ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದವಳ ರಕ್ಷಿಸಲು ಹೋದ ಕಾನ್‌ಸ್ಟೆಬಲ್ ಸಾವು, ಮಹಿಳೆ ಬಚಾವ್
ಗಂಡನ ಕಿರುಕುಳದಿಂದ ನೊಂದು ಕಾಲುವೆಗೆ ಹಾರಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದ ಮಹಿಳೆಯರನ್ನು ರಕ್ಷಿಸಲು ಕಾಲುವೆಗೆ ಹಾರಿದ್ದ ಪೊಲೀಸ್ ಕಾನ್‌ಸ್ಟೆಬಲ್ ಪ್ರಾಣ ಕಳೆದುಕೊಂಡಿದ್ದು, ಮಹಿಳೆ ಸುರಕ್ಷಿತವಾಗಿ ಹೊರಬಂದಿದ್ದಾಳೆ. ಈ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಮಹಿಳೆ ಗಂಡನ ಜತೆ ಜಗಳವಾಡಿ ಬಂದು ಹಿಂಡನ್ ಕಾಲುವೆಗೆ ಹಾಕಿದ್ದಾಳೆ, ಕರ್ತವ್ಯ ನಿರತ ಪೊಲೀಸ್ ಕಾನ್‌ಸ್ಟೆಬಲ್ ಅಂಕಿತ್ ತೋಮರ್ ಏನನ್ನೂ ಲೆಕ್ಕಿಸದೆ ಕಾಲುವೆಗೆ ಹಾರಿದ್ದಾರೆ.

ಗಾಜಿಯಾಬಾದ್, ಮೇ 18: ಗಂಡನ ಕಿರುಕುಳದಿಂದ ನೊಂದು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯರನ್ನು ರಕ್ಷಿಸಲು ಕಾಲುವೆಗೆ ಹಾರಿದ್ದ ಪೊಲೀಸ್ ಕಾನ್‌ಸ್ಟೆಬಲ್ ಪ್ರಾಣ ಕಳೆದುಕೊಂಡಿದ್ದು, ಮಹಿಳೆ ಸುರಕ್ಷಿತವಾಗಿ ಹೊರಬಂದಿದ್ದಾಳೆ. ಈ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಮಹಿಳೆ ಗಂಡನ ಜತೆ ಜಗಳವಾಡಿ ಬಂದು ಹಿಂಡನ್ ಕಾಲುವೆಗೆ ಹಾಕಿದ್ದಾಳೆ, ಕರ್ತವ್ಯ ನಿರತ ಪೊಲೀಸ್ ಕಾನ್‌ಸ್ಟೆಬಲ್ ಅಂಕಿತ್ ತೋಮರ್ ಏನನ್ನೂ ಲೆಕ್ಕಿಸದೆ ಕಾಲುವೆಗೆ ಹಾರಿದ್ದಾರೆ.
ವೈಶಾಲಿ ಸೆಕ್ಟರ್ 2 ರ ನಿವಾಸಿಯಾಗಿರುವ ಆರತಿ, ತನ್ನ ಪತಿ ಆದಿತ್ಯ ಜೊತೆಗಿನ ಕೌಟುಂಬಿಕ ಕಲಹದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಆರೋಪಿಸಲಾಗಿದೆ. ತೋಮರ್ ನೀರಿಗೆ ಹಾರಿದ ತಕ್ಷಣ ಅಲ್ಲಿ ಓಡಾಡುತ್ತಿದ್ದ ಜನರ ಪೈಕಿ ಕೆಲವರು ಕೂಡ ಕಾಲುವೆಗೆ ಜಿಗಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಕೂಡಲೇ ತೋಮರ್ ಅವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಮೀಪದಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಸಬ್-ಇನ್ಸ್‌ಪೆಕ್ಟರ್ (ಟಿಎಸ್‌ಐ) ಧರ್ಮೇಂದ್ರ ಮತ್ತು ಕಾನ್‌ಸ್ಟೆಬಲ್ ಅಂಕಿತ್ ತೋಮರ್ ತಕ್ಷಣ ಆರತಿಯನ್ನು ರಕ್ಷಿಸಲು ಕಾಲುವೆಗೆ ಹಾರಿದ್ದರು ಎಂದು ಉಪ ಪೊಲೀಸ್ ಆಯುಕ್ತ (ಟ್ರಾನ್ಸ್ ಹಿಂದನ್) ನಿಮಿಷ್ ಪಾಟೀಲ್ ಹೇಳಿದ್ದಾರೆ. ಆದರೆ ಧರ್ಮೇಂದ್ರ ನೀರಿನ ಹೊರಬರುವಲ್ಲಿ ಯಶಸ್ವಿಯಾದರು ಆದರೆ ತೋಮರ್ ಸಾವನ್ನಪ್ಪಿದ್ದಾರೆ. ನಂತರ ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಮತ್ತಷ್ಟು ಓದಿ: ರಾಮನಗರದಲ್ಲಿ ಅಮಾನುಷ ಕೃತ್ಯ: ಅತ್ಯಾಚಾರ ಎಸಗಿ ಮೂಕ ಬಾಲಕಿ ಕೊಲೆ ಆರೋಪ
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ, ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ತಾಯಿ ಗದರಿಸಿದ್ದರಿಂದ 17 ವರ್ಷದ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಿಟಿಐ ವರದಿ ಮಾಡಿದೆ.
ವರದಿಯ ಪ್ರಕಾರ, ಮೊಬೈಲ್ ಫೋನ್ ಸದಾ ಬಳಸುತ್ತಿರುವುದಕ್ಕೆ ತಾಯಿ ಆಗಾಗ ಗದರಿಸುತ್ತಿದ್ದರು ಹಾಗಾಗಿ ಬಾಲಕಿ ಅಸಮಾಧಾನಗೊಂಡಿದ್ದಳು. ಅವಳು ತನ್ನ ಮನೆಯಿಂದ ಸ್ವಲ್ಪ ದೂರ ಹೋಗಿ ಕಾಲುವೆಯ ಬಳಿ ವಿಷ ಸೇವಿಸಿದ್ದಳು. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾಳೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








