AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದಿಯಲು ಹೋಗಿ ಸಿಕ್ಕಿಬಿದ್ದವನಿಂದ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು!

ಬೆಂಗಳೂರಿನಲ್ಲಿ ನಡೆದ ವಿಚಿತ್ರ ಪ್ರಕರಣವೊಂದರಲ್ಲಿ, ಮೊದಲ ಬಾರಿಗೆ ಕಳ್ಳತನಕ್ಕೆ ಹೋಗಿ ಸಿಕ್ಕಿಬಿದ್ದ ವ್ಯಕ್ತಿ ಮನೆ ಮಾಲೀಕರಿಂದ ಹಲ್ಲೆಗೊಳಗಾಗಿದ್ದಾನೆ. ತಾನು ಕೂಡ ಮನೆ ಮಾಲೀಕರ ಮೇಲೆ ಹಲ್ಲೆ ಮಾಡಿದ್ದರೂ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಅವರ ವಿರುದ್ಧವೇ ದೂರು ದಾಖಲಿಸಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ, ಕಳ್ಳತನ ಮತ್ತು ಹಲ್ಲೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕದಿಯಲು ಹೋಗಿ ಸಿಕ್ಕಿಬಿದ್ದವನಿಂದ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು!
ಆರೋಪಿ ಅಸ್ಗರ್​​Image Credit source: Tv9 Kannada
ರಾಚಪ್ಪಾಜಿ ನಾಯ್ಕ್
| Edited By: |

Updated on: Feb 05, 2026 | 12:52 PM

Share

ಬೆಂಗಳೂರು, ಫೆಬ್ರವರಿ 05: ಕಳ್ಳತನ ಮಾಡಲು ಹೋದಾಗ ಅವರನ್ನು ಯಾರಾದ್ರೂ ನೋಡಿದ್ರೆ ಅವರ ಮೇಲೆಯೇ ಈ ಖದೀಮರು ಹಲ್ಲೆ ನಡೆಸಿ ಎಸ್ಕೇಪ್​​ ಆಗೋದನ್ನು ನಾವು ನೋಡಿದ್ದೇವೆ. ಇಲ್ಲವೇ ಸಿಕ್ಕಿಬಿದ್ದು ಜೈಲು ಸೇರಿರುವವರ ಕತೆ ಕೇಳಿದ್ದೇವೆ. ಆದರೆ ಸಿಲಿಕಾನ್​​ ಸಿಟಿ ಬೆಂಗಳೂರಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಫಸ್ಟ್​​ ಟೈಂ ಕಳ್ಳತನಕ್ಕೆ ಹೋದ ವ್ಯಕ್ತಿಯೊಬ್ಬ ಮನೆಯವರ ಬಳಿ ಸಿಕ್ಕಿಬಿದ್ದು ಪೆಟ್ಟು ತಿಂದು ಬಂದಿದ್ದಾನೆ. ಸಾಲದ್ದಕ್ಕೆ ಕದಿಯಲು ಹೋದ ವೇಳೆ ಆ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ಹೌದು, ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ ಅಸ್ಗರ್ ಖಾನ್‌‌ ಎಂಬಾತ ಕೆಟ್ಟ ಚಟಗಳಿಗೆ ದಾಸನಾಗಿದ್ದ. ಹೀಗಾಗಿ ದುಡಿಯುವ ಹಣ ಈತನ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಮತ್ತೊಂದೆಡೆ ಈತನ ಖದೀಮ ಸ್ನೇಹಿತರು ಕಳ್ಳತನ ಮಾಡಿ ಖರ್ಚಿಗೆ ದುಡ್ಡು ಮಾಡಿಕೊಳ್ಳುತ್ತಿದ್ದರು. ಇವರಿಂದಾಗಿ ಪ್ರೇರಿತನಾಗಿದ್ದ ಅಸ್ಗರ್​​ ತಾನೂ ಕಳ್ಳತನ ಮಾಡಿ ಹಣ ಮಾಡಬೇಕೆಂದು ನಿರ್ಧರಿಸಿದ್ದ. ಅದರಂತೆ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕಬ್ಬಿಣ ಕದಿಯಲು ಕಾಂಪೌಂಟ್ ಹಾರಿದ್ದ. ಈ ವೇಳೆ ಇವರನ್ನು ಅಪಾರ್ಟ್​​ಮೆಂಟ್​​ನಲ್ಲಿ ವಾಸವಿದ್ದ ದಂಪತಿ ಗಮನಿಸಿದ್ದು, ಪ್ರಶ್ನೆ ಮಾಡಿದ್ದಾರೆ. ಇದರಿಂದ ಸಿಟ್ಟಾದ ಅಸ್ಗರ್​​ ದಂಪತಿ ಮೇಲೆ ಹಲ್ಲೆ ಮಾಡಿದ್ದಾನೆ. ಜಗಳ ಜೋರಾಗಿದ್ದೇ ತಡ ಅಕ್ಕ ಪಕ್ಕದ ಮನೆಯವರೂ ಸ್ಥಳಕ್ಕೆ ಬಂದಿದ್ದಾರೆ. ಜನ ಸೇರುತ್ತಿರೋದನ್ನು ಕಂಡು ಅಸ್ಗರ್​​ ಆಟೋದಲ್ಲಿ ಸ್ನೇಹಿತರು ಎಸ್ಕೇಪ್​​ ಆಗಿದ್ದರೆ, ಇತ್ತ ಸಿಕ್ಕಿಬಿದ್ದ ಅಸ್ಗರ್​​ಗೆ ಕಳ್ಳತನ ಮಾಡೋಕೆ ಬಂದಿದ್ಯಾ ಎಂದು ಸ್ಥಳೀಯರು ಮರದ ಪೀಸ್​​ನಿಂದ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್, ಇಒ ಹೇಳಿದ್ದೇನು?

ಅಲ್ಲಿಂದ ತಪ್ಪಿಸಕೊಂಡು ಬಂದ ಅಸ್ಗರ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಕಳ್ಳತನ ಮಾಡುವಾಗ ಹಲ್ಲೆ ಮಾಡಿದ್ರು ಎಂದು ಕಂಪ್ಲೇಟ್​​ನಲ್ಲಿ ಈತ ಉಲ್ಲೇಖಿಸಿದ್ದು, ಬಿಯರ್ ಬಾಟಲ್​​ನಿಂದ ಮಹಿಳೆ ಸೇರಿದಂತೆ ಇತರರ ಮೇಲೆ ತಾನು ಹಲ್ಲೆ ಮಾಡಿರುವುದನ್ನು ಕೂಡ ಒಪ್ಪಿಕೊಂಡಿದ್ದಾನೆ. ಸದ್ಯ ಅಸ್ಗರ್​​ನನ್ನು ಅರೆಸ್ಟ್ ಮಾಡಿರುವ ಸಂಪಿಗೆಹಳ್ಳಿ ಪೊಲೀಸರು, ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.