ಜ್ಞಾನವಾಪಿ ಸಂಕೀರ್ಣದಲ್ಲಿ ವಿಷ್ಣು, ಹನುಮಂತನ ವಿಗ್ರಹಗಳು ಪತ್ತೆ
Gyanvapi Survey: ಜ್ಞಾನವಾಪಿ(Gyanvapi) ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ವಿಷ್ಣು, ಹನುಮಂತನ ವಿಗ್ರಹಗಳು ಲಭ್ಯವಾಗಿವೆ. ಇದನ್ನು ಮೊದಲು ಶಿವನಿಗೆ ಮೀಸಲಾದ ಸ್ಥಳ ಎಂದು ಭಾವಿಸಲಾಗಿತ್ತು, ಇದೀಗ ಎಎಸ್ಐನಿಂದ ಪತ್ತೆಯಾದ ಕಲಾಕೃತಿಗಳಲ್ಲಿ ವಿಷ್ಣು ಹಾಗೂ ಹನುಮಂತನ ಚಿತ್ರವಿದೆ. ಗಮನಾರ್ಹವಾದ ಆವಿಷ್ಕಾರಗಳಲ್ಲಿ ಹನುಮಂತನ ಶಿಲ್ಪದ ಕೆಳಗಿನ ಅರ್ಧ ಭಾಗವು ಒಂದು ಬಂಡೆಯ ಮೇಲೆ ಒಂದು ಕಾಲನ್ನು ಇರಿಸಿದೆ, ಇದು ದೇವತೆಯ ಪ್ರತಿಮಾರೂಪದ ಭಂಗಿಯನ್ನು ಸೂಚಿಸುತ್ತದೆ.
ಜ್ಞಾನವಾಪಿ(Gyanvapi) ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ವಿಷ್ಣು, ಹನುಮಂತನ ವಿಗ್ರಹಗಳು ಲಭ್ಯವಾಗಿವೆ. ಇದನ್ನು ಮೊದಲು ಶಿವನಿಗೆ ಮೀಸಲಾದ ಸ್ಥಳ ಎಂದು ಭಾವಿಸಲಾಗಿತ್ತು, ಇದೀಗ ಎಎಸ್ಐನಿಂದ ಪತ್ತೆಯಾದ ಕಲಾಕೃತಿಗಳಲ್ಲಿ ವಿಷ್ಣು ಹಾಗೂ ಹನುಮಂತನ ಚಿತ್ರವಿದೆ. ಗಮನಾರ್ಹವಾದ ಆವಿಷ್ಕಾರಗಳಲ್ಲಿ ಹನುಮಂತನ ಶಿಲ್ಪದ ಕೆಳಗಿನ ಅರ್ಧ ಭಾಗವು ಒಂದು ಬಂಡೆಯ ಮೇಲೆ ಒಂದು ಕಾಲನ್ನು ಇರಿಸಿದೆ, ಇದು ದೇವತೆಯ ಪ್ರತಿಮಾರೂಪದ ಭಂಗಿಯನ್ನು ಸೂಚಿಸುತ್ತದೆ.
ಜ್ಞಾನವಾಪಿ ಸಂಕೀರ್ಣದಲ್ಲಿ ಜನಾರ್ಧನ,ರುದ್ರ ಹಾಗೂ ವಿಶ್ವೇಶ್ವರನ ಶಾಸನಗಳು ಪತ್ತೆಯಾಗಿವೆ ಎಂದು ಹೇಳಲಾಗಿತ್ತು. ಮಹಾಮುಕ್ತಿ ಮಂಟಪ ವರದಿಯಲ್ಲಿ ಇದಲ್ಲದೆ ಶಿವಲಿಂಗ, ಕೃಷ್ಣ, ಹನುಮಂತರ ಹಾಗೂ ವಿಷ್ಣುವಿನ ಪ್ರತಿಮೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ವರದಿ ಪ್ರಕಾರ, 1669ರ ಸೆಪ್ಟೆಂಬರ್ 2ರಂದು ದೇವಾಲಯ ಕೆಡವಲಾಯಿತು, ಹಿಂದೆ ದೇವಾಲಯವಿದ್ದ ಕಂಬಗಳನ್ನು ಮಸೀದಿಗೆ ಬಳಸಲಾಯಿತು.
ಮಾರ್ಬಲ್ ಸ್ಲ್ಯಾಬ್ ಒಂದರಲ್ಲಿ ರಾಮ್ ಎಂದು ಬರೆಯಲಾಗಿದೆ, ಇದರ ಉದ್ದ 15.5 ಸೆಂಟಿಮೀಟರ್, ಅಗಲ 9 ಸೆಂ.ಮೀ ಮತ್ತು ದಪ್ಪ ಎರಡು ಸೆಂ.ಮೀ ಆಗಿದೆ. ಮುರಿದ ಶಿವಲಿಂಗ ಅಮೃತ ಶಿಲೆಯಿಂದ ಕೆತ್ತಲಾಗಿದೆ. ಇದರ ಉದ್ದ 5 ಸೆಂ.ಮೀ ಇದೆ. ಗದೆ ಪತ್ತೆಯಾಗಿದ್ದು ಅದರ ಕೆಳಭಾಗ ಮುರಿದುಹೋಗಿದೆ.
