AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಅಮೆರಿಕ ಟ್ರೇಡ್ ಡೀಲ್ ಸಲೀಸಾಗಿ ಕುದುರಿದ್ದು ಹೇಗೆ? ಅಜಿತ್ ದೋವಲ್ ಅಮೆರಿಕ ಭೇಟಿಯಲ್ಲಿ ಆಗಿದ್ದೇನು?

Ajit Doval's blunt message to Marco Rubio effected India-US trade deal to become reality: ಡೊನಾಲ್ಡ್ ಟ್ರಂಪ್ ಆಟಾಟೋಪದ ಮಧ್ಯೆ ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಕುದುರುವುದು ಅನುಮಾನ ಇತ್ತು. ಆದರೂ ಟ್ರೇಡ್ ಡೀಲ್ ಏರ್ಪಟ್ಟಿರುವ ವಿಚಾರವನ್ನು ಸ್ವತಃ ಟ್ರಂಪ್ ಅವರೇ ಘೋಷಿಸಿದ್ದಾರೆ. ಈ ಬೆಳವಣಿಗೆಯ ಹಿಂದೆ ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ ಅಜಿತ್ ದೋವಲ್ ಅವರ ಪಾತ್ರವೂ ಇದೆಯಾ?

ಭಾರತ-ಅಮೆರಿಕ ಟ್ರೇಡ್ ಡೀಲ್ ಸಲೀಸಾಗಿ ಕುದುರಿದ್ದು ಹೇಗೆ? ಅಜಿತ್ ದೋವಲ್ ಅಮೆರಿಕ ಭೇಟಿಯಲ್ಲಿ ಆಗಿದ್ದೇನು?
ಅಜಿತ್ ದೋವಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2026 | 1:05 PM

Share

ನವದೆಹಲಿ, ಫೆಬ್ರುವರಿ 5: ಭಾರತದ ವಿಚಾರದಲ್ಲಿ ಉಡಾಫೆಯಿಂದ ವರ್ತಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕೆಲ ದಿನಗಳ ಹಿಂದೆ ಭಾರತದ ಜೊತೆ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ ಎಂದು ಘೋಷಿಸಿದ್ದರು. ಈ ಹಿಂದೆ ಅವರ ಭಾಷೆಯಲ್ಲಿ ಇರುತ್ತಿದ್ದ ಅಹಂಕಾರ, ಉಡಾಫೆಗಳು ಈ ಬಾರಿ ಇರಲಿಲ್ಲ ಎನ್ನುವುದು ಗಮನಾರ್ಹ. ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡುವುದೇ ಇಲ್ಲ ಎನ್ನುವಂತಿದ್ದ ಸ್ಥಿತಿ ರಾತ್ರೋರಾತ್ರಿ ಬದಲಾಗಿ ಹೋಗಿದೆ. ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳುವುದು ಖಚಿತವಾಗಿದೆ.

ಅಮೆರಿಕದ ಈ ಬದಲಾವದ ವರ್ತನೆಯ ಹಿಂದೆ ಅಜಿತ್ ದೋವಲ್ (Ajit Doval) ಇದ್ದಾರೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಅಮೆರಿಕದ ಡಿಫೆನ್ಸ್ ಮಿನಿಸ್ಟರ್​​ರನ್ನು ಭೇಟಿ ಮಾಡಿದ್ದ ಅಜಿತ್ ದೋವಲ್, ನೇರಾನೇರ ಆಡಿದ ಮಾತುಗಳು ಫಲ ನೀಡಿವೆ ಎನ್ನಲಾಗಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ

ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಹಾಗೂ ಚೀನಾ ಮುಖ್ಯಸ್ಥರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಆದ ಅಜಿತ್ ದೋವಲ್ ಅವರು ಅಮೆರಿಕಕ್ಕೆ ತೆರಳಿ, ಅಲ್ಲಿಯ ರಕ್ಷಣಾ ಸಚಿವ ಮಾರ್ಕೊ ರೂಬಿಯೋ ಅವರನ್ನು ಭೇಟಿ ಮಾಡಿದ್ದರು. ಎರಡೂ ದೇಶಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಾತುಕತೆಗಳಿಗೆ ಮತ್ತೆ ತೆರೆದುಕೊಳ್ಳುವಂತೆ ಒಪ್ಪಿಸಲು ಅಜಿತ್ ದೋವಲ್ ಯಶಸ್ವಿಯಾದರೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ.

