲದಿರುವುದು ಪತ್ತೆಯಾಗಿತ್ತು.

24 ಘಟಕಗಳಿಗೆ ನೋಟಿಸ್

ಇನ್ನು ತಪಾಸಣೆಯ ಸಂದರ್ಭದಲ್ಲಿ 24 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಸುರಕ್ಷತೆ ನಿಯಮಾವಳಿಗಳನ್ನು ಪಾಲನೆ ಮಾಡದೆ ಇರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿತ್ತು.

ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದಿದ್ದ ಖಾದರ್

ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಜನರ ಆರೋಗ್ಯದ ಜೊತೆ ಆಟವಾಡುವವರು ಎಷ್ಟೇ ದೊಡ್ಡವರಾಗಿರಲಿ, ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇಂತಹ ತಪಾಸಣೆಗಳು ಮುಂದೆಯೂ ನಿರಂತರವಾಗಿ ನಡೆಯಲಿವೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅವರು ಎಚ್ಚರಿಕೆ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us