ಮತ್ತಷ್ಟು ಓದಿ:ಕಾಶಿ ಜ್ಞಾನವಾಪಿ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇತಿಹಾಸ ತಜ್ಞ ಡಾ ಶೆಲ್ವಪಿಳೈ ಅಯ್ಯಂಗಾರ್
ಕಲ್ಲಿನಿಂದ ಮಾಡಿದ ಮಕರವೂ ಪತ್ತೆಯಾಗಿದೆ, ಅದರ ಉದ್ದ 42 ಸೆಂ.ಮೀ, ಎತ್ತರ 24 ಸೆಂ.ಮೀ ಮತ್ತು ಅಗಲ 12 ಸೆಂ.ಮೀ, ಅದರ ಮೈಮೇಲೆ ಮೀನಿನಂತೆ ಕೆತ್ತಿದ ಗುರುತುಗಳಿವೆ. ಟೆರಾಕೋಟದಿಂದ ಮಾಡಿದ ಮಹಿಳೆಯ ಛಿದ್ರವಾದ ಪ್ರತಿಮೆ ಪತ್ತೆಯಾಗಿದೆ. ಮರಳುಗಲ್ಲಿನಿಂದ ಮಾಡಿದ ಆನೆಯೂ ಕೂಡ ಪತ್ತೆಯಾಗಿದೆ.
ಅಮೃತಶಿಲೆಯಿಂದ ಮಾಡಲಾದ ಹನುಮಂತನ ವಿಗ್ರಹ ಪತ್ತೆಯಾಗಿದೆ.. ಇದರ ಉದ್ದ 21.5 ಸೆಂಟಿಮೀಟರ್, ಅಗಲ 16 ಸೆಂಟಿಮೀಟರ್ ಮತ್ತು ಸುತ್ತು ಐದು ಸೆಂಟಿಮೀಟರ್. ವಿಗ್ರಹದಲ್ಲಿ, ಹನುಮಂತನ ಎಡಗಾಲು ಮೊಣಕಾಲಿನ ಮೇಲೆ ಬಾಗುತ್ತದೆ ಮತ್ತು ಬಲಗಾಲು ನೆಲದ ಮೇಲೆ ನಿಂತಿದೆ.
ಕೃಷ್ಣನ ವಿಗ್ರಹವು ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ. ಇದರ ಉದ್ದ 15 ಸೆಂಟಿಮೀಟರ್, ಅಗಲ ಎಂಟು ಸೆಂಟಿಮೀಟರ್ ಮತ್ತು ದಪ್ಪ ಐದು ಸೆಂಟಿಮೀಟರ್. ವಿಗ್ರಹಕ್ಕೆ ತಲೆ ಇಲ್ಲ ಮತ್ತು ಎರಡೂ ಕೈಗಳು ಮುರಿದಿವೆ. ದೇವತೆಗಳ ಶಿಲ್ಪಗಳು, ವಿವಿಧ ಆಯಾಮಗಳ ಕೀಟಗಳು ಮತ್ತು ಇತರೆ ಗೃಹಪಯೋಗಿ ವಸತುಗಳು ಇತ್ಯಾದಿ ಕಲ್ಲಿನ ವಸ್ತುಗಳು ಪತ್ತೆಯಾಗಿವೆ.
ಪಟ್ಟಿ ಮಾಡಲಾದ ಶಿಲ್ಪಗಳಲ್ಲಿ ಶಿವಲಿಂಗವೂ ಒಂದು. ಸ್ತ್ರೀ, ಪುರುಷ ಆಕೃತಿಗಳು, ಇಟ್ಟಿಗೆಗಳು, ಹೆಂಚುಗಳು, ಸ್ಲಿಂಗ್ ಚೆಂಡುಗಳು ಸೇರಿ ವಿವಿಧ ಟೆರಾಕೋಟ ವಸ್ತುಗಳು ಸಮೀಕ್ಷೆಯಲ್ಲಿ ಪತ್ತೆಯಾಗಿವೆ. ಮಸೀದಿಯಲ್ಲಿ ಕೆಲ ನಾಣ್ಯಗಳೂ ಸಿಕ್ಕಿದ್ದು, ಈ ನಾಣ್ಯಗಳು ವಿಭಿನ್ನ ಅವಧಿಗೆ ಸೇರಿದೆ, ಮೂರು ನಾಣಯಗಳು ಪರ್ಷಿಯನ್ ಭಾಷೆಯ ಬರಹ ಹೊಂದಿದ್ದು, ಅವುಗಳನ್ನು ಷಾ ಆಲಂ ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 am, Wed, 31 January 24