ಭಾರತವನ್ನು ಬೆದರಿಸುವ ಪ್ರಯತ್ನ ಬೇಡ ಎಂದ ದೋವಲ್

ಆ ಮಾತುಕತೆ ಗೌಪ್ಯ ಸಭೆಯಲ್ಲಿ ನಡೆದಿತ್ತೆಂದು ಹೇಳಲಾಗುತ್ತಿದೆ. ಹೀಗಾಗಿ, ಯಾವುದೇ ಮಾಧ್ಯಮಗಳಲ್ಲೂ ಈ ಭೇಟಿಯ ವೇಳೆ ಆದ ಮಾತುಕತೆ ಬಗ್ಗೆ ವರದಿ ಬಂದಿರಲಿಲ್ಲ. ಮೂಲಗಳು ತಿಳಿಸಿರುವ ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ತಂಡದವರು ಭಾರತವನ್ನು ಹೆದರಿಸಲು ಆಗುವುದಿಲ್ಲ ಎಂದು ಮಾರ್ಕೋ ರೂಬಿಯೋ ಅವರಿಗೆ ಅಜಿತ್ ದೋವಲ್ ಕಡ್ಡಿ ತುಂಡು ಮಾಡಿದಂತೆ ತಿಳಿಸಿದರೆನ್ನಲಾಗಿದೆ.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

ಈ ಹಿಂದೆ ಬೇರೆ ಅಮೆರಿಕನ್ ಆಡಳಿತಗಳನ್ನು ಭಾರತ ನೋಡಿದೆ. ಟ್ರಂಪ್ ಅವರಧಿ ಮುಗಿಯುವವರೆಗೆ ಬೇಕಾದರೆ ಕಾಯಲು ಭಾರತ ಸಿದ್ಧ ಇದೆ ಎಂದು ಮಾರ್ಕ್ ರುಬಿಯೋಗೆ ನೇರಾನೇರ ಹೇಳಿದ್ದ ಅಜಿತ್ ದೋವಲ್, ಅಮೆರಿಕನ್ನರು ಭಾರತದ ಮೇಲೆ ಸಾರ್ವಜನಿಕ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿದರೆ ಸಂಬಂಧಗಳು ಮತ್ತೆ ಬೆಸೆಯಲು ಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದ್ದರಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ದತ್ತಪೀಠದಲ್ಲಿ ಹೊಸ ವಿವಾದ: ಕಲಮೆ ತಯ್ಯಬಾಗೆ ಹಿಂದೂ ಸಂಘಟನೆಗಳ ಆಕ್ರೋಶ
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ!
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಆರಂಭಿಕ ಜೋಡಿ ಕನ್ಫರ್ಮ್
ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ
ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ
ಮಕ್ಕಳಾಗಿಲ್ಲ ಎಂದು ಕೊರಗುತ್ತಿರುವವರಿಗೆ ದೇವಸ್ಥಾನದ ಬಗ್ಗೆ ಹೇಳಿದ ಶೈನ್
ಮಕ್ಕಳಾಗಿಲ್ಲ ಎಂದು ಕೊರಗುತ್ತಿರುವವರಿಗೆ ದೇವಸ್ಥಾನದ ಬಗ್ಗೆ ಹೇಳಿದ ಶೈನ್
ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳು ಭಸ್ಮ
ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: 1 ಕೋಟಿಗೂ ಅಧಿಕ ಮೌಲ್ಯದ ಕಾರುಗಳು ಭಸ್ಮ