ಹಿಂದೂ ಹಬ್ಬದಲ್ಲಿ ಪಾಲ್ಗೊಂಡಿದ್ದಕ್ಕೆ ಟೀಕೆ, ನಿಂದನೆ: ಕಣ್ಣೀರು ಹಾಕಿದ ನಟಿ ಫಾರಿಯಾ
Actress Instagram: ನಟಿ ಫರಿಯಾ ಅಬ್ದುಲ್ಲಾ ಅಂತೂ ಪ್ರತಿದಿನವೂ ಟೀಕೆ, ನಿಂದನೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಅದ್ಭುತ ನಟಿ, ಡ್ಯಾನ್ಸರ್ ಆಗಿರುವ ಫರಿಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಗ್ಲಾಮರಸ್ ಆಗಿ ಉಡುಗೆಗಳನ್ನು ಧರಿಸಿ ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ ಫರಿಯಾ ಅವರು ಪದೇ ಪದೇ ಟೀಕೆಗೆ ಗುರಿಯಾಗುತ್ತಿರುತ್ತಾರೆ. ವಿಶೇಷವಾಗಿ ಮುಸ್ಲಿಂ ಮಂದಿ ಫರಿಯಾ ಅವರನ್ನು ‘ಕಾಫಿರ್’ ಎಂದು, ಧರ್ಮಕ್ಕೆ ಕಳಂಕ ಎಂದೆಲ್ಲ ಟೀಕೆ ಮಾಡುತ್ತಲೇ ಇರುತ್ತಾರೆ.

ಮುಖ್ಯಾಂಶಗಳು
- ತೆಲುಗಿನ ಜನಪ್ರಿಯ ನಟಿ ಫಾರಿಯಾ ಅದ್ಬುಲ್ಹ
- ಫಾರಿಯಾ ಅದ್ಬುಲ್ಹ ಇನ್ಸ್ಟಾಗ್ರಾಂ ವಿಡಿಯೋನಲ್ಲಿ ಕಣ್ಣೀರು ಹಾಕಿದ್ದಾರೆ.
- ಫಾರಿಯಾ ಅದ್ಬುಲ್ಹ ಅವರು ಕಣ್ಣೀರು ಹಾಕಿರುವುದು ಏಕೆ?
ಸಿನಿಮಾ (Cinema) ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ, ನಿಂದನೆಗಳನ್ನು ಪ್ರತಿದಿನವೂ ಎದುರಿಸುತ್ತಿರುತ್ತಾರೆ. ತೆಲುಗಿನ ಜನಪ್ರಿಯ ನಟಿ ಫಾರಿಯಾ ಅದ್ಬುಲ್ಹ ಅಂತೂ ಪ್ರತಿದಿನವೂ ಟೀಕೆ, ನಿಂದನೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಅದ್ಭುತ ನಟಿ, ಡ್ಯಾನ್ಸರ್ ಆಗಿರುವ ಫಾರಿಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಗ್ಲಾಮರಸ್ ಆಗಿ ಉಡುಗೆಗಳನ್ನು ಧರಿಸಿ ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ ಫರಿಯಾ ಅವರು ಪದೇ ಪದೇ ಟೀಕೆಗೆ ಗುರಿಯಾಗುತ್ತಿರುತ್ತಾರೆ. ವಿಶೇಷವಾಗಿ ಮುಸ್ಲಿಂ ಮಂದಿ ಫಾರಿಯಾ ಅವರನ್ನು ‘ಕಾಫಿರ್’ ಎಂದು, ಧರ್ಮಕ್ಕೆ ಕಳಂಕ ಎಂದೆಲ್ಲ ಟೀಕೆ ಮಾಡುತ್ತಲೇ ಇರುತ್ತಾರೆ.
ಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇರಿಸಿರುವ ಫರಿಯಾ ಇತ್ತೀಚೆಗಷ್ಟೆ ಹಿಂದೂಗಳು ಆಚರಿಸುವ, ತೆಲುಗು ರಾಜ್ಯಗಳಲ್ಲಿ ಬಹಳ ಜನಪ್ರಿಯವಾಗಿರುವ ಬೋನಾಲ ಪಂಡಗ (ಬೋನಾಲ ಹಬ್ಬ)ದಲ್ಲಿ ಭಾಗಿ ಆಗಿದ್ದರು. ಹಿಂದೂ ಹೆಣ್ಣುಮಕ್ಕಳಂತೆ ಕಳಶ ಹೊತ್ತು ನಡೆದಿದ್ದರು. ಬೋನಾಲ ಹಬ್ಬದಲ್ಲಿ ಕಾಣಿಸಿಕೊಳ್ಳುವ ಪೋತಾಲರಾಜುಗಳ ಜೊತೆಗೆ ಸಖತ್ ಆಗಿ ಡ್ಯಾನ್ಸ್ ಸಹ ಮಾಡಿದ್ದರು. ಆದರೆ ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಸ್ಲಿಮರು ನಟಿಯ ವಿರುದ್ಧ ಟೀಕಾಪ್ರಹಾರ ಆರಂಭಿಸಿದ್ದಾರೆ.
ಇದೀಗ ನಟಿ ಫಾರಿಯಾ ಅಬ್ದುಲ್ಲಾ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ತಮಗೆ ಎದುರಾಗುತ್ತಿರುವ ಈ ಟೀಕೆ, ನಿಂದನೆಗಳ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ಆರಂಭದಲ್ಲಿ ನಗುತ್ತಲೇ ಮಾತನಾಡಲು ಆರಂಭಿಸಿದ ಫರಿಯಾ, ‘ನನ್ನ ತಂದೆ ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಆ ಧರ್ಮಕ್ಕೆ ಮತಾಂತರ ಆದರು. ನನ್ನ ತಂದೆ, ಇಸ್ಲಾಂ ಧರ್ಮದಲ್ಲಿರುವ ಎಲ್ಲ ಒಳ್ಳೆಯ ವಿಷಯಗಳನ್ನು ತೋರಿಸಿ ಬೆಳೆಸಿದ್ದಾರೆ. ನಾನೂ ಸಹ ಇಸ್ಲಾಂ ಧರ್ಮದಲ್ಲಿ ಸದಾ ಒಳ್ಳೆಯದನ್ನೇ ನೋಡಿದ್ದೇನೆ, ನೀವೂ ಸಹ ನೋಡಿ ಎಂಬುದು ನನ್ನ ಆಶಯ ಬ್ರೋ’ ಎಂದಿದ್ದಾರೆ ನಟಿ.
ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಯಂದು ನೋಡಬೇಕಾದ ಕನ್ನಡ ಸಿನಿಮಾಗಳಿವು
‘ನಾನು ತಪ್ಪು ಮಾಡುತ್ತಿದ್ದೇನೆ, ನಾನು ‘ಕಾಫಿರ್’ ಎಂದೆಲ್ಲ ಹೇಳುತ್ತಿರುವ ನಿಮಗೆಲ್ಲ ಒಳ್ಳೆಯದಾಗಲಿ ಎಂದೇ ನಾನು ಆಶಿಸುತ್ತೇನೆ’ ಎನ್ನುತ್ತಾ ನಟಿ ಫರಿಯಾಗೆ ದುಃಖ ತಡೆಯಲಾಗಲಿಲ್ಲ, ಅಳುತ್ತಲೇ ಮಾತು ಮುಂದುವರೆಸಿದ ನಟಿ, ‘ನಾನು ಮರ, ಕಲ್ಲು, ಚಿಟ್ಟೆ ಎಲ್ಲದರಲ್ಲೂ ಜೀವವನ್ನೇ ನೋಡುತ್ತೇನೆ. ನಿಮಗೆ ಅದು ಅದ್ಭುತ ಅನಿಸದಿದ್ದರೆ, ನಿಮಗೆ ಅದರಿಂದ ದೇವರಲ್ಲಿ ನಂಬಿಕೆ ಹೆಚ್ಚಾಗುವ ಬದಲಿಗೆ, ದೇವರಿಂದ ದೂರ ಆಗುತ್ತೀರಿ ಎಂದಾದರೆ ನೀವು ತಪ್ಪು ದಾರಿಯಲ್ಲಿ ದೇವರನ್ನು ಹುಡುಕುತ್ತಿದ್ದೀರಿ, ನೀವು ಭೇಟಿ ಆಗುವ ಪ್ರತಿ ವ್ಯಕ್ತಿಯಲ್ಲಿಯೂ ನೀವು ದೇವರನ್ನು ಕಾಣದಿದ್ದರೆ ನೀವು ತಪ್ಪು ಹಾದಿಯಲ್ಲಿದ್ದೀರಿ ಎಂದರ್ಥ’ ಎಂದಿದ್ದಾರೆ ನಟಿ.
‘ನಾನು ಪ್ರೀತಿಗಾಗಿ ಪ್ರಾರ್ಥಿಸುತ್ತೇನೆ, ಒಗ್ಗಟ್ಟಿಗಾಗಿ ಪ್ರಾರ್ಥಿಸುತ್ತೇನೆ. ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ನಾನು ಅದನ್ನು ಮುಂದುವರೆಸುತ್ತೇನೆ. ಏಕೆಂದರೆ ಅದು ನನ್ನ ಕ್ರಾಂತಿ. ನಾನು ಇನ್ನು ಮುಂದೆ ಪ್ರೀತಿಯನ್ನು ಹೆಚ್ಚು-ಹೆಚ್ಚು ಹಂಚುತ್ತೇನೆ. ಈಗ ನನ್ನ ಬಗ್ಗೆ ದ್ವೇಷ ಕಾರುತ್ತಿರುವವರಿಗೂ ಸಹ ನಾನು ಪ್ರೀತಿಯನ್ನೇ ಹಂಚುತ್ತೇನೆ. ಅವರ ಒಳಿತಿಗಾಗಿ ಕೋರುತ್ತೇನೆ’ ಎಂದಿದ್ದಾರೆ.
‘ನನಗೆ ಗೊತ್ತಿದೆ ನನ್ನ ಹೃದಯ ಒಳ್ಳೆಯದು ಎಂದು, ನಾನು ಪ್ರೀತಿಯನ್ನು ಅನುಭವಿಸಿದ್ದೇನೆ. ನಾನು ಒಳ್ಳೆಯತನವನ್ನು ಕಂಡಿದ್ದೇನೆ. ನಾನು ‘ಅಲ್ಹ’ ಪದದ ಅರ್ಥವನ್ನು ತಿಳಿದುಕೊಂಡಿದ್ದೇನೆ. ಅದರ ಅರ್ಥ ಬೆಳಕು. ಎಲ್ಲೆಡೆ, ಎಲ್ಲ ವೇಳೆಯಲ್ಲಿ ಎಲ್ಲವನ್ನೂ ಏಕಗೊಳಿಸಿರುವ ಬೆಳಕು. ಇಷ್ಟು ವಿಶಾಲವಾಗಿರುವುದನ್ನು ನೀವು ಸಂಕುಚಿತ ಹೇಗೆ ಮಾಡಬಲ್ಲಿರಿ’ ಎಂದು ನಟಿ ಫರಿಯಾ ಪ್ರಶ್ನೆ ಮಾಡಿದ್ದಾರೆ.
ಫಾರಿಯಾ ಅದ್ಬುಲ್ಹ ಒಳ್ಳೆಯ ನಟಿ. ತೆಲುಗು ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿ. ‘ಜಾತಿ ರತ್ನಾಲು’ ಸಿನಿಮಾ ಮೂಲಕ ನಟನೆ ಆರಂಭಿಸಿದ ಫರಿಯಾ, ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಮಿಳುನಾಡು ಸಿಎಂ ವಿಜಯ್ ಪುತ್ರ ನಿರ್ದೇಶನ ಮಾಡಿರುವ ಹೊಸ ಸಿನಿಮಾ ‘ಸಿಗ್ಮ’ನಲ್ಲಿಯೂ ಅವರೇ ನಾಯಕಿ. ಫರಿಯಾ ಬಹಳ ಒಳ್ಳೆಯ ಡ್ಯಾನ್ಸರ್ ಸಹ ಹೌದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




