AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ: ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ?

ಬೆಂಗಳೂರು ಮೆಟ್ರೋ ದರ ಮತ್ತೆ 5% ರಷ್ಟು ಏರಿಕೆಯಾಗಲು ಸಿದ್ಧವಾಗಿದೆ. ಕಳೆದ ವರ್ಷದ ಫೆಬ್ರವರಿ 9ರಂದು ಭಾರಿ ದರ ಹೆಚ್ಚಳವಾಗಿ, ಬಳಿಕ ಪ್ರಯಾಣಿಕರ ಆಕ್ರೋಶದಿಂದ ಇಳಿಕೆಯಾಗಿತ್ತು. ಇದೀಗ ಅದೇ ದಿನಾಂಕದಂದು ಮತ್ತೊಮ್ಮೆ ಏರಿಕೆಗೆ ಮೆಟ್ರೋ ನಿಗಮ ಮುಂದಾಗಿದೆ. ಇದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ:  ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ?
ಸಾಂದರ್ಭಿಕ ಚಿತ್ರ Image Credit source: Tv9 kannada
ಕಿರಣ್​ ಸೂರ್ಯ
| Edited By: |

Updated on: Feb 05, 2026 | 12:51 PM

Share

ಬೆಂಗಳೂರು, ಫೆ.5: ಬೆಂಗಳೂರಿನ ನಮ್ಮ ಮೆಟ್ರೋ (Bengaluru Metro) ಪ್ರಯಾಣಿಕರಿಗೆ ದರ ಹೆಚ್ಚಳದ ಶಾಕ್ ನೀಡಲಿದೆ. ಮೆಟ್ರೋ ಟಿಕೆಟ್ ದರವನ್ನು 5% ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಮೆಟ್ರೋ ನಿಗಮವು ಈ ಬಗ್ಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷ ಫೆಬ್ರವರಿ 9 ರಂದು ದಾಖಲೆಯ 101.5% ರಷ್ಟು ದರ ಏರಿಕೆ ಮಾಡಲಾಗಿತ್ತು. ಈ ನಿರ್ಧಾರವು ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ನಂತರ, ಮೆಟ್ರೋ ನಿಗಮವು ದರವನ್ನು ಸುಮಾರು 70% ರಷ್ಟು ಇಳಿಕೆ ಮಾಡಿತ್ತು. ಆದರೆ, ಈಗ ಮತ್ತೊಮ್ಮೆ ಅದೇ ಫೆಬ್ರವರಿ 9 ರಂದು 5% ರಷ್ಟು ದರ ಹೆಚ್ಚಳಕ್ಕೆ ಮೆಟ್ರೋ ನಿಗಮ ಮುಂದಾಗಿದೆ.

ಈ ದರ ಏರಿಕೆಯ ಪ್ರಸ್ತಾವನೆಗೆ ಪ್ರಯಾಣಿಕರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಡೀ ಜೀವನವನ್ನು ತೆರಿಗೆ ಕಟ್ಟಿಕೊಂಡೇ ಬದುಕಬೇಕಾ? ಮಧ್ಯಮ ವರ್ಗದವರು, ಬಡ ವರ್ಗದವರು ಬದುಕೋಕೆ ಆಗೋದಿಲ್ಲವೇ?” ಎಂದು ಲಾಲ್ ಬಾಗ್ ಮೆಟ್ರೋ ಸ್ಟೇಷನ್ ಬಳಿ ಟಿವಿ9 ವರದಿಗಾರರ ಮುಂದೆ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಪ್ರಸ್ತುತ ಪ್ರತಿಯೊಂದು ದಿನಸಿ ವಸ್ತುಗಳ ಬೆಲೆಯೂ ಏರಿಕೆಯಾಗಿರುವ ಸಂದರ್ಭದಲ್ಲಿ ಮೆಟ್ರೋ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಒಂದು ಕಡೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಮತ್ತೊಂದು ಕಡೆ ಅಗತ್ಯ ಸೇವೆಗಳ ಬೆಲೆಗಳನ್ನು ಹೆಚ್ಚಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು ಹೆಚ್ಚಳ?

ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್:

ಮಾರ್ಗ ಇಂದಿನ ದರ ಹೊಸ ದರ
ಆರ್.ವಿ ರೋಡ್-ಬೊಮ್ಮಸಂದ್ರ 60 ರೂ. 63 ರೂ.
ಮೆಜೆಸ್ಟಿಕ್ – ವೈಟ್​​ ಫೀಲ್ಡ್​​ 80 ರೂ. 84 ರೂ.
ಮೆಜೆಸ್ಟಿಕ್ – ಬೊಮ್ಮಸಂದ್ರ 80 ರೂ. 84 ರೂ.
ಮೆಜೆಸ್ಟಿಕ್ – ಚೆಲ್ಲಘಟ್ಟ 60 ರೂ 63 ರೂ.
ವೈಟ್​​ ಫೀಲ್ಡ್ – ಚೆಲ್ಲಘಟ್ಟ 90 ರೂ. 95 ರೂ.
ಸಿಲ್ಕ್​​​ ಇನ್ಸ್ಟಿಟ್ಯೂಟ್ – ಮಾದಾವರ 90 ರೂ. 95 ರೂ.

ಕಳೆದ ಬಾರಿ ದರ ಹೆಚ್ಚಳದಿಂದಾಗಿ ಅನೇಕ ಪ್ರಯಾಣಿಕರು ಮೆಟ್ರೋ ಬಳಸುವುದನ್ನು ನಿಲ್ಲಿಸಿ, ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದರು. ಇದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮತ್ತೆ ಹೆಚ್ಚಾಗಿತ್ತು. ವರದಿಗಳ ಪ್ರಕಾರ, ದೇಶದಲ್ಲೇ ಬೆಂಗಳೂರು ಮೆಟ್ರೋದ ದರ ಅತಿ ಹೆಚ್ಚಿದೆ. ಮೆಟ್ರೋ ನಿಗಮದ ಆಂತರಿಕ ಯೋಜನೆಯ ಪ್ರಕಾರ, ಪ್ರಯಾಣಿಕರು ಈ ಪ್ರಸ್ತಾವಿತ ದರ ಹೆಚ್ಚಳವನ್ನು ವಿರೋಧಿಸದಿದ್ದರೆ ಅದನ್ನು ಮುಂದುವರೆಸುವ ಮತ್ತು ವಿರೋಧಿಸಿದರೆ ನಿಲ್ಲಿಸುವ ಲೆಕ್ಕಾಚಾರವಿದೆ. ಸರ್ಕಾರವೂ ಕೂಡ ಇದೇ ರೀತಿಯ ಸೂಚನೆಯನ್ನು ಮೆಟ್ರೋ ನಿಗಮಕ್ಕೆ ನೀಡಿದೆ ಎನ್ನಲಾಗಿದೆ. ವೇತನ ಕಡಿಮೆ, ಕೆಲಸ ಕಡಿತಗೊಳ್ಳುತ್ತಿರುವ ಇಂತಹ ಸನ್ನಿವೇಶದಲ್ಲಿ ಮತ್ತೆ ಮತ್ತೆ ದರ ಏರಿಸಿದರೆ ಬದುಕುವುದು ಹೇಗೆ ಎಂದು ಪ್ರಯಾಣಿಕರು ಟಿವಿ9 ಕನ್ನಡ ಜತೆಗೆ ಹಂಚಿಕೊಂಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು