AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ದುರಂತ: 3 ದಿನ ಬಳಿಕ ವಿಜಯ್​ ರೂಪಾನಿ ಗುರುತು ಪತ್ತೆ, ಅಂತ್ಯಕ್ರಿಯೆ ವೇಳಾಪಟ್ಟಿ ಪ್ರಕಟ

ಅಹಮದಾಬಾದ್​ ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ.ಅವರ ಅಂತ್ಯಕ್ರಿಯೆಗೆ ಸರ್ಕಾರ ಸಂಪೂರ್ಣ ವ್ಯವಸ್ಥೆ ಮಾಡಿದೆ. ಜೂನ್ 16 ರಂದು ಅಹಮದಾಬಾದ್ ನಿಂದ ರಾಜ್ ಕೋಟ್ ಗೆ ಪಾರ್ಥಿವ ಶರೀರವನ್ನು ಸಾಗಿಸಲಾಗುವುದು. ಜೂನ್ 16 ರಂದು ಸಾರ್ವಜನಿಕ ದರ್ಶನ ಮತ್ತು ಜೂನ್ 17, 19 ರಂದು ಸಂತಾಪ ಸಭೆಗಳು ನಡೆಯಲಿವೆ. ರಾಜ್ಯಾದ್ಯಂತ ಅವರ ಸಾವಿಗೆ ಸಂತಾಪ ವ್ಯಕ್ತವಾಗುತ್ತಿದೆ.

ವಿಮಾನ ದುರಂತ: 3 ದಿನ ಬಳಿಕ ವಿಜಯ್​ ರೂಪಾನಿ ಗುರುತು ಪತ್ತೆ, ಅಂತ್ಯಕ್ರಿಯೆ ವೇಳಾಪಟ್ಟಿ ಪ್ರಕಟ
ವಿಮಾನ ದುರಂತ, ವಿಜಯ ರೂಪಾನಿ
ವಿವೇಕ ಬಿರಾದಾರ
|

Updated on: Jun 15, 2025 | 6:16 PM

Share

ಅಹಮದಾಬಾದ್​, ಜೂನ್​ 15: ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ (Ahmedabad plane crash) ದುರಂತ ಸಂಭವಿಸಿದ ಮೂರು ದಿನಗಳ ಬಳಿಕ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ (Vijay Rupani) ಅವರು ಗುರುತು ಪತ್ತೆಯಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಪತ್ತೆಯಾದ ಮೃತದೇಹದೊಂದಿಗೆ ಡಿಎನ್​ಎ ಮ್ಯಾಚ್​ ಆಗಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಮಾಜಿ ಸಿಎಂ ವಿಜಯ ರೂಪಾನಿ ಅವರ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಸಕಲ ಸಿದ್ದತೆ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರ ಅಂತ್ಯಕ್ರಿಯೆ ಮತ್ತು ಅಂತ್ಯಕ್ರಿಯೆಗೆ ಅಧಿಕೃತ ಮಾರ್ಗ ಮತ್ತು ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಜೂನ್ 16, ಸೋಮವಾರ – ಅಂತಿಮ ವಿಧಿವಿಧಾನಗಳ ದಿನ

  • ಬೆಳಿಗ್ಗೆ 11:00 ಗಂಟೆಗೆ, ವಿಜಯ್‌ ರೂಪಾನಿ ಅವರ ಪಾರ್ಥಿವ ಶರೀರವನ್ನು ಗಾಂಧಿನಗರದಲ್ಲಿರುವ ಅವರ ನಿವಾಸದಿಂದ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತದೆ.
  • ಬೆಳಿಗ್ಗೆ 11:30 ರ ಹೊತ್ತಿಗೆ, ಪಾರ್ಥಿವ ಶರೀರವನ್ನು ಔಪಚಾರಿಕವಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತದೆ.
  • ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರ ನಡುವೆ, ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತದೆ.
  • ಮಧ್ಯಾಹ್ನ 12:30 ಕ್ಕೆ, ಪಾರ್ಥಿವ ಶರೀರವನ್ನು ಹೊತ್ತ ವಿಮಾನವು ರಾಜ್‌ಕೋಟ್‌ಗೆ ಹೊರಡಲಿದೆ. ವಿಮಾನವು ಮಧ್ಯಾಹ್ನ 2:00 ಗಂಟೆಗೆ ರಾಜ್‌ಕೋಟ್ ವಿಮಾನ ನಿಲ್ದಾಣಕ್ಕೆ ತಲುಪುವ ನಿರೀಕ್ಷೆಯಿದೆ.
  • ಮಧ್ಯಾಹ್ನ 2:00 ರಿಂದ ಸಂಜೆ 4:00 ರವರೆಗೆ, ಪಾರ್ಥೀವ ಶರೀರದ ಮೆರವಣಿಗೆ ನಿಗದಿತ ಮಾರ್ಗಗಳ ಮೂಲಕ ರಾಜ್‌ಕೋಟ್‌ನಲ್ಲಿರುವ ಅವರ ನಿವಾಸದ ಕಡೆಗೆ ಸಾಗಲಿದೆ. ಈ ಮಾರ್ಗದಲ್ಲಿನ ಪ್ರಮುಖ ಸ್ಥಳಗಳಲ್ಲಿ ಗ್ರೀನ್‌ಲ್ಯಾಂಡ್ ಚೌಕ್ಡಿ, ರಾಂಚೋದ್ದಾಸ್ ಬಾಪು ಆಶ್ರಮ, ಕೆಡಿ ಚೌಕ್, ಸಂತ ಕಬೀರ್ ರಸ್ತೆ, ಸರ್ದಾರ್ ಶಾಲೆ, ಪೂಜಿತ್ ರೂಪಾನಿ ಟ್ರಸ್ಟ್, ಭಾವನಗರ ರಸ್ತೆ, ಕೇಸರಿ ಹಿಂದ್ ಸೇತುವೆ ಮತ್ತು ಇತರ ಪ್ರಮುಖ ಜಂಕ್ಷನ್‌ಗಳು ಸೇರಿವೆ.

ಸಂಜೆ 4:00 ರಿಂದ ಸಂಜೆ 5:00 ರವರೆಗೆ – ಸಾರ್ವಜನಿಕ ದರ್ಶನ

ವಿಜಯ್‌ ರೂಪಾನಿ ಅವರ ರಾಜ್‌ಕೋಟ್ ನಿವಾಸ “ಪೂಜಿತ್” ಪ್ರಕಾಶ್ ಸೊಸೈಟಿಯಲ್ಲಿ ನಿರ್ಮಲಾ ಕಾನ್ವೆಂಟ್ ಶಾಲೆಯ ಎದುರಿನ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಈ ಸಮಯದಲ್ಲಿ, ನಾಗರಿಕರಿಗೆ ಅವರ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ.

ಸಂಜೆ 5:00 ರಿಂದ ಸಂಜೆ 6:00 ರವರೆಗೆ – ಮೆರವಣಿಗೆ

ರಾಮನಾಥಪಾರ ಸ್ಮಶಾನಕ್ಕೆ ಮೆರವಣಿಗೆ ಮೂಲಕ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಲಾಗುತ್ತದೆ. ಮೆರವಣಿಗೆಯು ರಾಜ್‌ಕೋಟ್‌ನ ಪ್ರಮುಖ ಮಾರ್ಗಗಳು ಮತ್ತು ಚೌಕ್​ಗಳ ಮೂಲಕ ಹಾದು ಹೋಗುತ್ತದೆ. ನಿರ್ಮಲಾ ಕಾನ್ವೆಂಟ್ ರಸ್ತೆ, ಕೋಟೆಚಾ ಚೌಕ್, ಮಹಿಳಾ ಕಾಲೇಜು ಚೌಕ್, ಆಸ್ಟ್ರಾನ್ ಚೌಕ್, ಯಾಗ್ನಿಕ್ ರಸ್ತೆ, ಮಾಲ್ವಿಯಾ ಚೌಕ್, ಟ್ರೈಕಾನ್ ಬಾಗ್, ಕಾರ್ಪೊರೇಷನ್ ಚೌಕ್, ಬಾಲಾಜಿ ಮಂದಿರ ಚೌಕ್, ರಾಜಶ್ರೀ ಟಾಕೀಸ್ ರಸ್ತೆ ಮತ್ತು ಸ್ವಾಮಿನಾರಾಯಣ ಮಂದಿರ, ಭೂಪೇಂದ್ರ ರಸ್ತೆ ಮೂಲಕ ಹೋಗುತ್ತದೆ.

ಇದನ್ನೂ ಓದಿ
Image
ಅಹಮದಾಬಾದ್ ವಿಮಾನ ದುರಂತ: ಮೃತರ ಸಂಖ್ಯೆ 274ಕ್ಕೆ ಏರಿಕೆ
Image
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
Image
ಅಪಘಾತ ನಡೆದ ಹಾಸ್ಟೆಲ್ ಮೇಲ್ಭಾಗದಲ್ಲಿ ವಿಮಾನದ 1 ಬ್ಲಾಕ್ ಬಾಕ್ಸ್ ಪತ್ತೆ
Image
ಬದುಕುಳಿದ ಏಕೈಕ ಪ್ರಯಾಣಿಕ ಮೋದಿ ಬಳಿ ಹೇಳಿದ್ದೇನು? ಇಲ್ಲಿದೆ ವಿವರ

ಜೂನ್ 17, ಮಂಗಳವಾರ – ರಾಜ್‌ಕೋಟ್‌ನಲ್ಲಿ ಸಂತಾಪ ಸಭೆ ಏರ್ಪಡಿಸಲಾಗಿದೆ.

ಮಧ್ಯಾಹ್ನ 3:00 ರಿಂದ ಸಂಜೆ 6:00 ರವರೆಗೆ ರಾಜ್‌ಕೋಟ್​ನ ರೇಸ್ ಕೋರ್ಸ್ ಮೈದಾನದಲ್ಲಿ ಸಂತಾಪ ಸಭೆ ನಡೆಯಲಿದೆ. ಈ ಸಂತಾಪ ಸಭೆಯಲ್ಲಿ ಗಣ್ಯವ್ಯಕ್ತಿಗಳು ಭಾಗಿಯಾಗುವ ನಿರೀಕ್ಷೆಯಿದೆ.

ಜೂನ್ 19, ಗುರುವಾರ ಗಾಂಧಿನಗರದಲ್ಲಿ ಸಂತಾಪ ಸೂಚಕ ಸಭೆ

ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ ಗಾಂಧಿನಗರದಲ್ಲಿನ ಹೆಲಿಪ್ಯಾಡ್ ಮೈದಾನದ ಪ್ರದರ್ಶನ ಕೇಂದ್ರದ ಸಭಾಂಗಣ ಸಂಖ್ಯೆ 1ರಲ್ಲಿ ನಡೆಯಲಿದೆ. ರಾಜಧಾನಿಯಲ್ಲಿ ಮತ್ತೊಂದು ಅಧಿಕೃತ ಸಂತಾಪ ಸೂಚಕ ಸಭೆ ನಡೆಯಲಿದ್ದು, ಇದರಲ್ಲಿ ರಾಜ್ಯದ ಗಣ್ಯರು ಮತ್ತು ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ತಳಿದುಬಂದಿದೆ.

ಇದನ್ನೂ ಓದಿ: ‘ಮೇಡೇ’ ಎಂದಿದ್ದಷ್ಟೇ ಅಲ್ಲ! ಏರ್ ಇಂಡಿಯಾ ವಿಮಾನ ಪೈಲಟ್ ಎಟಿಸಿಗೆ ಕಳುಹಿಸಿದ್ದ ಕೊನೆಯ ಸಂದೇಶ ಬಯಲು

ಕಾರ್ಯಕ್ರಮದ ಉದ್ದಕ್ಕೂ ಪೊಲೀಸ್ ಭದ್ರತೆ, ಸಂಚಾರ ನಿಯಂತ್ರಣ ಮತ್ತು ಸಾರ್ವಜನಿಕ ಅನುಕೂಲಕ್ಕಾಗಿ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಿರಿಯ ರಾಜಕೀಯ ನಾಯಕರು, ರಾಜ್ಯ ಅಧಿಕಾರಿಗಳು ಮತ್ತು ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವಿಜಯ್‌ ರೂಪಾನಿ ಅವರ ಗೌರವಾನ್ವಿತ ಸಾರ್ವಜನಿಕ ಜೀವನ ಮತ್ತು ಕೊಡುಗೆಗಳನ್ನು ಅತ್ಯಂತ ಗೌರವ ಮತ್ತು ಸುವ್ಯವಸ್ಥೆಯಿಂದ ಗೌರವಿಸಲು ಇಡೀ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